ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಚನ್ನರಾಯಪಟ್ಟಣ ತಾಲೂಕಿನ ಎಲ್ಲಾ ಪತ್ರಬರಹಗಾರರು ದಸ್ತಾವೇಜು ಕೆಲಸ ಸ್ಥಗಿತಗೊಳಿಸಿ ಮೌನ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಅವರು ಮಾತಾಡಿ ಸುಮಾರು ವರ್ಷಗಳಿಂದ ದಸ್ತಾವೇಜು ಬರವಣಿಗೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಲಕ್ಷಾಂತರ ಜನರ ಬದುಕನ್ನು ನೂತನ ತಂತ್ರಜ್ಞಾನ ಕಾವೇರಿ-2 ಕಸಿದುಕೊಳ್ಳುತ್ತಿದೆ. ನಾವುಗಳು ನೂತನ ತಂತ್ರಜ್ಞಾನ ಅಳವಡಿಕೆ ಬೇಡ ಎನ್ನುವುದಿಲ್ಲ ಆದರೆ ಪೇಪರ್‌ಲೆಸ್, ಪೇಸ್‌ಲೆಸ್ ನಂತಹ ಮಾದರಿಯನ್ನು ಕೈ ಬಿಟ್ಟು ಯಥಾಸ್ಥಿತಿಯಲ್ಲಿ ನೋಂದಣಿ ಪ್ರಕ್ರಿಯೆ ಮುಂದುವರಿದರೆ,ಎಲ್ಲಾ ಪತ್ರ ಬರಹಗಾರರಿಗೆ ಉದ್ಯೋಗ ನೀಡುವ ಮೂಲಕ ಭದ್ರತೆಯನ್ನ ಒದಗಿಸಿಕೊಡುವುದು ಬಹಳ ಮುಖ್ಯವಾದ ವಿಚಾರವಾಗಿದೆ.
ಕಾವೇರಿ೧, ಕಾವೇರಿ೨, ಕಾವೇರಿ೩ ನಂತಹ ತಂತ್ರಜ್ಞಾನವನ್ನು ಅಳವಡಿಸಿ ಮತ್ತೆ ನಮ್ಮನ್ನು ಇನ್ನಷ್ಟು ನಿರುದ್ಯೋಗಿಗಳಾಗಿ ಮಾಡಬೇಡಿ. ಕಾವೇರಿ೩ ತಂತ್ರಜ್ಞಾನ ಅಳವಡಿಕೆ ಮಾಡಿದ್ದೆ ಆದರೆ ಬಹಳ ವರ್ಷಗಳಿಂದ ಪತ್ರಬರಹಗಾರರಾಗಿ ಕೆಲಸ ನಿರ್ವಹಿಸುತ್ತಿರುವ ನಮ್ಮಗಳಿಗೆ ಬೇರೆ ರಾಜ್ಯಗಳಲ್ಲಿ ನೀಡಿರುವಂತೆ ಪತ್ರಬರಹಗಾರರಿಗೆ ಪ್ರತೇಕ ಐಡಿ ನೀಡಿದ್ದೇ ಆದರೆ ಉದ್ಯೋಗ ಅಭದ್ರತೆಯನ್ನು ನಿಲ್ಲಿಸಬಹುದು ಎಂದರು.ಇದೇ ಸಂದರ್ಭದಲ್ಲಿ ಪತ್ರಬರಹಗಾರರಾದ ಕೇಶವಮೂರ್ತಿ, ಆನಂದ್, ಹರೀಶ್, ಸುಬ್ರಹ್ಮಣ್ಯ, ಗುರುರಾಜ್, ಜಯರಾಂ, ಮಹೇಶ್ ಎಸ್. ಬಿದರೆಕಾವಲು, ಕಿರಣ್ ಇನ್ನೂ ಮುಂತಾದವರು ಹಾಜರಿದ್ದರು.