ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ಹೃದಯ ಭಾಗವಾದ ಹಳೇ ಬಸ್ ನಿಲ್ದಾಣ, ನೆಹರು ಪಾರ್ಕ್‌ನ ಹೈಮಾಸ್ಕ್ ಲೈಟ್ ಕೆಟ್ಟು ಹಲವು ತಿಂಗಳು ಕಳೆದಿದೆ. ಸಾರ್ವಜನಿಕರು ಹಾಗೂ ಪಟ್ಟಣದ ನಾಗರೀಕರು ಕತ್ತಲಲ್ಲೇ ಹಳೇ ಬಸ್ ನಿಲ್ದಾಣ, ನೆಹರು ಪಾರ್ಕ್ ನೋಡುತ್ತಿದ್ದಾರೆ.ಪಟ್ಟಣದ ಹಳೇ ಬಸ್ ನಿಲ್ದಾಣ, ನೆಹರು ಪಾರ್ಕ್ ಹೆಸರಿನಿಂದ ಕೂಡಿದೆ ಆದರೆ ಪುರಸಭೆ ಆಡಳಿತಾಧಿಕಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿ ನಿರ್ಲಕ್ಷ್ಯ ಫಲವಾಗಿ ಪಟ್ಟಣದ ಜನರು ಕತ್ತಲಲ್ಲಿಯೇ ಇದ್ದಾರೆ.ನೆಹರು ಪಾರ್ಕ್ ಸುತ್ತಲೂ ವಾಣಿಜ್ಯ ಮಳಿಗೆಗಳಿವೆ. ಮಧ್ಯ ಭಾಗದಲ್ಲಿ ಪಾರ್ಕ್ ಇದೆ. ಪಾರ್ಕ್ ಒಳಗಡೆಯೇ ಹೈಮಾಸ್ಕ್ ಲೈಟ್ ಗರುಡಗಂಬದಂತೆ ನಿಂತಿದೆ, ಆದರೆ ಬೆಳಕು ಕೊಡಲು ಆಗದೆ ಪುರಸಭೆಗೆ ಶಪಿಸುತ್ತಿದೆ.
ಪುರಸಭೆಯ ಒಟ್ಟು ೨೩ ವಾರ್ಡ್‌ಗಳಲ್ಲಿ ೨೩ ಮಂದಿ ಪುರಸಭೆ ಸದಸ್ಯರು ಇದ್ದಾರೆ.ಆದರೆ ಪುರಸಭೆ ಈಗ ಆಡಳಿತಾಧಿಕಾರಿಗಳ ಕೈಯಲ್ಲಿದೆ ಆಗಂತ ಕೆಟ್ಟು ಹೈಮಾಸ್ಕ್ ಲೈಟ್ ದುರಸ್ಥಿ ಪಡಿಸಲು ಆಗಿಲ್ಲ.ಪುರಸಭೆ ಸದಸ್ಯರೂ ಕೂಡ ಈ ವಿಚಾರದಲ್ಲಿ ಜಾಣ ಮೌನ ವಹಿಸಿದ್ದಾರೆ ಕಾರಣವೂ ತಿಳಿಯುತ್ತಿಲ್ಲ.ಹಳೇ ಬಸ್ ನಿಲ್ದಾಣ, ನೆಹರು ಪಾರ್ಕ್‌ನ ಆವರಣದಲ್ಲಿ ಖಾಸಗಿ ವಾಹನಗಳ ನಿಲುಗಡೆ ತಾಣವಾಗಿದೆ.ಅಲ್ಲದೆ ಖಾಸಗಿ ಬಸ್‌ಗಳು ನಿಲ್ಲುತ್ತವೆ.ಪ್ರಯಾಣಿಕರು ಹಾಗು ಸಾರ್ವಜನಿಕರು ನಿಲ್ಲುವ ತಾಣದಲ್ಲಿ ಬೆಳಕು ಇಲ್ಲದಿರುವುದು ನಾಚಿಕೆ ಗೇಡಿನ ವಿಚಾರವಾಗಿದೆ.
ಪಟ್ಟಣದ ಹೃದಯ ಭಾಗದಲ್ಲಿ ಹೈಮಾಸ್ಕ್ ಲೈಟ್ ಕೆಟ್ಟು ನಿಂತಿರುವುದು ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲ ಕಾರಣ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರುವುದಿಲ್ಲ ಆದರೆ ಪುರಸಭೆ ಸದಸ್ಯರೂ ಪಟ್ಟಣದಲ್ಲೇ ವಾಸವಿದ್ದರೂ ಪಟ್ಟಣದ ಹೃದಯ ಭಾಗದಲ್ಲಿರುವ ಹೈಮಾಸ್ಕ್ ಲೈಟ್ ಉರಿಯದಿರುವುದು ಕಾಣುತ್ತಿಲ್ಲವೇ ಎಂಬ ನಾಗರೀಕರಲ್ಲಿ ಕಾಡುತ್ತಿದೆ.ಗಡಿಯಾರ ಕೂಡ ಕೆಟ್ಟಿದೆ!
ಗುಂಡ್ಲುಪೇಟೆ : ಪಟ್ಟಣದ ಹೃದಯ ಭಾಗವಾದ ಹಳೇ ಬಸ್ ನಿಲ್ದಾಣ, ನೆಹರು ಪಾರ್ಕ್ ನ ಗಡಿಯಾರ ಕೂಡ ಕೆಟ್ಟು ನಿಂತು ಹಲವು ತಿಂಗಳುಗಳೇ ಕಳೆದಿದೆ. ಪುರಸಭೆ ಗಡಿಯಾದ ರಿಪೇರಿ ಮಾಡಿಸುವಷ್ಟು ಪುರುಷೋತ್ತಿಲ್ಲ ಎಂಬಂತೆ ಅಧಿಕಾರಿಗಳು ನಡೆದುಕೊಂಡಿದ್ದಾರೆ ಎಂದು ಪಟ್ಟಣದ ನಿವಾಸಿ ರಾಜು ವ್ಯಂಗವಾಡಿದ್ದಾರೆ.ಪಟ್ಟಣದ ಹಳೇ ಬಸ್ ನಿಲ್ದಾಣ ನೆಹರು ಪಾರ್ಕ್ ನಲ್ಲಿ ಹೈ ಮಾಸ್ಕ್ ಲೈಟ್ ಕೆಟ್ಟಿರುವುದು ನನ್ನ ಗಮನಕ್ಕೆ ಬಂದಿಲ್ಲ.ಕನ್ನಡಪ್ರಭ ನನ್ನ ಗಮನಕ್ಕೆ ತಂದಿದೆ ಸೋಮವಾರ ಕೆಟ್ಟ ಹೈಮಾಸ್ಕ್ ಲೈಟ್ ರಿಪೇರಿ ಮಾಡಿಸುವೆ.ಗಡಿಯಾರ ರಿಪೇರಿಯಾಗಿದೆ. ರಿಪೇರಿಯಾಗದಷ್ಟು ಕೆಟ್ಟಿದೆ.ಆಡಳಿತಾಧಿಕಾರಿಗಳ ಜೊತೆ ಗಡಿಯಾರ ರಿಪೇರಿ ಮಾಡಿಸಬೇಕೋ,ಹೊಸ ಗಡಿಯಾರ ಖರೀದಿಸಬೇಕೋ ಎಂದು ಚರ್ಚಿಸಿ ತೀರ್ಮಾನಿಸುವೆ.
ಕೆ.ಪಿ.ವಸಂತಕುಮಾರಿ,ಪುರಸಭೆ ಮುಖ್ಯಾಧಿಕಾರಿ