ಬಿಡದಿ ಪುರಸಭೆಯಲ್ಲಿ 75.82 ಲಕ್ಷ ಉಳಿತಾಯ ಬಜೆಟ್

KannadaprabhaNewsNetwork |  
Published : Mar 28, 2026, 01:15 AM IST
27ಕೆಆರ್ ಎಂಎನ್ 1.ಜೆಪಿಜಿಬಿಡದಿ ಪುರಸಭೆ ಅಧ್ಯಕ್ಷೆ ಭಾನು ಪ್ರಿಯಾ ಹಾಗೂ ಸದಸ್ಯರು, ಅಧಿಕಾರಿಗಳ ವರ್ಗ ಬಜೆಟ್ ಪ್ರತಿ ಪ್ರದರ್ಶಿಸಿದರು. | Kannada Prabha

ಸಾರಾಂಶ

ರಾಮನಗರ: ಮನೆ ಕಂದಾಯ, ಮಳಿಗೆ ಬಾಡಿಗೆ, ಕಟ್ಟಡ ಪರವಾನಿಗೆ ಶುಲ್ಕ ಹಾಗೂ ಕೇಂದ್ರ - ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಮೂಲಗಳಿಂದ ಹೆಚ್ಚಿನ ಧನ ಸಹಾಯ ನಿರೀಕ್ಷಿಸಿರುವ ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ 2026-27ನೇ ಸಾಲಿನಲ್ಲಿ 75.82 ಲಕ್ಷ ಉಳಿತಾಯ ಬಜೆಟ್ ಅನ್ನು ಶುಕ್ರವಾರ ಮಂಡಿಸಿದರು

ರಾಮನಗರ: ಮನೆ ಕಂದಾಯ, ಮಳಿಗೆ ಬಾಡಿಗೆ, ಕಟ್ಟಡ ಪರವಾನಿಗೆ ಶುಲ್ಕ ಹಾಗೂ ಕೇಂದ್ರ - ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಮೂಲಗಳಿಂದ ಹೆಚ್ಚಿನ ಧನ ಸಹಾಯ ನಿರೀಕ್ಷಿಸಿರುವ ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ 2026-27ನೇ ಸಾಲಿನಲ್ಲಿ 75.82 ಲಕ್ಷ ಉಳಿತಾಯ ಬಜೆಟ್ ಅನ್ನು ಶುಕ್ರವಾರ ಮಂಡಿಸಿದರು.

ಮ್ಯಾಗ್ನೋಲಿಯಾ ರೆಸಾರ್ಟ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಭಾನುಪ್ರಿಯಾ ಪ್ರಸಕ್ತ ಸಾಲಿನಲ್ಲಿ ಒಟ್ಟು ಆರಂಭಿಕ ಶಿಲ್ಕು ಸೇರಿ ಒಟ್ಟು 3675.17 ಲಕ್ಷ ರು. ಆದಾಯ ನಿರೀಕ್ಷಿಸಲಾಗಿದೆ. 3599.35 ಲಕ್ಷ ರು. ವೆಚ್ಚ ತೋರಿಸಲಾಗಿದ್ದು, 75.82 ಲಕ್ಷ ರು. ನಿರೀಕ್ಷಿತ ಉಳಿತಾಯ ಎಂದು ಮಂಡಿಸಿದ ಆಯವ್ಯಯದ ಮೇಲೆ ಸದಸ್ಯರು ಯಾವುದೇ ರೀತಿಯ ಚರ್ಚೆ ನಡೆಸದೆ ಒಪ್ಪಿಗೆ ನೀಡಿದರು.

ಪ್ರಮುಖ ಆದಾಯಗಳು:

ಅದಿಬಾರ ಮುದ್ರಾಂಕ ಶಿಲ್ಕು 25 ಲಕ್ಷ, ನಿರುಪಯುಕ್ತ ವಸ್ತುಗಳ ಮಾರಾಟ 2 ಲಕ್ಷ, ಬ್ಯಾಂಕ್ ಬಡ್ಡಿ 17.50 ಲಕ್ಷ ರು. ವಾಣಿಜ್ಯ ಸಂಕೀರ್ಣಗಳಿಂದ ಬಾಡಿಗೆ 15 ಲಕ್ಷ, ಕಟ್ಟಡಗಳಿಂದ ಬಾಡಿಗೆ - ನೆಲ ಬಾಡಿಗೆ 2 ಲಕ್ಷ, ಜನಗಣತಿ ಅನುದಾನ 5 ಲಕ್ಷ, ಉದ್ದಿಮೆ ಪರವಾನಿಗೆ ಶುಲ್ಕ 60 ಲಕ್ಷ, ಟ್ರೇಡ್ ಲೈಸೆನ್ಸ್ - ಪ್ಲಾಸ್ಟಿಕ್ ಬಳಕೆಗೆ ದಂಡ 25 ಲಕ್ಷ, ಕಟ್ಟಡ ಪರವಾನಗಿ ಕಟ್ಟಡ ನಿಯಂತ್ರಣಕ್ಕೆ ಸಂಬಂಧಿಸಿದ ಶುಲ್ಕ 65 ಲಕ್ಷ, ಘನತ್ಯಾಜ್ಯ ನಿರ್ವಹಣಾ ಶುಲ್ಕ 5 ಲಕ್ಷ ರು. ಆದಾಯ ನಿರೀಕ್ಷಿಸಲಾಗಿದೆ.

ಯುಜಿಡಿ ಸಂಪರ್ಕ 2.50 ಲಕ್ಷ, ಹೊಸ ಬಡಾವಣೆಗಳ ನಿರ್ಮಾಣದಿಂದ ಪರಿವೀಕ್ಷಣಾ ಶುಲ್ಕ 15 ಲಕ್ಷ, ಡೆವಲಪ್ ಮೆಂಟ್ ಚಾರ್ಜಸ್ 2 ಕೋಟಿ , ಮೊಬೈಲ್ ಟವರ್ ಅನುಮತಿ ಶುಲ್ಕ 7.50 ಲಕ್ಷ, ಟೆಂಡರ್ ಫಾರಮ್ ಮಾರಾಟ 2 ಲಕ್ಷ, ರಸ್ತೆ ಅಗೆತ ಮತ್ತು ಪುನಸ್ಥಾಪನೆ ಶುಲ್ಕ 8 ಕೋಟಿ ,ಎಸ್ ಎಫ್ ಸಿ ಅನುದಾನ 12 ಲಕ್ಷ, ನೀರು ಸರಬರಾಜು ಶುಲ್ಕ 1 ಕೋಟಿ 5 ಲಕ್ಷ , ಆಸ್ತಿ ತೆರಿಗೆಯಿಂದ ಆದಾಯ 8 ಕೋಟಿ, ಆಸ್ತಿ ದಾಖಲಾತಿ ನಿರ್ವಹಣಾ ಶುಲ್ಕ 1 ಲಕ್ಷ, ನೀರು ಸರಬರಾಜು ಸಂಪರ್ಕ ಶುಲ್ಕ 10 ಲಕ್ಷ, ಜಾಹಿರಾತು ತೆರಿಗೆ 10 ಲಕ್ಷ ರು. ಆದಾಯ ನಿರೀಕ್ಷೆ ಮಾಡಲಾಗಿದೆ.

ಪ್ರಮುಖ ವೆಚ್ಚಗಳು:

ಬಜೆಟ್ ನ ವೆಚ್ಚದ ಬಾಬ್ತಿನಲ್ಲಿ ಕಾರ್ಮಿಕರ ಕಲ್ಯಾಣ ವೆಚ್ಚ 5 ಲಕ್ಷ, ಹೊರ ಗುತ್ತಿಗೆ ಕಾರ್ಯ ನಿರ್ವಹಣೆ ವೆಚ್ಚ 15 ಲಕ್ಷ, ಲೆಕ್ಕ ಪರಿಶೋಧನಾ ಶುಲ್ಕ 10 ಲಕ್ಷ, ರಸ್ತೆಗಳ ದುರಸ್ತಿ - ನಿರ್ವಹಣೆಗಾಗಿ 35 ಲಕ್ಷ, ಚರಂಡಿಗಳ ದುರಸ್ತಿ - ನಿರ್ವಹಣೆ 25 ಲಕ್ಷ, ಕಟ್ಟಡಗಳ ದುರಸ್ತಿ - ನಿರ್ವಹಣೆಗಾಗಿ 30 ಲಕ್ಷ, ಬೀದಿ ದೀಪ ವಿದ್ಯುತ್ ಶುಲ್ಕ 40 ಲಕ್ಷ,

ಹೊಸ ವಿದ್ಯುತ್ ಕಂಬಗಳ ಅಳವಡಿಕೆಗೆ 10 ಲಕ್ಷ, ಬೀದಿ ದೀಪಗಳ ರಿಪೇರಿ ಮತ್ತು ನಿರ್ವಹಣೆ 30 ಲಕ್ಷ ,

ಹೊರ ಗುತ್ತಿಗೆ ಕಾರ್ಯನಿರ್ವಹಣೆ ವೆಚ್ಚ 50 ಲಕ್ಷ, ಬೃಹತ್ ಚರಂಡಿ ತೆರೆದ ಚರಂಡಿ , ಸೇತುವೆಗಳು ಮತ್ತು ಕಾಸ್ ವೇಸ್ ಗೆ 15 ಲಕ್ಷ ರು.ಮೀಸಲಿಡಲಾಗಿದೆ.

ಗಿಡಿಗಳನ್ನು ಬೆಳೆಸಲು 10 ಲಕ್ಷ, ಐಇಸಿ ಕಾರ್ಯಕ್ರಮಕ್ಕೆ 15 ಲಕ್ಷ, ಬೀದಿ ನಾಯಿಗಳ ಎಬಿಸಿ ಚಿಕಿತ್ಸೆ ಗೆ 45 ಲಕ್ಷ, ಪೌರಕಾರ್ಮಿಕರು - ನೀರು ಸರಬರಾಜುಗಾರರಿಗೆ ಸುರಕ್ಷತಾ ಸಾಮಗ್ರಿ ಖರೀದಿ 10 ಲಕ್ಷ, ಆರೋಗ್ಯ ವಿಮೆಗೆ 25 ಲಕ್ಷ, ಹೊರ ಗುತ್ತಿಗೆ ಕಾರ್ಯನಿರ್ವಹಣೆ ವೆಚ್ಚಗಳು ಸ್ಯಾನಿಟರಿ ಸೂಪರ್ ವೈಸರ್ , ಕ್ಲೀನರ್ಸ್ ಗೆ 30 ಲಕ್ಷ,

ಹೊರ ಗುತ್ತಿಗೆ ಕಾರ್ಮಿಕರ ವೇತನ 50 ಲಕ್ಷ , ಘನತ್ಯಾಜ್ಯ ವಸ್ತುಗಳ ಹೊರಗುತ್ತಿಗೆ ನಿರ್ವಹಣೆಗೆ 45 ಲಕ್ಷ,

ಘನತ್ಯಾಜ್ಯ ವಿಂಗಡಣೆಯ ಸಂಗ್ರಹಣೆಗಾಗಿ ಮನೆ ಮನೆಗೆ ಬಿನ್ಸ್ ಖರೀದಿ 10 ಲಕ್ಷ , ಕುಡಿಯುವ ನೀರಿನ ವಿದ್ಯುತ್ ಶುಲ್ಕ - 3ಕೋಟಿ 8 ಲಕ್ಷ, ಕುಡಿಯುವ ನೀರು ಸಾಮಗ್ರಿ 15 ಲಕ್ಷ, ಟ್ಯಾಂಕರ್ ನೀರು ಸರಬರಾಜಿಗೆ 5 ಲಕ್ಷ,

ನೀರು ಸರಬರಾಜು ಕಾಮಗಾರಿಯಲ್ಲಿ ಮೋಟಾರ್ ಪಂಪು ದುರಸ್ಥಿಗೆ 90 ಲಕ್ಷ , ಯುಜಿಡಿ ರಿಪೇರಿ ನಿರ್ವಹಣೆಗಾಗಿ 30 ಲಕ್ಷ, ಎಲ್ಲ ಸ್ಮಶಾನಗಳ ಶುಚೀರಣ ಮತ್ತು ನಿರ್ವಹಣೆಗಾಗಿ 10 ಲಕ್ಷ ರುಪಾಯಿ ಮೀಸಲಿಡಲಾಗಿದೆ.

ಬಾಕ್ಸ್‌......

ಬಿಡದಿ ಪಟ್ಟಣದ ಸೌಂದರೀಕರಣಗೊಳಿಸಲು ಒತ್ತು

ರಾಮನಗರ: ಪ್ರಮುಖ ರಸ್ತೆಗಳ ಬದಿಗಳಲ್ಲಿ ಗಿಡಗಳನ್ನು ನೆಡುವುದು, ರಸ್ತೆಗಳ ಅಭಿವೃದ್ಧಿ ಹಾಗೂ ಸ್ವಾಗತ ಕಮಾನು ನಿರ್ಮಿಸಿ ಬಿಡದಿ ಪಟ್ಟಣವನ್ನು ಸೌಂದರೀಕರಣಗೊಳಿಸಲು ಪುರಸಭೆ ಅಧ್ಯಕ್ಷೆ ಭಾನು ಪ್ರಿಯಾ ಒಲವು ತೋರಿದ್ದಾರೆ.

ಮ್ಯಾಗ್ನೋಲಿಯಾ ರೆಸಾರ್ಟ್ ನ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಜೆಟ್ ಮಂಡಿಸಿದ ಅಧ್ಯಕ್ಷೆ ಭಾನುಪ್ರಿಯಾ , ರಸ್ತೆ ಬದಿಗಳಲ್ಲಿ ಗಿಡಗಳನ್ನು ನಡೆಲು ಮತ್ತು ಉದ್ಯಾವನಗಳ ನಿರ್ವಹಣೆಗಾಗಿ 10 ಲಕ್ಷ, ಪಾರ್ಕ್ ಗಳ ಅಭಿವೃದ್ಧಿಗಾಗಿ 100 ಲಕ್ಷ , ಪುರಸಭೆಯ ಹೊಸ ಕಟ್ಟಡ, ವಾಣಿಜ್ಯ ಸಂಕೀರ್ಣ, ಬಸ್ ಸ್ಟ್ಯಾಂಡ್ ನಿರ್ಮಾಣಕ್ಕಾಗಿ 400 ಲಕ್ಷ ಸ್ವಾಗತ ಕಮಾನು ಅಳವಡಿಕೆಗೆ 50 ಲಕ್ಷ ರು.ಮೀಸಲಿಡಲಾಗಿದೆ ಎಂದು ತಿಳಿಸಿದರು.

ಯೋಗಶಾಲೆ, ತರಬೇತಿ ಶಾಲೆ, ಅಭಿಲೇಖಾಲಯಕ್ಕಾಗಿ 75 ಲಕ್ಷ, ಶವ ಸಂಸ್ಕಾರ ಸಹಾಯಧನಕ್ಕಾಗಿ 5 ಲಕ್ಷ ,

ಕ್ರೀಡೆ, ಸಾಂಸ್ಕೃತಿಕ , ಸಾಹಿತ್ಯ , ಜಾನಪದ ಮುಂತಾದ ಚಟುವಟಿಕೆಗಳ ಪ್ರೋತ್ಸಾಹಕ್ಕಾಗಿ 25 ಲಕ್ಷ ಮೀಸಲಿರಿಸಲಾಗಿದೆ. ಎಸ್ಸಿ ಎಸ್ಟಿ ಕಲ್ಯಾಣ ಕಾರ್ಯಕ್ರಮಗಳಿಗೆ 25 ಲಕ್ಷ, ಇತರೆ ಬಡಜನರ ಜನಾಂಗದ ಅಭಿವೃದ್ದಿಗಾಗಿ 10 ಲಕ್ಷ, ವಿಶೇಷಚೇತನರ ಕಲ್ಯಾಣ ಕಾರ್ಯಕ್ರಮಗಳಿಗೆ 5 ಲಕ್ಷ ರು. ಮೀಸಲಿಡಲಾಗಿದೆ ಎಂದು ಭಾನುಪ್ರಿಯಾ ಹೇಳಿದರು.

ಪುರಸಭೆ ಉಪಾಧ್ಯಕ್ಷೆ ಆಯಿಷಾ ಖಲೀಲ್ , ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜು, ವಿಪಕ್ಷ ನಾಯಕ ಸಿ.ಉಮೇಶ್ , ಮುಖ್ಯಾಧಿಕಾರಿ ಮೀನಾಕ್ಷಿ ಉಪಸ್ಥಿತರಿದ್ದರು.

27ಕೆಆರ್ ಎಂಎನ್ 1.ಜೆಪಿಜಿ

ಬಿಡದಿ ಪುರಸಭೆ ಅಧ್ಯಕ್ಷೆ ಭಾನು ಪ್ರಿಯಾ ಹಾಗೂ ಸದಸ್ಯರು, ಅಧಿಕಾರಿಗಳ ವರ್ಗ ಬಜೆಟ್ ಪ್ರತಿ ಪ್ರದರ್ಶಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಗಣತಿ 2027ಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ
ವೇಣುಗೋಪಾಲಸ್ವಾಮಿ ದೇಗುಲದಲ್ಲಿ ಪೂಜೆ