ಜಯದೇವಶ್ರೀ ಪ್ರಸಾದ ನಿಲಯಗಳ ನಿರ್ಮಾತೃ

KannadaprabhaNewsNetwork |  
Published : Aug 28, 2024, 12:52 AM IST
ಚಿತ್ರದುರ್ಗ ಮೂರನೇ ಪುಟದ ಮಿಡ್ಲ್  | Kannada Prabha

ಸಾರಾಂಶ

Builder of Jayadevasri Prasad Nilayas

-150ನೇ ಜಯಂತ್ಯುತ್ಸವದಲ್ಲಿ ಡಾ.ಬಸವಕುಮಾರ ಸ್ವಾಮೀಜಿ ಬಣ್ಣನೆ

------

ಕನ್ನಡಪ್ರಭಾರ್ತೆ ಚಿತ್ರದುರ್ಗ

ಶೂನ್ಯ ಪೀಠದ ಮುರುಘಾ ಪರಂಪರೆಯ ಜಯದೇವಶ್ರೀ ಪ್ರಸಾದ ನಿಲಯಗಳ ನಿರ್ಮಾತೃ ಎಂದು ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.

ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ 24ನೆಯ ಪೀಠಾಧ್ಯಕ್ಷ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150ನೇ ಜಯಂತಿ ಮಹೋತ್ಸವಕ್ಕೆ ಮುರುಘಾಮಠದ ಮುರುಗಿ ಶಾಂತವೀರ ಮಹಾಸ್ವಾಮಿಗಳವರ ಕರ್ತೃ ಸನ್ನಿಧಿಯಲ್ಲಿ ಭಾವಚಿತ್ರಕ್ಕೆ ಪುಷ್ಪವೃಷ್ಟಿ ಮಾಡುವುದರ ಚಾಲನೆ ನೀಡಿ ಮಾತನಾಡಿದರು.

ಜಯದೇವ ಮುರುಘಾಶ್ರೀ ಕಾಲದ ಸೇವೆಯು ಬಣ್ಣನೆಗೆ ನಿಲುಕದ್ದು, ಅವರ ಅನುಪಮ ಸೇವೆ ಮಾದರಿ ಎನ್ನುವಷ್ಟರ ಮಟ್ಟಿಗೆ ನಡೆದು ಹೋಗಿದೆ. ಅಂತಹವರ ತ್ಯಾಗವನ್ನು ನಾವು ಸ್ಮರಿಸದೆ ಹೋದರೆ, ಸೇವೆಯ ಮಹತ್ವ ಮುಂದಿನ ಪೀಳಿಗೆಗೆ ಅರಿವಾಗುವುದಿಲ್ಲ. ಪ್ರಸಾದ ನಿಲಯಗಳ ನಿರ್ಮಾತೃಗಳಾಗಿದ್ದ ಅವರು ಬಡ ವಿದ್ಯಾರ್ಥಿಗಳ ಪಾಲಿಗೆ ಭರವಸೆ ಹುಟ್ಟಿಸುವ ಕಾರ್ಯ ಮಾಡಿದ್ದರೆಂದರು.

"ಮಹಾತ್ಮರನ್ನು ನೆನೆವುದೇ ಘನಮುಕ್ತಿ ಪದ ಶಿವಾಧವ " ಎಂದು ಮೈಲಾರ ಬಸವಲಿಂಗ ಶರಣರು ಸೇವೆಯ ಸಾಧಕರನ್ನ ನೆನೆಯುವುದು ಮುಕ್ತಿಗೆ ಸಮ ಎಂದಿದ್ದಾರೆ. ಸಮಾಜದಲ್ಲಿ ಸತ್ಕಾರ್ಯ ಉಳಿಯುತ್ತದೆ. ಅವರು ಸಮಾಜಕ್ಕೆ ಮಾಡಿರುವ ಸೇವೆ ಸದಾ ನಮ್ಮೊಂದಿಗೆ ಆ ಮೂಲಕ ಇದ್ದೇ ಇರುತ್ತದೆ ಎಂದರು.

ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಮಹಾಸ್ವಾಮಿ ಮಾತನಾಡಿ, ಜಯದೇವ ಗುರುಗಳೇ ಈ ನಾಡಿಗೆ ಒಂದು ಕೊಡುಗೆ. ಶ್ರೀಮಠವನ್ನ ಬಾನೆತ್ತರಕ್ಕೆ ನಾಡಿನ ದಶ ದಿಕ್ಕುಗಳಲ್ಲಿ ಮಠ-ಪೀಠ ಸ್ಥಾಪನೆ, ಆರೋಗ್ಯ, ಶಿಕ್ಷಣ, ಅನ್ನ ದಾಸೋಹದ ಮೂಲಕ ಅನನ್ಯ ಸೇವೆ ಮಾಡಿದ್ದಾರೆ. ಇಂದು ಚಿತ್ರದುರ್ಗ ಸೇರಿದಂತೆ ನಾನಾ ಕಡೆ ಅವರ ಘನ ವ್ಯಕ್ತಿತ್ವದ ಸ್ಮರಣೆ ನಡೆಯಲಿದೆ. ಅವರ ಲಿಂಗೈಕ್ಯ ಲೀಲಾ ವಿಶ್ರಾಂತಿ ಸ್ಥಾನ ದಾವಣಗೆರೆಯಲ್ಲೂ ಇಂದು ನಡೆಯಲಿದೆ ಎಂದು ನುಡಿದರು.

ಮುರುಗೇಂದ್ರ ಸ್ವಾಮೀಜಿ, ಅಭಿಮಾನಿ ಭಕ್ತರು, ಎಸ್ ಜೆ ಎಂ ವಿದ್ಯಾಪೀಠದ ನೌಕರರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

----------------

ಪೋಟೋ: ಚಿತ್ರದುರ್ಗ ಮುರುಘಾಮಠದಲ್ಲಿ ಆಯೋಜಿಸಿದ್ದ ಜಯದೇವ ಶ್ರೀಗಳ 150ನೇ ಜಯಂತ್ಯುತ್ಸವದಲ್ಲಿ ಡಾ.ಬಸವಕುಮಾರ ಸ್ವಾಮೀಜಿ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

-------

ಪೋಟೋ ಫೈಲ್ ನೇಮ್- 27 ಸಿಟಿಡಿ6

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!