ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ: ವನಿತಾ

KannadaprabhaNewsNetwork |  
Published : Oct 28, 2025, 12:44 AM IST
ಫೋಟೋ : ೨೭ಕೆಎಂಟಿ_ಒಸಿಟಿ_ಕೆಪಿ೧ : ನೆಲ್ಲಿಕೇರಿಯ ಮಹಾಸತಿ ಸಭಾಭವನದಲ್ಲಿ ಜಿಲ್ಲಾ ಭಂಡಾರಿ ಸಮಾಜೋನ್ನತಿ ಸಂಘದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ವನಿತಾ ದೇಶಭಂಡಾರಿ ಉದ್ಘಾಟಿಸಿದರು. ಮಹಾಬಲ ನಾಯ್ಕ, ಅರುಣ ಮಣಕಿಕರ್, ವಿನಾಯಕ ದೇಶಭಂಡಾರಿ, ಶಂಕರ ದೇಶಭಂಡಾರಿ, ಕೇಶವ ಡಿ. ಪೆಡ್ನೆಕರ್, ವಿ.ಎಂ.ಭಂಡಾರಿ ಹೊನ್ನಾವರ, ಚಿದಾನಂದ ದೀವಗಿ, ಪ್ರೇಮಾನಂದ ನಾಯ್ಕ, ಶ್ರೀಕಾಂತ ದೇಶಭಂಡಾರಿ. ನಾಗರಾಜ ದೇಶಭಂಡಾರಿ ಭಟ್ಕಳ, ಪ್ರವೀಣ ಮಾಂಜ್ರೇಕರ್ ಇತರರು ಇದ್ದರು.  | Kannada Prabha

ಸಾರಾಂಶ

ಸಮಾಜದ ಪ್ರತಿಯೊಬ್ಬರೂ ಶಿಕ್ಷಣ ಪಡೆಯುವುದರ ಮೂಲಕ ಉತ್ತಮ ಸಮಾಜ ನಿರ್ಮಿಸಬಹುದಾಗಿದೆ. ಮಹಿಳಾ ಸಬಲೀಕರಣ ನಮ್ಮ ಸಮಾಜಕ್ಕೆ ಅಗತ್ಯ.

ಉತ್ತರ ಕನ್ನಡ ಜಿಲ್ಲಾ ಭಂಡಾರಿ ಸಮಾಜೋನ್ನತಿ ಸಂಘದ ವಾರ್ಷಿಕ ಸ್ನೇಹ ಸಮ್ಮೇಳನ

ಕನ್ನಡಪ್ರಭ ವಾರ್ತೆ ಕುಮಟಾ

ಸಮಾಜದ ಪ್ರತಿಯೊಬ್ಬರೂ ಶಿಕ್ಷಣ ಪಡೆಯುವುದರ ಮೂಲಕ ಉತ್ತಮ ಸಮಾಜ ನಿರ್ಮಿಸಬಹುದಾಗಿದೆ. ಮಹಿಳಾ ಸಬಲೀಕರಣ ನಮ್ಮ ಸಮಾಜಕ್ಕೆ ಅಗತ್ಯ. ಮಹಿಳೆಯರು ಸರ್ಕಾರ ನೀಡುವ ಸೌಲಭ್ಯಗಳ ಕುರಿತು ಅರಿವು ಹೊಂದಿರಬೇಕು ಎಂದು ಹೊನ್ನಾವರ ಸಿಡಿಪಿಒ ವನಿತಾ ದೇಶಭಂಡಾರಿ ಹೇಳಿದರು.

ಪಟ್ಟಣದ ನೆಲ್ಲಿಕೇರಿಯ ಮಹಾಸತಿ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಉತ್ತರ ಕನ್ನಡ ಜಿಲ್ಲಾ ಭಂಡಾರಿ ಸಮಾಜೋನ್ನತಿ ಸಂಘದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಮುಖ್ಯಅತಿಥಿ ವಾಕರಸಾ ಘಟಕ ವ್ಯವಸ್ಥಾಪಕ ವಿನಾಯಕ ದೇಶಭಂಡಾರಿ ಮಾತನಾಡಿ, ವಾರ್ಷಿಕೋತ್ಸವದ ಮೂಲಕ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವುದರಿಂದ ಅವರ ಭವಿಷ್ಯ ಉಜ್ವಲತೆಗೆ ಪ್ರೇರಣೆಯಾಗಿದೆ. ನಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕತೆ, ಶೃದ್ಧೆ ಮತ್ತು ನಿಷ್ಠೆ ಇದ್ದರೆ ಯಶಸ್ಸು ತನ್ನಿಂದ ತಾನೇ ಲಭಿಸುತ್ತದೆ ಎಂದರು.

ಅತಿಥಿ ಉಡುಪಿ ಜಿಲ್ಲಾ ಚಪ್ಟೇಗಾರ ಸಾರಸ್ವತ ಸಮಾಜದ ಮಾಜಿ ಅಧ್ಯಕ್ಷ ಮಹಾಬಲ ನಾಯ್ಕ, ಸಮಾಜದ ಅಭ್ಯುದಯಕ್ಕೆ ಸ್ವಂತಿಕೆಯ ಅವಶ್ಯಕತೆಯಿದೆ ಎಂದರು.

ಜಿಲ್ಲಾಧ್ಯಕ್ಷ ಅರುಣ ಮಣಕೀಕರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ ದೇಶಭಂಡಾರಿ ಇಳಕಾರ, ಮಾಜಿ ಜಿಲ್ಲಾಧ್ಯಕ್ಷ ಕೇಶವ ಡಿ. ಪೆಡ್ನೆಕರ್, ಕಾರವಾರದ ವಕೀಲ ವಿ.ಎಂ. ಭಂಡಾರಿ ಹೊನ್ನಾವರ,

ಚಿದಾನಂದ ದೀವಗಿ ಶಿರಸಿ, ಪ್ರೇಮಾನಂದ ನಾಯ್ಕ, ಶ್ರೀಕಾಂತ ದೇಶಭಂಡಾರಿ. ನಾಗರಾಜ ದೇಶಭಂಡಾರಿ ಭಟ್ಕಳ, ಪ್ರವೀಣ ಮಾಂಜ್ರೇಕರ್ ಕಾರವಾರ ವೇದಿಕೆಯಲ್ಲಿದ್ದರು.

ಸಮಾಜಕ್ಕಾಗಿ ಶ್ರಮಿಸಿದ ಜಿಲ್ಲೆಯ ವಿವಿಧ ತಾಲೂಕಿನ ಹಿರಿಯರನ್ನು ಸನ್ಮಾನಿಸಲಾಯಿತು. ಕಾರವಾರದಿಂದ ಅರವಿಂದ ಕಲ್ಗುಟ್ಕರ್, ಯಲ್ಲಾಪುರದಿಂದ ಪ್ರೇಮಾನಂದ ನಾಯ್ಕ, ಕುಮಟಾದ ರಮೇಶ ಭಂಡಾರಿ ದೇವರಹಕ್ಕಲ, ಹೊನ್ನಾವರದಿಂದ ದುರ್ಗಪ್ಪ ದೇಶಭಂಡಾರಿ ಸನ್ಮಾನಿಸಲ್ಪಟ್ಟರು.

ಶಿಕ್ಷಣ ಕ್ಷೇತ್ರದಲ್ಲಿ ಪುರಸ್ಕಾರ ಪಡೆದಿರುವ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ರಮೇಶ ಪತ್ರೇಕರ್, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪ್ರೌಢಶಾಲಾ ಶಿಕ್ಷಕ ಕಿಶೋರ ಕಿಂದಳಕರ್ ಸನ್ಮಾನಿಸಲ್ಪಟ್ಟರು. ಇಬ್ಬರು ಅಂಗವಿಕಲರಿಗೆ ಆರೋಗ್ಯ ಸಹಾಯಧನ ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿ ಉತ್ತಮ ಅಂಕಗಳಿಸಿದ್ದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಯಿತು.

ರಕ್ಷಾ ಕಿಂದಳಕರ್ ಪ್ರಾರ್ಥಿಸಿದರು. ಕಾಗಾಲ ಚಿದಾನಂದ ಭಂಡಾರಿ ಸ್ವಾಗತಿಸಿ, ಪಿ.ಟಿ. ದೇಶಭಂಡಾರಿ ವಂದಿಸಿದರು. ಯಶಸ್ವಿ ಅರುಣ ಮಣಕೀಕರ ನಿರೂಪಿಸಿದರು. ಸದಾನಂದ ಮಾಂಜ್ರೇಕರ್, ಪ್ರಭಾಕರ ಮಣಕೀಕರ್, ಜಯಂತ ಭಂಡಾರಿ, ಬಾಬು ಭಂಡಾರಿ ಹಳದೀಪುರ, ಆಶಾ ದೇಶಭಂಡಾರಿ ಇತರರಿದ್ದರು.

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ