ಸ್ವಾತಂತ್ರ್ಯಕ್ಕೆ ಬೆಲೆ ಇಲ್ಲದ ಸ್ಥಿತಿ ನಿರ್ಮಾಣ

KannadaprabhaNewsNetwork |  
Published : May 02, 2025, 12:09 AM IST
೧ಕೆಎಲ್‌ಆರ್-೮ಕೋಲಾರದ ಪಾಲಸಂದ್ರ ಲೇಔಟ್‌ನಲ್ಲಿ ಗುರುವಾರ ಸಿಐಟಿಯುನಿಂದ ಕಾರ್ಮಿಕ ದಿನಾಚರಣೆ ಪ್ರಯುಕ್ತ ಸಿಐಟಿಯು ಜಿಲ್ಲಾ ಖಜಾಂಚಿ ಹೆಚ್.ಬಿ.ಕೃಷ್ಣಪ್ಪ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. | Kannada Prabha

ಸಾರಾಂಶ

ಆಳುವ ವರ್ಗಗಳು ಸರ್ವಾಧಿಕಾರಿ ಆಡಳಿತವನ್ನು ನಡೆಸುತ್ತಿದ್ದು ಬಂಡವಾಳಶಾಹಿ ವ್ಯವಸ್ಥೆಯ ಪರವಾರದ ಕಾನೂನು ಜಾರಿಗೊಳಿಸಿ ಕಾರ್ಮಿಕ ವರ್ಗವನ್ನು ಬೀದಿಗೆ ತಳ್ಳುವ ವಾತಾವರಣ ದೇಶದಲ್ಲಿದೆ. ದೇಶದ ಐಕ್ಯತೆ, ಸಮಾನತೆಗಾಗಿ ನಾವೆಲ್ಲ ಮತ್ತೊಮ್ಮೆ ಒಗ್ಗಟ್ಟಾಗಿ ಶ್ರಮಿಸಬೇಕಾಗಿದೆ ಎಂದು ಸಿಐಟಿಯು ಜಿಲ್ಲಾ ಖಜಾಂಚಿ ಎಚ್.ಬಿ.ಕೃಷ್ಣಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಕೋಲಾರಆಳುವ ವರ್ಗಗಳು ಸರ್ವಾಧಿಕಾರಿ ಆಡಳಿತವನ್ನು ನಡೆಸುತ್ತಿದ್ದು ಬಂಡವಾಳಶಾಹಿ ವ್ಯವಸ್ಥೆಯ ಪರವಾರದ ಕಾನೂನು ಜಾರಿಗೊಳಿಸಿ ಕಾರ್ಮಿಕ ವರ್ಗವನ್ನು ಬೀದಿಗೆ ತಳ್ಳುವ ವಾತಾವರಣ ದೇಶದಲ್ಲಿದೆ. ದೇಶದ ಐಕ್ಯತೆ, ಸಮಾನತೆಗಾಗಿ ನಾವೆಲ್ಲ ಮತ್ತೊಮ್ಮೆ ಒಗ್ಗಟ್ಟಾಗಿ ಶ್ರಮಿಸಬೇಕಾಗಿದೆ ಎಂದು ಸಿಐಟಿಯು ಜಿಲ್ಲಾ ಖಜಾಂಚಿ ಎಚ್.ಬಿ.ಕೃಷ್ಣಪ್ಪ ಹೇಳಿದರು.ನಗರದ ಪಾಲಸಂದ್ರ ಲೇಔಟ್ ನಲ್ಲಿ ಗುರುವಾರ ಸಿಐಟಿಯು ವತಿಯಿಂದ ಕಾರ್ಮಿಕ ದಿನಾಚರಣೆ ಪ್ರಯುಕ್ತ ನಡೆದ ಧ್ವಜಾರೋಹಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೂರಾರು ವರ್ಷಗಳ ಹಿಂದೆ ಕಾರ್ಮಿಕ ವರ್ಗ ಸಂಘಟಿತವಾಗಿರಲಿಲ್ಲ. ಐಕ್ಯ ಹೋರಾಟಗಳು ಬೆಳೆದು ಬಂದಿರಲಿಲ್ಲ. ಸಮಸ್ಯೆ, ಅತೃಪ್ತಿ, ಅಸಮಾಧಾನವಿತ್ತು ಕಾರ್ಮಿಕ ವರ್ಗ, ಜನಸಾಮಾನ್ಯರು, ರೈತಾಪಿ ವರ್ಗದವರು ಎದುರಿಸುವ ಸಮಸ್ಯೆಗಳಿಗೆ ಮೂಲಭೂತವಾದ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿದೆ. ಬಂಡವಳಶಾಹಿ ವ್ಯವಸ್ಥೆಯಿಂದ ಉಲ್ಬಣಗೊಳ್ಳುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕಾರ್ಮಿಕ ವರ್ಗ ಐಕ್ಯ ಹೋರಾಟ ನಡೆಸುತ್ತಾ ಬಂದಿದೆ ಎಂದರು.ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯಕ್ಕೆ ಬೆಲೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮತೀಯ, ಧಾರ್ಮಿಕ ಆಡಳಿತ ವ್ಯವಸ್ಥೆಯನ್ನು ತರಬೇಕೆಂದು ರಾಜಕೀಯ ಪಕ್ಷಗಳು ಪ್ರಯತ್ನ ನಡೆಸುತ್ತಿದೆ. ಎಲ್ಲರಿಗೂ ವಸತಿ, ವಿದ್ಯಾಭ್ಯಾಸ, ಆರೋಗ್ಯ ಕೊಡುವುದು ಮುಖ್ಯವಾಗಬೇಕು. ಸುಳ್ಳನ್ನು ಹೇಳಿ ಮತ್ತೆ ಮತ್ತೆ ಸರಿಪಡಿಸುತ್ತೇವೆ ಎಂದು ಜನರನ್ನು ನಂಬಿಸುವ, ಬಂಡವಾಳಶಾಹಿಗಳ ಹಿಂದೆ ನಿಂತಿರುವ ರಾಜಕೀಯ ಪಕ್ಷಗಳ ನಡೆಯನ್ನು ಕಾರ್ಮಿಕ ವರ್ಗ ಯುವಜನರು ಚೆನ್ನಾಗಿ ಅರಿತುಕೊಂಡಿದ್ದಾರೆ ಎಂದರು.ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎಂ.ವಿಜಯಕೃಷ್ಣ ಮಾತನಾಡಿ, ಬಂಡವಾಳಶಾಹಿ, ಆಳುವ ವರ್ಗದ ಸರ್ವಾಧಿಕಾರಿ ಧೋರಣೆಯಿಂದಾಗಿ ದುಡಿಯುವ ವರ್ಗ, ರೈತರು, ಕೂಲಿ ಕಾರ್ಮಿಕಕರು ಈಗಲೂ ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮೂಲಭೂತ ಪರಿಹಾರಕ್ಕಾಗಿ ಎಲ್ಲ ಸಂಘಟನೆಗಳು ಸಂಘಟಿತರಾಗಿ ಹೋರಾಡಬೇಕಾದ ಅಗತ್ಯವಿದೆ ಮೇ ೨೦ ರಂದು ರಾಷ್ಟ್ರದಾದ್ಯಂತ ನಡೆಯಲಿರುವ ಮುಷ್ಕರದಲ್ಲಿ ಕಾರ್ಮಿಕ ವರ್ಗವು ಪಾಲ್ಗೊಳ್ಳುವ ಮೂಲಕ ಆಳುವ ವರ್ಗದ, ಬಂಡವಾಳ ಶಾಹಿ, ಸಾಮ್ರಾಜ್ಯಶಾಹಿ ಆಡಳಿತದ ವಿರುದ್ಧ ಧ್ವನಿ ಎತ್ತಬೇಕಾಗಿದೆ ಎಂದು ಮನವಿ ಮಾಡಿದರುಕಾರ್ಮಿಕ ಮುಖಂಡರಾದ ಆಶಾ, ಕಲ್ಪನಾ, ರಾಜಮ್ಮ, ಎಂ.ಭೀಮರಾಜ್, ರಾಮಚಂದ್ರಪ್ಪ, ನಾಗರಾಜಪ್ಪ, ಅಂಜಿನಪ್ಪ, ನಾಗೇಂದ್ರ, ನಾರಾಯಣಪ್ಪ, ಬಾಷಾ, ಆರೋಗ್ಯನಾಥನ್, ನಾಗರಾಜ್, ರಾಘವೇಂದ್ರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾದಿಗ ಅಧಿಕಾರಿಗಳು ಜನಾಂಗ ಅಭಿವೃದ್ಧಿ ಚಿಂತಿಸುತ್ತಿಲ್ಲ: ಜಗದೀಶ್
ಸಮೃದ್ಧಿ ಶಿಕ್ಷಣ ಟ್ರಸ್ಟ್ ನಿಂದ ವೃದ್ಧರಿಗೆ ಬೆಡ್ ಶೀಟ್, ಸ್ವೇಟರ್ ವಿತರಣೆ