- ಮೈಸೂರು ವಿವಿ ಎನ್ಎಸ್ಎಸ್ ಇಟಿಐ ಸಂಯೋಜಕ ಪ್ರೊ.ಬಿ. ಚಂದ್ರಶೇಖರ್
ಕನ್ನಡಪ್ರಭ ವಾರ್ತೆ ಮೈಸೂರು
ಸ್ವಾಮಿ ವಿವೇಕಾನಂದರ ಬದುಕು ಹಾಗೂ ಸಂದೇಶವನ್ನು ಅನುಸರಿಸಿದರೆ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಮೈಸೂರು ವಿವಿ ಎನ್ಎಸ್ಎಸ್ ಇಟಿಐ ಸಂಯೋಜಕ ಪ್ರೊ.ಬಿ. ಚಂದ್ರಶೇಖರ್ ತಿಳಿಸಿದರು.ಕುವೆಂಪುನಗರದ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಎನ್ಎಸ್ಎಸ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಹಾಗೂ ಯುವ ಸಪ್ತಾಹ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರು ನಿಸ್ವಾರ್ಥ ಮಾನವೀಯತೆಯ ಸೇವೆಯನ್ನು ಮಾಡಬೇಕು. ಪ್ರತಿಯೊಬ್ಬರು ಗುರಿ ಮತ್ತು ಕನಸನ್ನು ಹೊಂದಿರಬೇಕು. ಆಗ ಮಾತ್ರ ಯಶಸ್ಸನ್ನು ಕಾಣಲು ಸಾಧ್ಯ. ಯಶಸ್ಸು ಕಾಣಲು ಅವಿರತವಾದ ಶ್ರಮವಿರಬೇಕು. ಪ್ರತಿಯೊಬ್ಬರು ಜ್ಞಾನವನ್ನು ಸಂಪಾದಿಸಿ, ಆ ಜ್ಞಾನದಿಂದ ಶ್ರೇಷ್ಠ ಬದುಕನ್ನು ನಿರ್ಮಿಸಿಕೊಳ್ಳಲು ಸಾಧ್ಯ. ಹೀಗಾಗಿ, ಪ್ರತಿಯೊಬ್ಬರು ನಿಮ್ಮನ್ನು ನೀವು ಜಯಿಸಿ, ಅರ್ಥ ಮಾಡಿಕೊಳ್ಳಿ. ಆಗ ಇಡೀ ಜಗತ್ತೆ ನಿಮ್ಮದಾಗುತ್ತದೆ ಎಂದು ಅವರು ಕಿವಿಮಾತು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಕುಬೇರ್ ಪಿ. ಗೌಡ ಮಾತನಾಡಿ, ಸ್ವಾಮಿ ವಿವೇಕಾನಂದರು ಆದರ್ಶ ವ್ಯಕ್ತಿಯಾಗಿದ್ದಾರೆ. ಅವರ ಚಿಂತನೆಗಳನ್ನು ಹಾಗೂ ಸಂದೇಶಗಳನ್ನು ನಾವೆಲ್ಲರು ಅಳವಡಿಸಿಕೊಳ್ಳಬೇಕು ಎಂದರು.
ಕಾಲೇಜಿನ ಅಧೀಕ್ಷಕ ಡಾ.ಎಂ.ಪಿ. ಬಸವರಾಜು, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾ.ಟಿ. ರಮೇಶ ಮೊದಲಾದವರು ಇದ್ದರು.