ಕನ್ನಡಪ್ರಭ ವಾರ್ತೆ ವಿಜಯಪುರ
ಬೆನಕಟ್ಟಿಯ ಹೇಮ ವೇಮನ ಸದ್ಬೋಧನ ಪೀಠ ಹಾಗೂ ನಗರದ ಹಿರಿಯ ವಕೀಲ ಎಚ್.ಬಿ.ಶಿರೋಳ ಕುಟುಂಬದ ಆಶ್ರಯದಲ್ಲಿ ನಗರದ ಪ್ಲೇಸಂಟ್ ಸ್ಟೇ ಹೋಟೆಲ್ ಸಭಾಭವನದಲ್ಲಿ ಜರುಗಿದ ಹೇಮ-ವೇಮನ ಸದ್ಬೋಧನ ಪೀಠದ ವಾರ್ಷಿಕೋತ್ಸವ, ಪ್ರತಿಭಾವಂತ ಬಡ ವಿದ್ಯಾರ್ಥಿಗಳ ದತ್ತು ಸ್ವೀಕಾರ, ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮಳ ಆದರ್ಶ ಬದುಕು ಹಾಗೂ ಮಹಾಯೋಗಿ ವೇಮನರ ತತ್ವ ಚಿಂತನೆಗಳನ್ನು ಮನೆ ಮನಗಳಿಗೆ ತಲುಪಿಸಿ ಸಮಾಜದಲ್ಲಿ ಪರಿವರ್ತನೆ ತರುವ ಉದ್ದೇಶವಿದೆ. ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಪಡೆದು ಅವರ ಕಲಿಕೆಗೆ ನೆರವಾಗುವ ಮೂಲಕ ಹೇಮ-ವೇಮನ ಸದ್ಬೋಧನ ಪೀಠ ಸಮಾಜಕ್ಕೆ ಮಾದರಿಯಾಗಿದೆ. ಪೀಠದ ಕಾರ್ಯಕ್ಕೆ ರಡ್ಡಿ ಸಮಾಜ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು.
ವಿಜಯಪುರ ಹೇಮರಡ್ಡಿ ಮಲ್ಲಮ್ಮ ಸಂಸ್ಥೆಯ ಅಧ್ಯಕ್ಷ ಸುರೇಶ ದೇಸಾಯಿ(ಕಲಕೇರಿ) ಮಾತನಾಡಿ, ಹೇಮ ವೇಮನ ಸದ್ಬೋಧನ ಪೀಠದ ವಿದ್ಯಾರ್ಥಿಗಳ ದತ್ತು ಸ್ವೀಕಾರ ಕಾರ್ಯಕ್ರಮ ಪ್ರಶಂಸನೀಯ. ಬಡ ಮಕ್ಕಳ ಶಿಕ್ಷಣಕ್ಕಾಗಿ ನೆರವಾಗುವ ಈ ಕಾರ್ಯ ಪುಣ್ಯದ ಕೆಲಸ. ಇದರ ಪ್ರೇರಣೆಯಿಂದ ನಮ್ಮ ಸಂಸ್ಥೆಯೂ ವಿದ್ಯಾರ್ಥಿಗಳನ್ನು ದತ್ತು ಪಡೆಯುತ್ತಿದೆ ಎಂದು ತಿಳಿಸಿದರು.ಜೇವರ್ಗಿಯ ಸಿದ್ಧಬಸವ ಕಬೀರಾನಂದ ಸ್ವಾಮಿಗಳು ಮತ್ತು ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ಮಾತನಾಡಿ, ಬಡ ಪ್ರತಿಭಾವಂತ ಮಕ್ಕಳನ್ನು ದತ್ತು ಪಡೆದು ಅವರ ಓದಿಗೆ ನೆರವಾಗುವ ಸದ್ಬೋಧನ ಪೀಠಕ್ಕೆ ಇಡೀ ಸಮಾಜದ ಸಹಕಾರವಿರಲಿ ಎಂದರು.
ಎರೆಹೊಸಳ್ಳಿಯ ವೇಮನ ಸಂಸ್ಥಾನಮಠದ ರಡ್ಡಿ ಗುರುಪೀಠದ ಶ್ರೀ ವೇಮನಾನಂದ ಮಹಾಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬೆನಕಟ್ಟಿಯ ಹೇಮರಡ್ಡಿ ಮಲ್ಲಮ್ಮ ಭಜನಾ ತಂಡದವರು ವೇಮನರ ವಚನ ಪ್ರಸ್ತುತಪಡಿಸಿದರು. ಇಂದಿರಾ ಬಿದರಿ ಸ್ವಾಗತಿಸಿದರು. ಅಜಿತಗೌಡ ಪಾಟೀಲ ನಿರೂಪಿಸಿದರು. ಶ್ರೀನಿವಾಸ ಬೆನಕಟ್ಟಿ ವಂದಿಸಿದರು.
ಕೋಟ್....
- ಬಿ.ಆರ್.ಪೊಲೀಸ್ ಪಾಟೀಲ, ಹಿರಿಯ ಸಾಹಿತಿ