ಬಜೆಟ್‌ನಲ್ಲಿ ಕೋಲಾರಕ್ಕೆ ಬಂಪರ್‌: ಸಿಎಂಗೆ ಅಭಿನಂದನೆ

KannadaprabhaNewsNetwork |  
Published : Mar 11, 2025, 12:49 AM IST
ಶಿರ್ಷಿಕೆ-೧೦ ಕನ್ನಡ ಪ್ರಭವಾರ್ತೆ,ಮಾಲೂರು,ಮಾ.೧.-ಮಾಲೂರು ಪಟ್ಟಣದ ಕಾಂಗ್ರೆಸ್ ಕಚೇರಿಯ ಸಭಾಂಗಣದಲ್ಲಿ ಶಾಸಕ ಕೆ.ವೈ.ನಂಜೇಗೌಡ ಸುದ್ದಿಗಾರರೊಂದಿಗೆ ಮಾತನಾಡಿದರು.  ಮಾಜಿ ಶಾಸಕ ಎ.ನಾಗರಾಜ್ ಇನ್ನಿತರರು ಹಾಜರಿದ್ದರು. | Kannada Prabha

ಸಾರಾಂಶ

ಬಜೆಟ್‌ನಲ್ಲಿ ಜಿಲ್ಲೆಗೆ ವೈದ್ಯಕೀಯ ಕಾಲೇಜು, ಸಾರ್ವಜನಿಕ ಆಸ್ವತ್ರೆ ನವೀಕರಣ, ದೇವನಹಳ್ಳಿ, ವಿಜಯಪುರ, ಎಚ್.ಕ್ರಾಸ್, ವೇಮಗಲ್, ಮಾಲೂರು, ತಮಿಳುನಾಡು ಗಡಿಯವರೆಗೂ ೪ ಪಥದ ರಸ್ತೆ ನಿರ್ಮಾಣ, ಶಿವಾರಪಟ್ಟಣದಲ್ಲಿ ಇಂಡಸ್ಟ್ರೀಯಲ್ ಪಾರ್ಕ್, ನರಸಾಪುರದಲ್ಲಿ ಮಹಿಳೆಯರಿಗೆ ವಸತಿ ನಿಲಯ, ಕೆಜಿಎಫ್ ಸಮೀಪ ಭಾರತೀಯ ಮೀಸಲು ಪೊಲೀಸ್ ಪಡೆ ಸ್ಥಾಪಿಸಲು ೪೦ ಕೋಟಿ ಅನುದಾನ ಘೋಷಣೆ.

ಕನ್ನಡಪ್ರಭ ವಾರ್ತೆ ಮಾಲೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025- 26ನೇ ಸಾಲಿನ ಬಜೆಟ್‌ನಲ್ಲಿ ಕೋಲಾರ ಜಿಲ್ಲೆಗೆ ಹೆಚ್ಚಿನ ಒತ್ತನ್ನು ನೀಡುವುದರ ಜತೆಗೆ ೮ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಮೂರು ಯೋಜನೆ ಮಾಲೂರು ತಾಲೂಕಿಗೆ ಸಂಬಂಧಿಸಿದ್ದಾಗಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಅವರು ಪಟ್ಟಣದ ಕಾಂಗ್ರೆಸ್‌ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ಬಜೆಟ್‌ನಲ್ಲಿ ಕೋಲಾರ ಜಿಲ್ಲೆಗೆ ಬಂಪರ್ ಯೋಜನೆಗಳನ್ನು ಪ್ರಕಟಿಸುವುದರ ಮೂಲಕ ಅನುಕೂಲ ಕಲ್ಪಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದಿಸಿದರು.

ಜಿಲ್ಲೆಗೆ 8 ಯೋಜನೆ ಮಂಜೂರು

ಮುಖ್ಯವಾಗಿ ಜಿಲ್ಲೆಯ ಜನತೆಯ ಬಹುದಿನಗಳ ಬೇಡಿಕೆಯಾದ ವೈದ್ಯಕೀಯ ಕಾಲೇಜು ಸ್ಥಾಪನೆ, ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ವತ್ರೆಯನ್ನು ನವೀಕರಣ ಮಾಡಿ ಮೇಲ್ಥರ್ಜೇಗೆ ಏರಿಸಲು ಅನುದಾನ, ೧೧೯೦ ಕೋಟಿ ವೆಚ್ಚದಲ್ಲಿ ದೇವನಹಳ್ಳಿ, ವಿಜಯಪುರ, ಎಚ್.ಕ್ರಾಸ್, ವೇಮಗಲ್, ಮಾಲೂರು, ತಮಿಳುನಾಡು ಗಡಿಯವರೆಗೂ ೪ ಪಥದ ರಸ್ತೆ ನಿರ್ಮಾಣ, ಶಿವಾರಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ ಇಂಡಸ್ಟ್ರೀಯಲ್ ಪಾರ್ಕ್, ನರಸಾಪುರದಲ್ಲಿ ಮಹಿಳೆಯರಿಗೆ ವಸತಿ ನಿಲಯ, ಕೆಜಿಎಫ್ ಸಮೀಪ ಭಾರತೀಯ ಮೀಸಲು ಪೊಲೀಸ್ ಪಡೆ ಸ್ಥಾಪಿಸಲು ೪೦ ಕೋಟಿ ಅನುದಾನ, ಕೋಲಾರದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆಗೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ವಿವರಿಸಿದರು.

ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ

ಮಾಜಿ ಶಾಸಕ ಎ.ನಾಗರಾಜ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ದೇಶದ ಜಿಡಿಪಿ ೬.೦೪ ರಷ್ಟು ಇದ್ದರೆ ರಾಜ್ಯದಲ್ಲಿ ೭.೦೨ ರಷ್ಟಿದೆ. ತಲಾ ಆದಾಯ ಕೇಂದ್ರದ್ದು ೨ ಲಕ್ಷ ಇದ್ದರೆ ನಮ್ಮದು ೩ ಲಕ್ಷಕ್ಕೂ ಹೆಚ್ಚಿದೆ. ಇದನ್ನು ಸಮತೋಲನ ಮಾಡಿದರೆ ಮುಖ್ಯಮಂತ್ರಿಗಳು ಸಮಾಜದ ಎಲ್ಲಾ ಸಮುದಾಯಗಳು ಪ್ರಗತಿ ಹೊಂದಲು ಸಹಕಾರಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಲಕ್ಷ್ಮೀನಾರಾಯಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿಜಯ ನರಸಿಂಹ, ಪುರಸಭೆ ಅಧ್ಯಕ್ಷೆ ಕೋಮಲ ಕೋಳಿ ನಾರಾಯಣ್, ಕೃಷಿಕ ಸಮಾಜದ ಅಧ್ಯಕ್ಷ ಹನುಮಂತಪ್ಪ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ನಯಿಂ ಉಲ್ಲಾ, ಎ.ರಾಜಪ್ಪ, ಎಂ.ವಿ.ಹನುಮಂತಯ್ಯ, ಸಂತೆಹಳ್ಳಿ ನಾರಾಯಣ ಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ವಿ.ಮುನಿರಾಜ್, ಕೆ.ನಾರಾಯಣ ಗೌಡ, ಪುರಸಭೆ ಮಾಜಿ ಸದಸ್ಯರಾದ ಹನುಮಂತ ರೆಡ್ಡಿ, ಎ.ಅಶ್ವಥ್ ರೆಡ್ಡಿ, ವೆಂಕಟೇಶ್ (ಬುಲೆಟ್), ಶಬ್ಬೀರ್ ಇನ್ನಿತರರು ಹಾಜರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...