ಗುಣಮಟ್ಟದ ಉತ್ಪನ್ನ ಉತ್ಪಾದನೆಯಿಂದ ಮಾರುಕಟ್ಟೆಯಲ್ಲಿ ಉಳಿವು

KannadaprabhaNewsNetwork |  
Published : Sep 26, 2024, 10:23 AM IST
6 | Kannada Prabha

ಸಾರಾಂಶ

ಯಾವುದೇ ಒಂದು ಸಂಸ್ಥೆಯು ತನ್ನ ಗ್ರಾಹಕರಿಗಾಗಿ ಉತ್ತಮ ಗುಣಮಟ್ಟವುಳ್ಳ ಪದಾರ್ಥವನ್ನು ಉತ್ಪಾದಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರುಜನರು ಮಾರುಕಟ್ಟೆಯಲ್ಲಿ ಆರೋಗ್ಯಕರ ಉತ್ಪನ್ನ ಖರೀದಿಸಲು ಬಯಸುತ್ತಾರೆ. ಹಾಗಾಗಿ ಉತ್ಪಾದಕರು ಅಥವಾ ಉತ್ಪಾದಕ ಸಂಸ್ಥೆಗಳು ಉತ್ಪನ್ನಗಳನ್ನು ತಯಾರಿಸುವಾಗ ಗುಣಮಟ್ಟ ಕಾಯ್ದುಕೊಂಡರೆ ಮಾರುಕಟ್ಟೆಯಲ್ಲಿ ದೀರ್ಘಾವಧಿವರೆಗೆ ಉಳಿಯಬಹುದು ಎಂದು ಬಿ.ಐ.ಎಸ್ ವಿಜ್ಞಾನಿ ನಾಗಮಣಿ ಹೇಳಿದರು.ಭಾರತೀಯ ಮಾನಕ ಬ್ಯುರೋ ಹಾಗೂ ಕಾಸಿಯ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಉತ್ತಮ ಪ್ರಪಂಚಕ್ಕಾಗಿ ದೂರ ದೃಷ್ಟಿಯ ಸಿದ್ಧತೆ- ಎಸ್ ಡಿಜಿ9 ಕೃತಕ ಬುದ್ಧಿಮತ್ತೆಯು ಮೂಲಕ ಉದ್ಯಮ, ನಾವೀನ್ಯತೆ ಮತ್ತು ಮೂಲ ಸೌಕರ್ಯ ಸಾಧಿಸುವುದು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಸುಸ್ಥಿರ ಅಭಿವೃದ್ಧಿ ಎನ್ನುವುದು ಉತ್ಪನ್ನದ ಗುಣಮಟ್ಟವನ್ನು ಒಳಗೊಂಡಿದೆ. ಯಾವುದೇ ಒಂದು ಸಂಸ್ಥೆಯು ತನ್ನ ಗ್ರಾಹಕರಿಗಾಗಿ ಉತ್ತಮ ಗುಣಮಟ್ಟವುಳ್ಳ ಪದಾರ್ಥವನ್ನು ಉತ್ಪಾದಿಸಬೇಕು. ಆಗ ಮಾತ್ರ ಆ ಸಂಸ್ಥೆಯು ಮಾರುಕಟ್ಟೆಯಲ್ಲಿ ಉಳಿಯಲು ಸಾಧ್ಯ ಎಂದು ಅವರು ಹೇಳಿದರು.ಪ್ರಪಂಚದಲ್ಲಿಯೇ ಭಾರತ ಅತೀ ಹೆಚ್ಚು ಗ್ರಾಹಕರನ್ನು ಹೊಂದಿದ್ದು, ಇಲ್ಲಿ ಯಾವುದೇ ಸಂಸ್ಥೆ ಅಥವಾ ಕೈಗಾರಿಕೆ ಪ್ರಾರಂಭಿಸಿದರು. ಅದು ಪ್ರತ್ಯೇಕ ಗ್ರಾಹಕಾರನ್ನು ಪಡೆದುಕೊಳ್ಳುತ್ತದೆ. ಹಾಗಾಗಿಯೇ ಇಂದು ವಿದೇಶಿ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಮುಂದೆ ಬರುತ್ತವೆ. ಹೀಗೆಂದ ಮಾತ್ರಕ್ಕೆ ಹೂಡಿಕೆ ಮಾಡಿದ ಎಲ್ಲಾ ಕಂಪನಿಗಳು ವ್ಯಾಪಾರದಲ್ಲಿ ಯಶಸ್ವಿ ಪಡೆಯುವುದಿಲ್ಲ. ಯಾವ ಕಂಪನಿಯೂ ಉತ್ತಮ ಗುಣಮಟ್ಟದ ಉತ್ಪನ್ನವನ್ನು ಸಾರ್ವಜನಿಕರಿಗೆ ಹಾಗೂ ಗ್ರಾಹಕರಿಗೆ ನೀಡುತ್ತದೆಯೋ ಅಂತಹ ಸಂಸ್ಥೆ ಯಶಸ್ವಿ ಪಡೆಯುತ್ತವೆ. ಇಂತಹ ಸಂಸ್ಥೆಗಳು ದೇಶದ ಸುಸ್ಥಿರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇಂದು ಪ್ರಪಂಚದಾದ್ಯಂತ ಅತಿ ಹೆಚ್ಚು ಮಾರಾಟವಾಗುತ್ತಿರುವ ಬ್ರಾಂಡ್ ಗಳು ತಮ್ಮ ಉತ್ಪನ್ನದ ಗುಣಮಟ್ಟವನ್ನು ಕಾಯ್ದಿರಿಸಿಕೊಂಡಿರುವುದು ಇದಕ್ಕೆ ಉದಾಹರಣೆ ಎಂದರು.ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಕೆ. ಶಿವಲಿಂಗಯ್ಯ ಮಾತನಾಡಿ, ಹೆಸರೇ ಹೇಳುವಂತೆ ಸುಸ್ಥಿರ ಅಭಿವೃದ್ಧಿ ಎಂದರೆ ಯಾವುದೇ ಪದಾರ್ಥವಾದರೂ ದೀರ್ಘಾವಧಿವರೆಗೆ ಬಳಕೆಯಲ್ಲಿ ಇರುವುದು. ಇಂದು ಯಾವ ಸಂಸ್ಥೆಯು ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದನೆ ಮಾಡುತ್ತವೆಯೋ ಅಂತಹ ಸಂಸ್ಥೆಗಳು ಮಾತ್ರ ಗ್ರಾಹಕರನ್ನು ತಲುಪುತ್ತವೆ ಹಾಗೂ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಕಾಲ ಉಳಿಯುತ್ತದೆ ಎಂದು ಅವರು ಹೇಳಿದರು.ಪ್ರತಿಯೊಬ್ಬ ಮನುಷ್ಯನಿಗೂ ಆರೋಗ್ಯವೇ ಮುಖ್ಯ. ತಾನು ಸೇವಿಸುವ, ತೊಡುವ ಮತ್ತು ಜೀವಿಸುವ ಸ್ಥಳ ಪ್ರತಿಯೊಂದು ಗುಣಮಟ್ಟದಲ್ಲಿ ಇರಬೇಕೆಂದು ಭಾವಿಸುತ್ತಾನೆ. ಹೀಗಾಗಿ ಸಂಸ್ಥೆಗಳು ಗ್ರಾಹಕರ ಮಿಡಿತವನ್ನು ಅರಿತು ಒಳ್ಳೆಯ ಉತ್ಪನ್ನಗಳನ್ನು ಮಾರುಕಟ್ಟೆಗೆ ನೀಡಬೇಕು ಎಂದರು.ಬಿ.ಐಎಸ್ ನಿರ್ದೇಶಕ ನರೇಂದ್ರ ರೆಡ್ಡಿ ಬೀಸು, ಕಾಸಿಯಾ ಸಂಸ್ಥೆ ಅಧ್ಯಕ್ಷ ಎಂ.ಜಿ. ರಾಜಗೋಪಾಲ್, ವಿಜ್ಞಾನಿ ಎಚ್.ಎನ್. ಗಿರೀಶ್, ಉಪಾಧ್ಯಕ್ಷ ಬಿ.ಆರ್. ಗಣೇಶ್ ರಾವ್, ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್. ಸಾಗರ್, ಜಂಟಿ ಕಾರ್ಯದರ್ಶಿ ಎನ್. ಸತೀಶ್, ಮೊಫುಸಿಲ್ ದೇವಾಪ್ಟ್ ಕಮಿಟಿ ಅಧ್ಯಕ್ಷ ಸಿ.ಎಂ. ಸುಬ್ರಮಣಿಯನ್ ಮೊದಲಾದ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಅಪಘಾತ ಸೈಕಲ್‌ ಸವಾರ ಸಾವು
ವಿದ್ಯುತ್‌ ತೊಂದರೆ ಸರಿಪಡಿಸದಿದ್ದರೇ ಅಹೋರಾತ್ರಿ ಧರಣಿ