ರಾವಣನ ಪ್ರತಿಕೃತಿ, ಜಿರಳೆ ಚಿತ್ರ ದಹನ

KannadaprabhaNewsNetwork |  
Published : Oct 22, 2026, 01:45 AM IST
ಚಿತ್ರ 21ಬಿಡಿಆರ್‌10ಬೀದರ್‌ನ ಶ್ರೀ ರಾಮಲೀಲಾ ಉತ್ಸವ ಸಮಿತಿಯ ವತಿಯಿಂದ ವಿಜಯದಶಮಿ ಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ 20ನೇ ವರ್ಷದ ಸಂಭ್ರಮಾಚರಣೆ ಹಾಗೂ ರಾಮಲೀಲಾ ಉತ್ಸವದ ನಿಮಿತ್ತ 46 ಅಡಿ ಎತ್ತರದ ರಾವಣನ ಪ್ರತಿಕೃತಿ ದಹಿಸಲಾಯಿತು.(ಚಿತ್ರ - ಗೋಪಿಚಂದ ತಾಂದಳೆ, ಬೀದರ್‌) | Kannada Prabha

ಸಾರಾಂಶ

ಶ್ರೀ ರಾಮಲೀಲಾ ಉತ್ಸವ ಸಮಿತಿಯ ವತಿಯಿಂದ ವಿಜಯದಶಮಿ ಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ 20ನೇ ವರ್ಷದ ಸಂಭ್ರಮಾಚರಣೆ ಹಾಗೂ ರಾಮಲೀಲಾ ಉತ್ಸವವು ನಗರದ ಬಿಸಿಎಂ ಹಾಸ್ಟೆಲ್‌ ಸಮೀಪದ ಸಾಯಿ ಸ್ಕೂಲ್‌ ಮೈದಾನದಲ್ಲಿ ಅ. 20 ಮತ್ತು 21ರಂದು ಅತ್ಯಂತ ಯಶಸ್ವಿಯಾಗಿ ಹಾಗೂ ಸಡಗರದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಬೀದರ್‌

ಶ್ರೀ ರಾಮಲೀಲಾ ಉತ್ಸವ ಸಮಿತಿಯ ವತಿಯಿಂದ ವಿಜಯದಶಮಿ ಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ 20ನೇ ವರ್ಷದ ಸಂಭ್ರಮಾಚರಣೆ ಹಾಗೂ ರಾಮಲೀಲಾ ಉತ್ಸವವು ನಗರದ ಬಿಸಿಎಂ ಹಾಸ್ಟೆಲ್‌ ಸಮೀಪದ ಸಾಯಿ ಸ್ಕೂಲ್‌ ಮೈದಾನದಲ್ಲಿ ಅ. 20 ಮತ್ತು 21ರಂದು ಅತ್ಯಂತ ಯಶಸ್ವಿಯಾಗಿ ಹಾಗೂ ಸಡಗರದಿಂದ ಜರುಗಿತು.

ಮೊದಲ ದಿನವಾದ 20ರಂದು ಸಂಜೆ 6 ಗಂಟೆಯಿಂದ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ಜರುಗಿದವು. ಎರಡನೇ ದಿನವಾದ ಬುಧವಾರ ಸಂಜೆ 6 ಗಂಟೆಯಿಂದ ರಾಮಲೀಲಾ ಕಾರ್ಯಕ್ರಮ ಆರಂಭವಾಯಿತು. ಈ ವೇಳೆ ರಾಣಿ ಸತ್ಯಮೂರ್ತಿ ಅವರ ನೇತೃತ್ವದ ''''''''''''''''ನಾಟ್ಯಶ್ರೀ ನೃತ್ಯಾಲಯ''''''''''''''''ದ ತಂಡ ಹಾಗೂ ಉಷಾ ಪ್ರಭಾಕರ್ ನೇತೃತ್ವದ ''''''''''''''''ನೂಪುರ್ ನೃತ್ಯ ಅಕಾಡೆಮಿ''''''''''''''''ಯ ವಿದ್ಯಾರ್ಥಿಗಳಿಂದ ಪ್ರದರ್ಶಿಸಲ್ಪಟ್ಟ ಭರತನಾಟ್ಯ ಕಾರ್ಯಕ್ರಮವು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.

ರಾವಣ ಪ್ರತಿಕೃತಿ ಹಾಗೂ ಜಿರಳೆ ಫೋಟೋ ದಹನ ಮತ್ತು ಪಟಾಕಿ ಸಿಡಿತ: ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ, ಆಕರ್ಷಕವಾಗಿ ಸಿದ್ಧಪಡಿಸಲಾಗಿದ್ದ 46 ಅಡಿ ಎತ್ತರದ ರಾವಣನ ಪ್ರತಿಕೃತಿಗೆ ಹಾಗೂ ರಾವಣನ ಎದೆಗೆ ಅಂಟಿಸಿದ್ದ ಜಿರಳೆ ಚಿತ್ರಕ್ಕೆ ಅಗ್ನಿ ಸ್ಪರ್ಶಿಸುವ ಮೂಲಕ ದಹಿಸಲಾಯಿತು. ಇದೇ ಸಂದರ್ಭದಲ್ಲಿ ಆಕಾಶದಲ್ಲಿ ಚಿಮ್ಮಿದ ಅಪಾರ ಬಣ್ಣ-ಬಣ್ಣದ ಪಟಾಕಿಗಳ ಸದ್ದು ಹಾಗೂ ಬೆಳಕಿನೊಂದಿಗೆ ವಿಜಯದಶಮಿ ಹಬ್ಬವನ್ನು ಸಾರ್ವಜನಿಕರು ಅತ್ಯುತ್ಸಾಹದಿಂದ ಆಚರಿಸಿದರು.

ಬುಧವಾರ ರಾತ್ರಿ ನಡೆದ ರಾವಣ ದಹನ ಹಾಗೂ ರಾಮಲೀಲೆ ಕಾರ್ಯಕ್ರಮದಲ್ಲಿ ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹಾಗೂ ಮುಖಂಡ ಈಶ್ವರಸಿಂಗ್‌ ಠಾಕೂರ್‌ ಮಾತನಾಡಿ, ವಿದೇಶಿಗರ ಕುಮ್ಮಕ್ಕಿನಿಂದ ದೇಶವನ್ನು ಹಾಳು ಮಾಡುತ್ತಿರುವ ಜಿರಳೆಗಳನ್ನೂ ನಾವು ರಾವಣನೊಂದಿಗೆ ದಹನ ಮಾಡಿದ್ದೇವೆ ಎಂದೆನ್ನುವ ಮೂಲಕ ಕಾಕ್ರೋಚ್‌ ಜನತಾ ಪಕ್ಷದ ಮುಖಂಡರು ಹಾಗೂ ಸಮರ್ಥಕರಿಗೆ ಪರೋಕ್ಷವಾಗಿ ವ್ಯಂಗ್ಯವಾಡಿದರು.

ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್‌, ಮಾಜಿ ಎಂಎಲ್ಸಿ ರಘುನಾಥ ಮಲ್ಕಾಪೂರ್, ಸರದಾರ ಬಲಬೀರಸಿಂಗ್‌, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌. ಮುಖಂಡರಾದ ಗುರುನಾಥ ಕೊಳ್ಳೂರ್‌, ಜೈರಾಜ್‌ ಖಂಡ್ರೆ, ಶಂಕರರಾವ್‌ ಕೊಟ್ಟರಕಿ, ಗೀತಾ ಪಂಡಿತ ಚಿದ್ರಿ, ಬಾಬು ವಾಲಿ, ರಾಮಕೃಷ್ಣ ಸಾಳೆ, ಡಾ. ರಜನೀಶ್ ವಾಲಿ, ರಮೇಶ ಗೋಯಲ್‌, ನಿತಿನ ಗೋಯಲ್‌, ರಾಜೇಂದ್ರ ಶರ್ಮಾ, ಉಪೇಂದ್ರ ದೇಶಪಾಂಡೆ ಹಾಗೂ ವಿರುಪಾಕ್ಷ ಗಾದಗಿ ಸೇರಿದಂತೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ರಾಮಲೀಲಾ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಗಾದಾ ಹಾಗೂ ಪ್ರಧಾನ ಕಾರ್ಯದರ್ಶಿ ಮಹೇಶ್ವರ ಸ್ವಾಮಿ ಸೇರಿದಂತೆ ಸಮಿತಿಯ ಇತರ ಪ್ರಮುಖರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.

ಎರಡು ದಿನಗಳ ಕಾಲ ನಡೆದ ಈ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಬ್ಬದಲ್ಲಿ ಬೀದರ್ ನಗರ ಹಾಗೂ ಸುತ್ತಮುತ್ತಲಿನ ಸಾವಿರಾರು ಸಾರ್ವಜನಿಕರು ಪಾಲ್ಗೊಂಡು ರಾಮಲೀಲಾ ಉತ್ಸವವನ್ನು ಕಣ್ತುಂಬಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರ್ಷೋಧ್ಘಾರದೊಂದಿಗೆ ನಡೆದ ಅಶ್ವವಾಹನೋತ್ಸವದ ಜಂಬೂಸವಾರಿ
ಅ.23ರಂದು ಗಣಂಗೂರು ಟೋಲ್‍ ಬಂದ್: ರೈತ ಸಂಘ ತೀರ್ಮಾನ