ಅಥಣಿಯಿಂದ ಶ್ರೀಶೈಲಕ್ಕೆ ಬಸ್ ಸೇವೆಗೆ ಚಾಲನೆ

KannadaprabhaNewsNetwork |  
Published : Aug 12, 2026, 03:15 AM IST
ಚಾಲನೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಅಥಣಿ ಶಿವಭಕ್ತರ ಶಕ್ತಿಪೀಠ ಎಂದು ಕರೆಯಲ್ಪಡುವ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯಕ್ಕೆ ಹೋಗುವ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಅಥಣಿ ಸಾರಿಗೆ ಘಟಕದಿಂದ ಎರಡು ನೂತನ ಬಸ್ ಸೇವೆಯನ್ನು ಆರಂಭಿಸಲಾಗಿದ್ದು, ಬಸ್‌ ಸೇವೆಗೆ ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಅಥಣಿ

ಶಿವಭಕ್ತರ ಶಕ್ತಿಪೀಠ ಎಂದು ಕರೆಯಲ್ಪಡುವ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯಕ್ಕೆ ಹೋಗುವ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಅಥಣಿ ಸಾರಿಗೆ ಘಟಕದಿಂದ ಎರಡು ನೂತನ ಬಸ್ ಸೇವೆಯನ್ನು ಆರಂಭಿಸಲಾಗಿದ್ದು, ಬಸ್‌ ಸೇವೆಗೆ ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಚಾಲನೆ ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ಭೌಗೋಳಿಕವಾಗಿ ಆಂಧ್ರ ಪ್ರದೇಶದಲ್ಲಿದ್ದರೂ ಭಾವನಾತ್ಮಕವಾಗಿ ಕರ್ನಾಟಕದ ಭಕ್ತರೇ ಅಪಾರ ಸಂಖ್ಯೆಯಲ್ಲಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದಿಂದ ಅಪಾರ ಭಕ್ತರು ಬರುತ್ತಾರೆ. ಪ್ರತಿ ತಾಲೂಕಿನಿಂದ ಶ್ರೀಶೈಲಕ್ಕೆ ಸಾರಿಗೆ ಸೇವೆ ಆರಂಭಿಸಿರುವುದು ಸಂತೋಷದ ಸಂಗತಿ. ಶ್ರಾವಣ ಮಾಸ ಅತ್ಯಂತ ಪವಿತ್ರವಾದದ್ದು, ಈ ಸಂದರ್ಭದಲ್ಲಿ ಶ್ರೀ ಶೈಲಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅಥಣಿ ಘಟಕದಿಂದ ೨ ಬಸ್ ಸೇವೆ ಆರಂಭಿಸಿದ್ದು ಮಾದರಿಯಾಗಿದೆ ಎಂದರು.ಶ್ರಾವಣ ಪ್ರಯುಕ್ತ ಪ್ರವಚನ: ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಆ.16 ರಿಂದ ಸೆಪ್ಟೆಂಬರ್ 11ರವರೆಗೆ ಜಗದ್ಗುರುಗಳ ಅನುಷ್ಠಾನ, ಇಷ್ಟಲಿಂಗ ಪೂಜೆ ಜರುಗಲಿವೆ. ನಿತ್ಯ ಸಂಜೆ ಶಿವಶರಣೆ ಅಕ್ಕಮಹಾದೇವಿ ಕುರಿತು ಪ್ರವಚನ ಮತ್ತು ಪುರಾಣ ಜರುಗಲಿವೆ. ಭಕ್ತಾದಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಚಿಕ್ಕೋಡಿ ವಾಯವ್ಯ ಸಾರಿಗೆ ವಿಭಾಗಾಧಿಕಾರಿ ಮಹಾದೇವ ಮುಂಜಿ ಮಾತನಾಡಿ, ನಿತ್ಯ ಸಂಜೆ 5.30ಕ್ಕೆ ಅಥಣಿಯಿಂದ ಜಮಖಂಡಿ, ಬಾಗಲಕೋಟೆ, ರಾಯಚೂರು ಮಾರ್ಗವಾಗಿ ಹೊರಡುವ ಬಸ್‌ ಮರುದಿನ ಬೆಳಗ್ಗೆ 9ಕ್ಕೆ ಶ್ರೀಶೈಲ ತಲುಪಲಿದೆ. ಮರಳಿ ಸಂಜೆ 5.30ಕ್ಕೆ ವಾಪಸ್‌ ತೆರಳಲಿದೆ. ಟಿಕೆಟ್ ದರ ₹ 938 ಇದ್ದು, ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲವೆಂದರು.ಜಮಖಂಡಿಯ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ, ಝಂಜರವಾಡದ ಬಸವರಾಜ ದೇವರು, ಗ್ಯಾರಂಟಿ ಯೋಜನೆ ಅಥಣಿ ಅಧ್ಯಕ್ಷ ಸಿದ್ಧಾರ್ಥ ಸಿಂಗೆ, ಘಟಕ ವ್ಯವಸ್ಥಾಪಕ ಎಸ್‌.ಬಿ.ಗಸ್ತಿ, ಅಧಿಕಾರಿಗಳಾದ ಎ.ಆ‌ರ್.ಛಬ್ಬಿ, ಬಿ.ಬಿ.ಜಗದಾಳೆ, ಎಸ್.ಪಿ.ಕಂಕನವಾಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಷಡ್ಯಂತ್ರಕ್ಕೆ ನಾಡಗೌಡರಿಗೆ ಮತ್ತೆ ಸಚಿವ ಸ್ಥಾನ ಬಲಿ!
ಡಿಸಿಎಂ ಹುದ್ದೆ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆಯುತ್ತಿರುವುದು ನಿಜ