ಯಾದಗಿರಿಯಿಂದ ಹಾವೇರಿಗೆ ಬಸ್ ಸಂಚಾರ ಆರಂಭ

KannadaprabhaNewsNetwork |  
Published : Oct 05, 2026, 01:15 AM IST
ಯಾದಗಿರಿ ಜಿಲ್ಲಾ ಕೇಂದ್ರ ಸ್ಥಾನದಿಂದ ದೂರದ ರಾಣೆಬೆಣ್ಣೂರ - ಹಾವೇರಿಗೆ ನಿತ್ಯ ಸಂಚರಿಸಲು ಆರಂಭವಾಗಿರುವ ನಾನ್ ಎಸಿ ಸ್ಲಿಪರ್ ಅಮೋಘವರ್ಷ ಹೆಸರಿನ ಎರಡು ನೂತನ ಬಸ್ ಗಳಿಗೆ ಸಮೀಪದ ಶ್ರೀಕ್ಷೇತ್ರ ಅಬ್ಬೆತುಮಕೂರಿನ ವಿಶ್ವಾರಾಧ್ಯ ಮಠದ ಆವರಣದಲ್ಲಿ ಭಾನುವಾರ ಮಠದ ಪೀಠಾಧಿಪತಿ ಶ್ರೀ ಡಾ.ಗಂಗಾಧರ ಮಹಾಸ್ವಾಮಿಗಳು ಪೂಜೆ ನೆರವೇರಿಸಿ, ಸಂಚಾರಕ್ಕೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಗಿರಿ ಜಿಲ್ಲೆ ಕೇಂದ್ರ ಸ್ಥಾನದಿಂದ ದೂರದ ರಾಣೆಬೆಣ್ಣೂರ - ಹಾವೇರಿಗೆ ನಿತ್ಯ ಸಂಚರಿಸಲು ಆರಂಭವಾಗಿರುವ ನಾನ್ ಎಸಿ ಸ್ಲಿಪರ್ ಅಮೋಘವರ್ಷ ಹೆಸರಿನ ಎರಡು ನೂತನ ಬಸ್‌ಗಳಿಗೆ ಶ್ರೀಕ್ಷೇತ್ರ ಅಬ್ಬೆತುಮಕೂರಿನ ವಿಶ್ವಾರಾಧ್ಯ ಮಠದ ಆವರಣದಲ್ಲಿ ಭಾನುವಾರ ಮಠದ ಪೀಠಾಧಿಪತಿ ಶ್ರೀ ಡಾ.ಗಂಗಾಧರ ಮಹಾಸ್ವಾಮಿ ಪೂಜೆ ನೆರವೇರಿಸಿ ಸಂಚಾರಕ್ಕೆ ಭಾನುವಾರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಗಿರಿ ಜಿಲ್ಲೆ ಕೇಂದ್ರ ಸ್ಥಾನದಿಂದ ದೂರದ ರಾಣೆಬೆಣ್ಣೂರ - ಹಾವೇರಿಗೆ ನಿತ್ಯ ಸಂಚರಿಸಲು ಆರಂಭವಾಗಿರುವ ನಾನ್ ಎಸಿ ಸ್ಲಿಪರ್ ಅಮೋಘವರ್ಷ ಹೆಸರಿನ ಎರಡು ನೂತನ ಬಸ್‌ಗಳಿಗೆ ಶ್ರೀಕ್ಷೇತ್ರ ಅಬ್ಬೆತುಮಕೂರಿನ ವಿಶ್ವಾರಾಧ್ಯ ಮಠದ ಆವರಣದಲ್ಲಿ ಭಾನುವಾರ ಮಠದ ಪೀಠಾಧಿಪತಿ ಶ್ರೀ ಡಾ.ಗಂಗಾಧರ ಮಹಾಸ್ವಾಮಿ ಪೂಜೆ ನೆರವೇರಿಸಿ ಸಂಚಾರಕ್ಕೆ ಭಾನುವಾರ ಚಾಲನೆ ನೀಡಿದರು.

ದೂರದ ಊರುಗಳಾದ ಲಿಂಗಸೂಗುರು, ಗಂಗಾವತಿ, ಸಿಂಧನೂರು, ವಿಜಯನಗರ (ಹೊಸಪೇಟೆ), ಹರಿಹರ, ರಾಣೆಬೆಣ್ಣೂರ ಮತ್ತು ಹಾವೇರಿಗಳಿಂದ ಅಬ್ಬೆತುಮಕೂರಿಗೆ ಬರುವ ಸಾವಿರಾರು ಭಕ್ತರಿಗೆ ಬಹುದಿನಗಳಿಂದ ನೇರ ಸಾರಿಗೆ ಸಂಪರ್ಕದ ಕುರಿತು ಡಾ.ಗಂಗಾಧರ ಶ್ರೀಗಳು ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ, ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್, ವ್ಯವಸ್ಥಾಪಕ ನಿರ್ದೇಶಕಿ ಡಾ.ಸುಶೀಲಾ, ವಿಭಾಗೀಯ ನಿಯಂತ್ರಾಧಿಕಾರಿ ಮಂಜುನಾಥ ಅವರೊಂದಿಗೆಮಾತನಾಡಿ ಯಾದಗಿರಿಯಿಂದ ಹಾವೇರಿಗೆ ಬಸ್ ಸೌಲಭ್ಯದ ಕಲ್ಪಿಸಲು ತಿಳಿಸಿದ್ದರು. ಇದಕ್ಕೆ ಕೆಕೆಆರ್‌ಟಿಸಿ ಸ್ಪಂದಿಸಿದೆ. ಮಠದ ಮಾಧ್ಯಮ ವಕ್ತಾರ ಡಾ.ಸುಭಾಷಚಂದ್ರ ಕೌಲಗಿ, ಘಟಕ ವ್ಯವಸ್ಥಾಪಕ ರಮೇಶ ತಾಳಿಕೋಟೆ, ಸಂಚಾರಿ ಅಧೀಕ್ಷಕ ಪಾಂಡುರಂಗ ಕುಲಕರ್ಣಿ, ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಶಾಂತ ಪಾಟೀಲ್, ಸಹಾಯಕ ಸಂಚಾರಿ ನಿಯಂತ್ರಕ ಸಂಜೀವಕುಮಾರ, ವಾಹನ ಚಾಲಕರಾದ ಹಣಮಂತ, ಪರಶುರಾಂ, ಡಿಸಿ ಆಪ್ತ ಹರೀಶ, ವಿರುಪಾಕ್ಷಿ, ಚಂದ್ರಶೇಖರ ಇತರರಿದ್ದರು.

ಯಾದಗಿರಿಯಿಂದ ನಿತ್ಯ ಸಂಜೆ 7.30ಕ್ಕೆ ಹೊರಡಲಿದ್ದು, ಹಾವೇರಿಗೆ ಬೆಳಗ್ಗೆ 5.30ಕ್ಕೆ ತಲುಪಲಿದೆ. ಹಾವೇರಿಯಿಂದ ರಾತ್ರಿ 7.45ಕ್ಕೆ ಬಿಡುವ ಬಸ್ ಯಾದಗಿರಿಗೆ ಬೆಳಗ್ಗೆ 6ಕ್ಕೆ ತಲುಪಲಿದೆ.ಯಾದಗಿರಿ, ಶಹಾಪುರ, ಸುರಪುರ,ಲಿಂಗಸೂಗುರು, ಗಂಗಾವತಿ, ವಿಜಯನಗರ, ಹರಿಹರ, ರಾಣೆಬೆಣ್ಣೂರ ಮೂಲಕ ಹಾವೇರಿಗೆ ತಲುಪಲಿದೆ ಎಂದು ಘಟಕದ ವ್ಯವಸ್ಥಾಪಕ ರಮೇಶ ತಾಳಿಕೋಟಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಲ್ಲಿ ಸ್ಪರ್ಧೆ ಎದುರಿಸುವ ಆತ್ಮವಿಶ್ವಾಸ ಬೆಳೆಸುವುದು ಮುಖ್ಯ
ಸರ್ಕಾರಿ ಶಾಲೆಗಳ ಪ್ರಗತಿಗೆ ಎಲ್ಲರ ಸಹಕಾರ ಅಗತ್ಯ