ಹುಬ್ಬಳ್ಳಿ:
ಇದರಿಂದ ಬಿಆರ್‌ಟಿಎಸ್ ಬಿಟ್ಟು ಉಳಿದ ಬಸ್, ಖಾಸಗಿ ಬಸ್‌ಗಳ ಪ್ರಯಾಣಿಕರು ಮಳೆ- ಬಿಸಿಲು ಎನ್ನದೇ ರಸ್ತೆಯಲ್ಲೇ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ.
ಹುಬ್ಬಳ್ಳಿ-ಧಾರವಾಡ ಮಧ್ಯೆ ಸಂಚರಿಸುವ ಪ್ರಯಾಣಿಕರಿಗೆ ಹವಾನಿಯಂತ್ರಿತ ಬಸ್‌ಗಳ ಸೌಲಭ್ಯ ಸಿಗಲಿ. ತ್ವರಿತ ಗತಿಯಲ್ಲಿ ಎರಡು ನಗರಗಳ ಮಧ್ಯೆ ಓಡಾಡುವಂತಾಗಲಿ ಎಂಬ ಉದ್ದೇಶದಿಂದ 2018ರಲ್ಲಿ ಬಿಆರ್‌ಟಿಎಸ್ ಪ್ರಾರಂಭಿಸಲಾಗಿದೆ.ಬಿಆರ್‌ಟಿಎಸ್ ಪ್ರಾರಂಭವಾದ ಬಳಿಕ ಬೇಂದ್ರೆ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಗರ ಘಟಕದ ಬಸ್‌ಗಳ ಓಡಾಡ ನಿಲ್ಲುತ್ತದೆ ಎಂದು ಜನತೆ ಭಾವಿಸಲಾಗಿತ್ತು. ಆದರೆ, ಬೇಂದ್ರೆ ಅವರು ಕೋರ್ಟ್‌ಗೆ ಹೋಗಿ ಪರವಾನಗಿ ತಂದು ಬಸ್ ಓಡಿಸುತ್ತಿದ್ದರೆ, ಸಾಮಾನ್ಯ ಬಸ್‌ಗಳು ಓಡಾಡಲಿ ಎಂದು ನಗರ ಸಾರಿಗೆ ಘಟಕದ ಬಿಆರ್‌ಟಿಎಸ್ ಹೊರತುಪಡಿಸಿ 100ಕ್ಕೂ ಅಧಿಕ ಸಾದಾ ಬಸ್, ಬೇಂದ್ರೆ ಸಾರಿಗೆಯ 40 ಬಸ್ ಹುಬ್ಬಳ್ಳಿ-ಧಾರವಾಡ ಬಸ್ ಮಧ್ಯೆ ಸಂಚರಿಸುತ್ತಿವೆ.
ಮಳೆಯೇ ಬರಲಿ, ಬಿಸಿಲೇ ಇರಲಿ ಮಿಶ್ರಪಥದದಲ್ಲಿ ಸಂಚರಿಸುವ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರು ರಸ್ತೆ ಮೇಲೆ ನಿಲ್ಲಬೇಕಾದ ಪರಿಸ್ಥಿತಿ ಇದೆ. ಹೀಗೇ ರಸ್ತೆ ಮೇಲೆ ನಿಂತಿದ್ದ ಮಹಿಳೆಗೆ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಇಂಥ ಘಟನೆಗಳು ನಿತ್ಯ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಪ್ರಯಾಣಿಕರ ಸುರಕ್ಷತೆಗೆ ಶೆಲ್ಟರ್ ನಿರ್ಮಿಸದೆ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಬಿಆರ್‌ಟಿಎಸ್ ಕಾರಿಡಾರ್‌ಗೆ ಅಳವಡಿಸಿರುವ ಬ್ಯಾರಿಕೇಡ್ ತೆರವುಗೊಳಿಸಬೇಕು. ಕಾರಿಡಾರ್ ಮಧ್ಯೆ ಒಂದೇ ಒಂದು ಬ್ಯಾರಿಕೇಡ್ ಅಳವಡಿಸಿ ಪ್ರತ್ಯೇಕ ಪಥ ರದ್ದುಗೊಳಿಸಿ ಮಿಶ್ರಪಥವನ್ನಾಗಿಸಬೇಕು. ಇದರಿಂದ ಚಿಗರಿ ಓಡಾಟಕ್ಕೆ ಟ್ರಾಫಿಕ್ ಸಮಸ್ಯೆಯೂ ಎದುರಾಗುವುದಿಲ್ಲ. ಬಿಆರ್‌ಟಿಎಸ್ ನಿಲ್ದಾಣಗಳಲ್ಲೇ ಸಾದಾ ಬಸ್, ನಗರ ಸಾರಿಗೆಯ ವಿವಿಧ ರೂಟ್, ಬೇಂದ್ರೆ ಬಸ್‌ಗಳ ಪ್ರಯಾಣಿಕರು ನಿಲ್ಲುವುದರಿಂದ ಬಸ್ ಶೆಲ್ಟರ್‌ಗಳ ಸಮಸ್ಯೆಯೂ ಇರುವುದಿಲ್ಲ. ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕರು, ಜಿಲ್ಲಾಡಳಿತ, ಸಾರಿಗೆ ಸಂಸ್ಥೆ ಕ್ರಮಕೈಗೊಳ್ಳುವ ಮೂಲಕ ಪ್ರಯಾಣಿಕರಿಗೆ ಆಗುತ್ತಿರುವ ಅನಾಹುತ ತಡೆಯಬೇಕು ಎಂಬುದು ಸಾರ್ವಜನಿಕರ ಒಕ್ಕೊರಲಿನ ಆಗ್ರಹ.
ನಾಗೇಶ ಪಾಟೀಲ, ವಿದ್ಯಾರ್ಥಿ
ರಶ್ಮಿ ಹಿರೇಮಠ, ಖಾಸಗಿ ನೌಕರಸ್ಥೆ