ಮಂಗಳೂರು: ಹೂಡಿಕೆ, ವಿಮೆ, ಗ್ರಾಹಕರ ರಕ್ಷಣೆ, ರೇರಾ, ಐಪಿಆರ್, ಆತ್ಮನಿರ್ಭರ್ ಭಾರತ್, ಎಂಎಸ್ ಎಂಇ, ಸ್ಟಾರ್ಟ್ ಅಪ್, ಹೊಸ ಕೈಗಾರಿಕಾ ನೀತಿ ಸಹಿತ ವಿವಿಧ ವಿಷಯಗಳ ಬಗ್ಗೆ ನಮ್ಮ ಕುಡ್ಲ ವಾಹಿನಿಯಲ್ಲಿ ಕಳೆದ 7 ವರ್ಷಗಳಿಂದ ಪ್ರಸಾರವಾಗುವ ಸಾಪ್ತಾಹಿಕ ಭಾನುವಾರದ ‘ಬ್ಯುಸಿನೆಸ್ ಟಾನಿಕ್‘ ಎಂಬ ಕಾರ್ಯಕ್ರಮದ 350ನೇ ಸಂಚಿಕೆ ಜ.3ರಂದು ಸಂತ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.
ಉದ್ಘಾಟನೆ ಬಳಿಕ 350ನೇ ಸಂಚಿಕೆಯ ಪ್ಯಾನಲ್ ಚರ್ಚೆ ಏರ್ಪಡಲಿದೆ. ‘ಇಂಡಿಯಾನೊಮಿಕ್ಸ್-2026’ ವಿಚಾರದಲ್ಲಿ ಚೆನ್ನೈನ ಸೆನ್ಸ್ ಅಂಡ್ ಸಿಂಪ್ಲಿಸಿಟಿ ಸಿಇಒ ಸುನೀಲ್ ಸುಬ್ರಮಣಿಯಂ, ವಚನ ಇನ್‌ವೆಸ್ಟ್‌ಮೆಂಟ್ ಪ್ರೆ.ಲಿ. ಸಿಎ ರುದ್ರಮೂರ್ತಿ, ಎನ್‌ಎಂಪಿಎ ಮಾಜಿ ಅಧ್ಯಕ್ಷ ಡಾ.ವೆಂಕಟರಮಣ ಅಕ್ಕರಾಜು, ಮಾಡರೇಟರ್ ಆಗಿ ಎನ್‌ಆರ್‌ಐ ಮನಿ ಕ್ಲಿನಿಕ್ ಸಂಸ್ಥಾಪಕ ಡಾ.ಚಂದ್ರಕಾಂತ್ ಭಟ್ ಭಾಗವಹಿಸಲಿದ್ದಾರೆ ಎಂದರು. ನಮ್ಮ ಕುಡ್ಲ ಚಾನೆಲ್‌ನ ನಿರ್ದೇಶಕರಾದ ಹರೀಶ್ ಬಿ.ಕರ್ಕೇರ, ಲೀಲಾಕ್ಷ ಬಿ.ಕರ್ಕೇರ, ಬ್ಯುಸಿನೆಸ್ ಟಾನಿಕ್‌ನ ನಿರ್ದೇಶಕ ಸಂತ ಅಲೋಶಿಯಸ್ ವಿವಿ ಸಹಾಯಕ ಪ್ರಾಧ್ಯಾಪಕ ಅರ್ಜುನ್ ಪ್ರಕಾಶ್, ಕಾರ್ಯಕ್ರಮ ಸಂಯೋಜಕ ರಮೇಶ್ಚಂದ್ರ ಪ್ರಭು ಇದ್ದರು.
ಏನಿದು ‘ಬ್ಯುಸಿನೆಸ್ ಟಾನಿಕ್’ ಕಾರ್ಯಕ್ರಮ?ಪ್ರತೀ ಭಾನುವಾರ ಬೆಳಗ್ಗೆ 10ರಿಂದ 11.30ರ ವರೆಗೆ ‘ಬ್ಯುಸಿನೆಸ್ ಟಾನಿಕ್’ ಕಾರ್ಯಕ್ರಮ ನಡೆಯುತ್ತದೆ. ನೇರ ಫೋನ್ ಇನ್ ಮುಖಾಂತರ ವೀಕ್ಷಕರು ಉತ್ತರವನ್ನು ಪಡೆಯುತ್ತಾರೆ. ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ತರವನ್ನು ನೀಡಿದ್ದಾರೆ. ಸ್ಥಳದಲ್ಲಿ ಸಮಸ್ಯೆ ಬಗೆಹರಿಸುವ ವಿನೂತನ ಕಾರ್ಯಕ್ರಮ ಇದಾಗಿದೆ ಎಂದು ಸಿಎ ಎಸ್.ಎಸ್.ನಾಯಕ್ ತಿಳಿಸಿದರು.