ಕನ್ನಡಪ್ರಭ ವಾರ್ತೆ ಬೆಂಗಳೂರು
ಗುರುವಾರ ರಾತ್ರಿ 1.30 ಸುಮಾರಿಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪಬ್‌ನಲ್ಲಿ ಸರ್ವಿಸ್ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ ಎಂದು ಹೇಳಲಾಗಿದೆ. ಈ ವೇಳೆ ಸಿಬ್ಬಂದಿ ಹಾಗೂ ಉದ್ಯಮಿ ಸತ್ಯ ನಾಯ್ಡು ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಪಬ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಇನ್ನು ಗಲಾಟೆಯ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಆದರೆ ಸಿಬ್ಬಂದಿ ಮೇಲಿನ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬೆನ್ನಲ್ಲೆ ಎಚ್ಚೆತ್ತ ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ಪಬ್ಗೆ ತೆರಳಿ ಮಾಹಿತಿ ಕಲೆಹಾಕಿದ್ದಾರೆ. ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಗೆ ಈ ಗಲಾಟೆ ಬಗ್ಗೆ ವಿಡಿಯೋವೊಂದು ಸಿಕ್ಕಿದ್ದು, ಅದರ ಆಧಾರ ಮೇಲೆ ತನಿಖೆ ಕೈಗೊಂಡಿದ್ದಾರೆ. ಆರೋಪಿತ ಉದ್ಯಮಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಡಿಯೋ ಮೂಲಕ ಉದ್ಯಮಿ ಸ್ಪಷ್ಟನೆಗಲಾಟೆಯ ವಿಡಿಯೋ ವೈರಲ್ ಆದ ಬೆನ್ನಲ್ಲೆ ಉದ್ಯಮಿ ಸತ್ಯ ನಾಯ್ಡು ವಿಡಿಯೋವೊಂದನ್ನು ಮಾಡಿ ಸ್ಪಷ್ಟನೆ ನೀಡಿದ್ದಾರೆ. ಬ್ಯಾಸ್ಟಿಯನ್ ಪಬ್‌ನಲ್ಲಿ ನಾನು ಹಲ್ಲೆ ಮಾಡಿದ್ದೇನೆ ಎಂಬ ಒಂದು ವಿಡಿಯೋ ವೈರಲ್ ಆಗಿದೆ. ನಾನು ಯಾವುದೇ ರೀತಿಯ ಹಲ್ಲೆನು ಮಾಡಿಲ್ಲ, ಜಗಳನು ಮಾಡಿಲ್ಲ. ಫ್ರೆಂಡ್ಸ್ ಎಲ್ಲಾ ಊಟ ಮಾಡೋಕೆ ಅಂತ ಬ್ಯಾಸ್ಟಿಯನ್‌ಗೆ ಹೋಗಿದ್ವಿ. ಬಿಲ್ ಪಾವತಿಸುವ ಸಂದರ್ಭದಲ್ಲಿ ನನ್ನ ಪರ್ಸ್ ಅನ್ನು ಸ್ನೇಹಿತರು ಬಚ್ಚಿಟ್ಟಿದ್ದರು. ನಂತರ ನನ್ನ ಫ್ರೆಂಡ್ ಒಬ್ಬ ಬಿಲ್ ಕಟ್ಟಿದ್ದ. ಈ ವೇಳೆ ನೂಕು ನುಗ್ಗಲು ಆಗಿದೆ ಅಷ್ಟೇ. ನಾವು ಯಾರ ಜತೆನೂ ಜಗಳವಾಡಿಲ್ಲ. ಹಲ್ಲೆನೂ ಮಾಡಿಲ್ಲ ಎಂದು ತಿಳಿಸಿದ್ದಾರೆ.