ನಿರ್ದೇಶಕ ಎಂ.ಪಿ.ಧನಂಜಯಮೂರ್ತಿ ಅವರಿಂದ ಪ್ರಾರಂಭವಾದ ಸಭೆಯಲ್ಲಿ ಕಾರ್ಯದರ್ಶಿ ಉಮೇಶ್ ವರದಿಯನ್ನು ಮಂಡಿಸಿದರೆ, ಖಜಾಂಚಿ ಜ್ಞಾನೇಶ್ 23-24 ನೇ ಸಾಲಿನ ಲೆಕ್ಕಪತ್ರವನ್ನುಮಂಡಿಸಿದರು.
ಅರಸೀಕೆರೆ: ಅರಸೀಕೆರೆ ಟೌನ್ ಕ್ಲಬ್ ನೂತನ ಅಧ್ಯಕ್ಷರಾಗಿ ಹೆಸರಾಂತ ಉದ್ಯಮಿ ಜೆ.ಪಿ.ಜಯಣ್ಣ ಅವಿರೋಧವಾಗಿ ಆಯ್ಕೆಯಾದರು.
ಟೌನ್ ಕ್ಲಬ್ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಚಿತ್ರನಟ ದೊಡ್ಡಣ್ಣ ಹಾಗೂ ಅಧ್ಯಕ್ಷ ಎನ್.ಡಿ. ಪ್ರಸಾದ್ ರವರು ಅಧ್ಯಕ್ಷ ಪದವಿಗೆ ಜೆ.ಪಿ.ಜಯಣ್ಣ ನವರನ್ನು ಸೂಚಿಸಿದಾಗ ಸಭೆಯಲ್ಲಿ ಉಪಸ್ಥಿತಿ ಇದ್ದ ಎಲ್ಲಾ ಸದಸ್ಯರು ಸರ್ವಾನುಮತದಿಂದ ಸಮ್ಮತಿಸಿದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನೂತನ ಅಧ್ಯಕ್ಷರು, ಹಾಲಿ ಅಧ್ಯಕ್ಷ ಎನ್.ಡಿ.ಪ್ರಸಾದ್ ಅತ್ಯಂತ ಕ್ರಿಯಾಶೀಲ ವ್ಯಕ್ತಿ. ಅವರ ಜೊತೆ ಇದ್ದ ಪದಾಧಿಕಾರಿಗಳು ಅತ್ಯಂತ ಪ್ರಾಮಾಣಿಕವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿ, ಎಲ್ಲಾ ಸದಸ್ಯರ ಮನಗೆದ್ದಿದ್ದಾರೆ. ಟೌನ್ ಕ್ಲಬ್ ಹೊರವಲಯದಲ್ಲಿರುವ ವಿಶಾಲವಾದ ನಿವೇಶನದಲ್ಲಿ ನೂತನ ಕ್ಲಬ್ ಕಟ್ಟಡ ನಿರ್ಮಿಸಲು ಇವರು ಮಾಡಿರುವ ಕೆಲಸ ಮೈಲುಗಲ್ಲು ಎಂದು ಪ್ರಶಂಸಿಸಿದರು.
ನಿರ್ದೇಶಕ ಎಂ.ಪಿ.ಧನಂಜಯಮೂರ್ತಿ ಅವರಿಂದ ಪ್ರಾರಂಭವಾದ ಸಭೆಯಲ್ಲಿ ಕಾರ್ಯದರ್ಶಿ ಉಮೇಶ್ ವರದಿಯನ್ನು ಮಂಡಿಸಿದರೆ, ಖಜಾಂಚಿ ಜ್ಞಾನೇಶ್ 23-24 ನೇ ಸಾಲಿನ ಲೆಕ್ಕಪತ್ರವನ್ನುಮಂಡಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ, ಇನ್ನು ಕೇವಲ ಒಂದು ವರ್ಷದಲ್ಲಿ ಸುಸಜ್ಜಿತ ಕ್ಲಬ್ ಕಟ್ಟಡ ಸಮುಚ್ಛಯವನ್ನುನಿರ್ಮಿಸಲು ನಾನು ಎಲ್ಲಾ ಸಹಕಾರ ನೀಡುತ್ತೇನೆಂದು ಭರವಸೆ ನೀಡಿದರು.
ಉಪಾಧ್ಯಕ್ಷರಾಗಿ ಸೋಮಶೇಖರಯ್ಯ, ಕಾರ್ಯದರ್ಶಿಯಾಗಿ ಎಲ್.ಎಸ್.ಜ್ಞಾನೇಶ್, ಖಜಾಂಚಿಯಾಗಿ ಎಚ್.ಎಸ್.ಕೇಶವಮೂರ್ತಿಯವರು ಅವಿರೋಧವಾಗಿ ಆಯ್ಕೆಯಾದರು. ಮಾಜಿ ಅಧ್ಯಕ್ಷ ಕೆ.ಸಿ.ಯೋಗೀಶ್, ಕೆ.ಆರ್.ಡಿ.ಸಿ.ಎಲ್. ಮಾಜಿ ಉಪಾಧ್ಯಕ್ಷ ಜಿ.ವಿ.ಬಸವರಾಜು, ಹಿರಿಯ ಸದಸ್ಯರು ಹಾಗೂ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು. ಕ್ಲಬ್ ಹೊಸ ಸದಸ್ಯರಾಗಿ ಸೇರ್ಪಡೆಯಾದವರಿಗೆ ಅಧ್ಯಕ್ಷ ಎನ್.ಡಿ.ಪ್ರಸಾದ್ ಸನ್ಮಾನಿಸಿ ಗೌರವದಿಂದ ಬರ ಮಾಡಿಕೊಂಡರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.