ರೈಲ್ವೆ ನಿಲ್ದಾಣದ ಬಳಿ, ರಿಂಗ್ ರಸ್ತೆಯ ದೇವೇಗೌಡ ಸರ್ಕಲ್, ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಗಾಡೇನಹಳ್ಳಿ ಹಾಗೂ ರಾಜಘಟ್ಟ ಬಳಿಯಿಂದಲೇ ವಾಹನಗಳ ದಟ್ಟಣೆ ಇತ್ತು. ಟ್ರಾಫಿಕ್ ಪೊಲೀಸರು ಕೂಡ ಡೈರಿ ಸರ್ಕಲ್ ಹಾಗೂ ಬೂವನಹಳ್ಳಿ ಬೈಪಾಸ್‌ಗಳಲ್ಲಿ ನಿಂತು ವಾಹನ ದಟ್ಟಣೆಯನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಬೂವನಹಳ್ಳಿ ಗ್ರಾಮದೊಳಗೂ ಕೂಡ ಟ್ರಾಫಿಕ್ ಸಮಸ್ಯೆ ಆಗದಂತೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಹಾಸನ
ನಗರದ ಹೊರವಲಯದ ಬೂವನಹಳ್ಳಿ, ರಾಜಘಟ್ಟ, ಗವೇನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭಾನುವಾರ ಬಂಡೀಹಬ್ಬದ ಹಿನ್ನೆಲೆಯಲ್ಲಿ ಭರ್ಜರಿ ಬಾಡೂಟ ನಡೆಯಿತು. ಹಾಗಾಗಿ ಜನರು ಸಾಗರೋಪಾದಿಯಲ್ಲಿ ಈ ಗ್ರಾಮಗಳಿಗೆ ಆಗಮಿಸಿದ್ದರಿಂದ ಡೈರಿ ಸರ್ಕಲ್ ಹಾಗೂ ಬೂವನಹಳ್ಳಿ ಬೈಪಾಸ್ ಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು.ಕಳೆದ ಶುಕ್ರವಾರದಿಂದಲೇ ಜಾತ್ರೆ ನಡೆಯುತ್ತಿದ್ದು, ಶನಿವಾರ ರಥೋತ್ಸವ ನಡೆದಿತ್ತು. ರಥೋತ್ಸವಕ್ಕೂ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಜಾತ್ರೋತ್ಸವದ ಕಡೆಯ ದಿನವಾದ ಭಾನುವಾರು ಭರ್ಜರಿ ಬಾಡೂಟ ಆಯೋಜಿಸಲಾಗಿತ್ತು. ಹತ್ತು ವರ್ಷಗಳ ನಂತರ ನಡೆದ ಹಬ್ಬವಾದ್ದರಿಂದ ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಪರಿಣಾಮವಾಗಿ ಆ ಭಾಗದಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿತ್ತು. ನಗರದ ರೈಲ್ವೆ ನಿಲ್ದಾಣದ ಬಳಿ, ರಿಂಗ್ ರಸ್ತೆಯ ದೇವೇಗೌಡ ಸರ್ಕಲ್, ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಗಾಡೇನಹಳ್ಳಿ ಹಾಗೂ ರಾಜಘಟ್ಟ ಬಳಿಯಿಂದಲೇ ವಾಹನಗಳ ದಟ್ಟಣೆ ಇತ್ತು. ಟ್ರಾಫಿಕ್ ಪೊಲೀಸರು ಕೂಡ ಡೈರಿ ಸರ್ಕಲ್ ಹಾಗೂ ಬೂವನಹಳ್ಳಿ ಬೈಪಾಸ್‌ಗಳಲ್ಲಿ ನಿಂತು ವಾಹನ ದಟ್ಟಣೆಯನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಬೂವನಹಳ್ಳಿ ಗ್ರಾಮದೊಳಗೂ ಕೂಡ ಟ್ರಾಫಿಕ್ ಸಮಸ್ಯೆ ಆಗದಂತೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಬೈಪಾಸಿನಲ್ಲಿ ಗಾಡೇನಹಳ್ಳಿಯಿಂದ ರಾಜಘಟ್ಟ ವರೆಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ರಸ್ತೆಯಲ್ಲಿ ಜಾಮ್ ಆಗಿದ್ದವು. ಮಧ್ಯಾಹ್ನ 12ರ ಸುಮಾರಿನಿಂದ ಶುರುವಾದ ಟ್ರಾಫಿಕ್ ಜಾಮ್ ಸಂಜೆ 5 ಗಂಟೆಯಾದರೂ ಇಳಿಮುಖವಾಗಿರಲಿಲ್ಲ. ಆ ಮಟ್ಟಕ್ಕೆ ಬಂಡಿ ಹಬ್ಬಕ್ಕೆ ಜನಸಾಗರ ಹರಿದುಬಂದಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.