ಉಪಚುನಾವಣೆ ಗೆಲುವು, ಸಿಎಂಗೆ ಬಲ: ಶಾಸಕ ಕೆ. ರಾಘವೇಂದ್ರ ಹಿಟ್ನಾಳ

KannadaprabhaNewsNetwork |  
Published : Nov 24, 2024, 01:45 AM IST
23ಕೆಪಿಎಲ್1:ಶಾಸಕ ಕೆ ರಾಘವೇಂದ್ರ ಹಿಟ್ನಾಳ | Kannada Prabha

ಸಾರಾಂಶ

ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಿಎಂ ಸಿದ್ದರಾಮಯ್ಯ ಅವರಿಗೆ ಶಕ್ತಿ ತುಂಬಿದೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಿಎಂ ಸಿದ್ದರಾಮಯ್ಯ ಅವರಿಗೆ ಶಕ್ತಿ ತುಂಬಿದೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.

ಉಪ ಚುನಾವಣೆಯ ಫಲಿತಾಂಶ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತಕ್ಕೆ ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ತಾಲೂಕಿನ ಮತದಾರರು ಮತ್ತಷ್ಟು ಶಕ್ತಿ ತುಂಬಿದ್ದಾರೆ. ಬಿಜೆಪಿ-ಜೆಡಿಎಸ್ ನಾಯಕರ ಸುಳ್ಳಿನ ಅಪ ಪ್ರಚಾರಕ್ಕೆ ಮೂರು ತಾಲೂಕಿನ ಜನತೆ ತಕ್ಕ ಶಾಸ್ತ್ರೀ ಮಾಡಿದ್ದಾರೆ. ರಾಜ್ಯದ ಜನ ಕಾಂಗ್ರೆಸ್ ಜೊತೆಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಆಡಳಿತ ಪಾರದರ್ಶಕವಾಗಿದೆ. ಪ್ರತಿಯೊಂದು ಯೋಜನೆ ಜನರಿಗೆ ತಲುಪುತ್ತಿವೆ. ಕಾಂಗ್ರೆಸ್ ಸರ್ಕಾರದ ಆಡಳಿತದ ವೈಖರಿಗೆ ಈ ಗೆಲುವು ಸಾಕ್ಷಿಯಾಗಿದೆ. ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತಕ್ಕೆ ಜನತೆಯ ಆಶೀರ್ವಾದ ಸದಾ ಇರುತ್ತದೆ ಎಂದಿದ್ದಾರೆ. ಜನಪರ ಆಡಳಿತಕ್ಕೆ ಹಿಡಿದ ಕನ್ನಡಿ:

ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳ ಗೆಲುವು ಸಿಎಂ ಸಿದ್ದರಾಮಯ್ಯ ಅವರ ಜನಪರ ಆಡಳಿತಕ್ಕೆ ಹಿಡಿದ ಕನ್ನಡಿ ಎಂದು ಹನುಮಸಾಗರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಅಗಸಿಮುಂದಿನ ಹೇಳಿದರು.

ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದ ನಿಮಿತ್ತ ಹನುಮಸಾಗರ ಗ್ರಾಮದಲ್ಲಿ ಹಮ್ಮಿಕೊಂಡ ವಿಜಯೋತ್ಸವದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸಿಹಿ ಹಂಚಿ ಮಾತನಾಡಿದರು.ಮುಖಂಡರಾದ ಸೂಚಪ್ಪ ದೇವರಮನಿ, ಬಸಪ್ಪ ದೋಟಿಹಾಳ, ಸಿದ್ದಯ್ಯ ಬಾಳಿಹಳ್ಳಿಮಠ, ಮುರ್ತುಜಾಸಾಬ ತಹಶೀಲ್ದಾರ, ಚಂದ್ರು ಹಿರೇಮಣಿ, ರಜಾಕ್ ಟೇಲರ್, ಈರಣ್ಣ ಬಾದಾಮಿ, ಮೌಲಾಲಿ ಮೋಟಗಿ, ಪ್ರವೀಣ್ ಸಿಂಹಾಸನ, ಪಂಚಾಕ್ಷರಿ ಹಡಪದ, ಕಳಕಪ್ಪ ನಿರ್ವಾಣಿ, ವೀರಣ್ಣ ಹುನಗುಂಡಿ, ಯಮನೂರ ಮಡಿವಾಳರ, ಗ್ರಾಪಂ ಸದಸ್ಯರಾದ ಸದಸ್ಯರಾದ ಶ್ರೀಶೈಲಪ್ಪ ಮೋಟಗಿ, ಶಿವಪ್ಪ ಕಂಪ್ಲಿ, ಭವಾನಿಸಾ ಪಾಟೀಲ, ಮಂಜುನಾಥ ಹುಲ್ಲೂರ, ಸಂಗಮೇಶ ಕರಂಡಿ, ಪ್ರಶಾಂತ ಕುಲಕರ್ಣಿ, ರಿಯಾಜ ಖಾಜಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನ್ನ ನೀಡುವ ಕಾಯಕ ಯೋಗಿ ಬದುಕು ಹಸನಾಗಿಸಿ: ವಿ.ಸಿ.ಉಮಾಶಂಕರ್
ಬಾಂಗ್ಲಾದಲ್ಲಿ ಹಿಂದೂಗಳ ಹತ್ಯೆ, ದೌರ್ಜನ್ಯ ಖಂಡಿಸಿ ಪ್ರತಿಭಟನೆ