ಶಿವಮೊಗ್ಗ: ನಗರದ ವಿವಿಧೆಡೆ ಶನಿವಾರ ಸಂಸದ ಬಿ.ವೈ.ರಾಘವೇಂದ್ರ ಅವರ ಜನ್ಮದಿನ ಆಚರಿಸಲಾಯಿತು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ನೇತೃತ್ವದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಅಭಿನಂದನೆ ಸಲ್ಲಿಸಿ ಶುಭ ಕೋರಲಾಯಿತು.ಈ ವೇಳೆ ಮಾತನಾಡಿದ ಅವರು, ಜಿಲ್ಲೆಗೆ ರಸ್ತೆ, ರೈಲ್ವೆ, ವಿಮಾನ ಸಂಪರ್ಕ ಕ್ಷೇತ್ರದಲ್ಲಿ ಮೂಲಸೌಕರ್ಯಕ್ಕೆ ಅತಿ ಹೆಚ್ಚು ಅನುದಾನ ತಂದಿರುವ ಬಿ.ವೈ.ರಾಘವೇಂದ್ರ ಅವರು ಸಿಗಂದೂರಿನಲ್ಲಿ ದೇಶದಲ್ಲಿಯೇ ಎರಡನೇ ಅತಿ ಉದ್ದದ ಕೇಬಲ್ ಸೇತುವೆ ನಿರ್ಮಾಣಕ್ಕೆ ಕಾರಣರಾಗಿದ್ದಾರೆ ಎಂದು ಬಣ್ಣಿಸಿದರು.
ಜಿಲ್ಲಾ ಮತ್ತು ವಾಣಿಜ್ಯ ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ನಿರ್ದೇಶಕರಾದ ವಿನೋದ್ ಕುಮಾರ್, ಡಾ.ಬಿ.ವಿ.ಲಕ್ಷ್ಮೀದೇವಿ ಗೋಪಿನಾಥ್, ಸಹನಾ ಸುಭಾಷ್, ಗಣೇಶ ಎಂ.ಅಂಗಡಿ, ಪ್ರದೀಪ್.ವಿ ಎಲಿ, ಎಸ್.ಪಿ.ಶಂಕರ್, ಸುರೇಶ್ ಕುಮಾರ್, ಮಾಜಿ ಅಧ್ಯಕ್ಷರಾದ ಟಿ.ಆರ್.ಅಶ್ವತ್ಥ್ ನಾರಾಯಣ ಶೆಟ್ಟಿ, ಎನ್.ಗೋಪಿನಾಥ್ ಇತರರಿದ್ದರು.ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ:
ಸಂಸದ ಬಿ.ವೈ.ರಾಘವೇಂದ್ರ ಅವರು ತಮ್ಮ ತಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಅಂಗವಿಕಲರಿಗೆ ತ್ರಿಚಕ್ರ ವಾಹನ ಮತ್ತು ಶ್ರವಣ ಉಪಕರಣಗಳನ್ನು ನೀಡುವ ಮೂಲಕ ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು.ಸಿಗಂದೂರು ಬ್ರಿಡ್ಜ್ ಮಾದರಿ ಕೇಕ್ :
ಸಂಸದ ಬಿ.ವೈ.ರಾಘವೇಂದ್ರ ಜನ್ಮದಿನ ಅಂಗವಾಗಿ ಶನಿವಾರ ಅವರ ಅಭಿಮಾನಿಗಳು ಸಿಗಂದೂರು ಚೌಡೇಶ್ವರಿ ಬ್ರಿಡ್ಜ್ ಮಾದರಿ ಕೇಕ್ ಅನ್ನು ತಯಾರಿಸಿದ್ದರು.ದೇಶದಲ್ಲೇ ಗಮನ ಸೆಳೆಯುವ ಸಿಂಗದೂರು ಸೇತುವೆ ನಿರ್ಮಿಸಲಾಗಿತ್ತು. ತಿಂಗಳ ಹಿಂದಷ್ಟೇ ಅದರ ಉದ್ಘಾಟನೆಯೂ ನಡೆದಿತ್ತು. ಹೀಗಾಗಿ ಸಂಸದ ಬಿ.ವೈ.ರಾಘವೇಂದ್ರ ಜನ್ಮದಿನಕ್ಕೆ ಅವರ ಅಭಿಮಾನಿಗಳು ಸಿಗಂದೂರು ಸೇತುವೆ ಮಾದರಿ ಕೇಕ್ ತಯಾರಿಸಿದ್ದರು.
ಸಂಸದ ಬಿ.ವೈ.ರಾಘವೇಂದ್ರ ಅವರು ಪತ್ನಿ ಸೇರಿದಂತೆ ಇಡೀ ಕುಟುಂಬ ಸಮೇತರಾಗಿ ಕೇಕ್ ಕತ್ತರಿಸಿ ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಿದರು.ಶಾಲಾ ಮಕ್ಕಳಿಗೆ ಸ್ವೇಟರ್ ವಿತರಣೆ:ದುರ್ಗಿಗುಡಿ ಸರ್ಕಾರಿ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಸಂಸದ ಬಿ.ವೈ.ರಾಘವೇಂದ್ರ ಶಾಲಾ ಮಕ್ಕಳಿಗೆ ಸ್ವೇಟರ್ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ಕಳೆದ ವರ್ಷದಲ್ಲಿ ಜಿಲ್ಲೆಯ ಸುಮಾರು 1 ಲಕ್ಷ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ಬ್ಯಾಗ್ ವಿತರಿಸಲಾಗಿತ್ತು. ಈ ಬಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಜಿಲ್ಲೆಯಲ್ಲಿ ಚಳಿಯಿಂದ ರಕ್ಷಣೆ ನೀಡಿ, ಅವರು ನಿರಂತರವಾಗಿ ಶಾಲೆಗೆ ಬರಲಿ ಎನ್ನುವ ದೃಷ್ಟಿಯಿಂದ ಯಾವುದೇ ಖಾಯಿಲೆಗಳಿಗೆ ಬಲಿಯಾಗಬಾರದೆಂಬ ಆಶಯದಿಂದ ಸುಮಾರು 60 ಸಾವಿರ ಶಾಲಾ ಮಕ್ಕಳಿಗೆ ಸ್ವೇಟರ್‌ನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳಿಗೆ ಸಂಸದರಿಗೆ ಜನ್ಮದಿನದ ಶುಭಾಶಯ ಕೋರಲಾಯಿತು. ಸಂಸದರು ಮಕ್ಕಳಿಗೆ ಸಿಹಿ ತಿನ್ನಿಸಿದರು. ಕೃಷ್ಣಾಷ್ಠಮಿ ಆದ್ದರಿಂದ ಮಕ್ಕಳು ಕೃಷ್ಣ ಮತ್ತು ರಾಧೆಯರ ವೇಷವನ್ನು ಧರಿಸಿ, ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ವಿಪ ಸದಸ್ಯ ಡಾ.ಧನಂಜಯ ಸರ್ಜಿ, ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ನಾಗರಾಜ್, ಮೋಹನ್‌ರೆಡ್ಡಿ, ಮಾಲತೇಶ್, ಕುಮಾರ್, ಶಾಂತಾ ಸುರೇಂದ್ರ, ರಾಘವೇಂದ್ರ, ವೀರಭದ್ರಪ್ಪ ಪೂಜಾರಿ, ಕಿರಣ್ ಮತ್ತಿತರರಿದ್ದರು.