ವಿಜ್ಞಾನ, ತಂತ್ರಜ್ಞಾನ ಹೊಸ ಶಕ್ತಿ ನೀಡಿದ ಸಿ.ವಿ.ರಾಮನ್‌

KannadaprabhaNewsNetwork |  
Published : Mar 03, 2026, 02:00 AM IST
2ಕೆಪಿಎಲ್25 ನಗರದ ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ನಿಮಿತ್ಯ ವಿಜ್ಞಾನದಲ್ಲಿ ಮಹಿಳೆ-ಅಭಿವೃದ್ದಿಶೀಲ ಭಾರತದ ಪ್ರೇರಕ ಶಕ್ತಿ ಎಂಬ ಘೋಷ ವಾಕ್ಯದೊಂದಿಗೆ ಆಯೋಜಿಸಿದ ಕಾರ್ಯಕ್ರಮ | Kannada Prabha

ಸಾರಾಂಶ

ಆಧುನಿಕ ತಂತ್ರಜ್ಞಾನ ತಕ್ಕಂತೆ ಅರಿವು ಬೆಳೆಸಿಕೊಳ್ಳುವುದು ಅಗತ್ಯ

ಕೊಪ್ಪಳ: ೨೦ನೇ ಶತಮಾನದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಹೊಸ ಶಕ್ತಿ ತಂದವರು ಪ್ರೊ. ಸಿ.ವಿ.ರಾಮನ್‌.ಸ್ವತಂತ್ರ ಪೂರ್ವದಲ್ಲಿಯೇ ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ನೋಬಲ್ ಪ್ರಶಸ್ತಿ ತಂದುಕೊಟ್ಟ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಜೀವನಾವಧಿ ಪ್ರಾಧ್ಯಾಪಕ ಪ್ರೊ.ಎಸ್.ಟಿ. ನಂದಿಬೇವೂರು ಹೇಳಿದರು.

ನಗರದ ಶ್ರೀಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ನಿಮಿತ್ತ ವಿಜ್ಞಾನದಲ್ಲಿ ಮಹಿಳೆ-ಅಭಿವೃದ್ಧಿಶೀಲ ಭಾರತದ ಪ್ರೇರಕ ಶಕ್ತಿ ಎಂಬ ಘೋಷ ವಾಕ್ಯದೊಂದಿಗೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಆಧುನಿಕ ತಂತ್ರಜ್ಞಾನ ತಕ್ಕಂತೆ ಅರಿವು ಬೆಳೆಸಿಕೊಳ್ಳುವುದು ಅಗತ್ಯ. ನಾವೆಲ್ಲರೂ ರೋಬೋಟ್ ಯುಗದಲ್ಲಿ ಇದ್ದೇವೆ ಇಂತಹ ಸಂದರ್ಭದಲ್ಲಿ ಆಧುನಿಕ ಕಾಲಕ್ಕೆ ತಕ್ಕಂತೆ ವಿಜ್ಞಾನದ ಅರಿವು ಪಡೆದುಕೊಳ್ಳುವುದು ಅಗತ್ಯವಾಗಿದೆ ಹಾಗೂ ಭಾರತ ಮತ್ತು ಪ್ರಪಂಚದ ವಿಜ್ಞಾನದಲ್ಲಿ ಆದ ಬೆಳವಣಿಗೆ ಹಾಗೂ ವಿಜ್ಞಾನಿಗಳ ಕೊಡುಗೆ ಅರಿವು ನಮಗೆ ಇರಬೇಕು. ಇಂತಹ ಕಾರ್ಯಕ್ರಮದಲ್ಲಿ ಜಗತ್ತಿಗೆ ಕೊಡುಗೆ ನೀಡಿದ ಎಲ್ಲ ವಿಜ್ಞಾನಿಗಳನ್ನು ಸ್ಮರಿಸುವುದು ನಮ್ಮೇಲ್ಲರ ಕರ್ತವ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗವಿಸಿರ್ಧಧೇಶ್ವರ ವಿದ್ಯಾವರ್ಧಕ ಟ್ರಸ್ಟ್ ಕಾರ್ಯದರ್ಶಿ ಡಾ.ಆರ್.ಮರೇಗೌಡ ಮಾತನಾಡಿ, ಸಿ.ವಿ.ರಾಮನ್ ಪ್ರಪಂಚ ಕಂಡ ಶ್ರೇಷ್ಠ ವಿಜ್ಞಾನಿ.ಅವರು ಭಾರತದ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಯಿಂದ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸುತ್ತಾರೆ.ವಿಜ್ಞಾನದ ಜ್ಞಾನ ಎಲ್ಲರು ಬೆಳೆಸಿಕೊಳ್ಳಬೇಕು.ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ನೀಡುವದರ ಮೂಲಕ ವಿಜ್ಞಾನದ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ.ಇಂತಹ ಕಾರ್ಯಕ್ರಮದ ಸದುಪಯೋಗ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಹೇಳಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಬಿ.ಕಂಬಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತ ಕೋರಿದರು. ಪ್ರೊ.ಶ್ರೀಧರ್ ಪೂಜಾರ್ ನಿರೂಪಿಸಿದರು. ಐಕ್ಯೂಎಸಿ ಸಂಯೋಜಕ ಡಾ.ಕೆ.ಕವಿತಾ ವಂದಿಸಿದರು. ಮಹಾವಿದ್ಯಾಯದ ಸಂಯೋಜಕ ಪ್ರೊ.ಎಚ್.ವಿ. ಆನಂದಹಳ್ಳಿ ಹಾಗೂ ಹಾಗೂ ಪ್ರಾಧ್ಯಾಪಕ ನಾಗರಾಜ್ ಬೊಮ್ಮನಾಳ್, ಡಾ.ಚನ್ನಬಸವ, ಡಾ. ನಾಗರಾಜ್ ದಂಡೋತಿ, ಡಾ.ಶೈಲಜಾ ಅರಲೇಮಠ, ಡಾ.ಆನಂದರಾವ ದೇಸಾಯಿ, ಡಾ.ನೀಲಾಂಭಿಕೆ ಹುದ್ದಾರ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಡಿನ ಅಭ್ಯುದಯಕ್ಕಾಗಿ ವಾಲ್ಮೀಕಿ ಸಮಾಜ ಹೋರಾಟ-ಸಚಿವ ಜಾರಕಿಹೊಳಿ
ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ: ಸಂಜೀವರೆಡ್ಡಿ