ಜಿಲ್ಲಾ ವಿಂಗಡನೆಗೆ ಎಲ್ಲ ಶಾಸಕರ ಸಭೆ ಕರೆಯಿರಿ

KannadaprabhaNewsNetwork |  
Published : Jul 15, 2025, 01:00 AM IST
ಗೋಕಾಕ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಶೋಕ ಪೂಜಾರಿ ಮಾತನಾಡಿದರು. | Kannada Prabha

ಸಾರಾಂಶ

ಸಚಿವ ಸತೀಶ ಜಾರಕಿಹೊಳಿ ಮತ್ತು ಮಹಿಳಾ ಮಕ್ಕಳ ಸಚಿವರು ಕೂಡಿ ಜಿಲ್ಲೆಯ ಎಲ್ಲಾ ಶಾಸಕರ ಸಭೆ ಕರೆದು ಅವರ ಅಭಿಪ್ರಾಯ ಪಡೆದು ಜಿಲ್ಲಾ ವಿಂಗಡನೆ ಮಾಡಬೇಕು

ಕನ್ನಡಪ್ರಭ ವಾರ್ತೆ ಗೋಕಾಕ

ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ನೂತನ ಜಿಲ್ಲೆ ಎಂದು ಘೋಷಿಸುವಂತೆ ಬರುವ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಬೆಳಗಾವಿ ಪ್ರಾದೇಶಿಕ ಆಯುಕ್ತರಲ್ಲಿ ನಿಯೋಗ ಹೋಗಿ ಗೋಕಾಕ ನೂತನ ಜಿಲ್ಲಾ ಮಾಡುವಂತೆ ಒತ್ತಾಯಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಹೇಳಿದರು.

ನಗರದ ತಮ್ಮ ಸ್ವ-ಗೃಹದಲ್ಲಿ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಿಎಂ ಸಿದ್ದರಾಮಯ್ಯ ಅವರು ಗಟ್ಟಿ ಮುಖ್ಯಮಂತ್ರಿ ಇದ್ದಾರೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಸಹ ಹೋರಾಟದಿಂದ ತಮ್ಮ ರಾಜಕೀಯ ಜೀವನ ಕಟ್ಟಿಕೊಂಡವರು. ಹಾಗಾಗಿ ಈ ಇಬ್ಬರು ಗಟ್ಟಿಯಾಗಿ ನಿಂತರೆ ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಗೋಕಾಕ ಜಿಲ್ಲೆ ಆಗುವುದರಲ್ಲಿ ಎರಡು ಮಾತಿಲ್ಲ. ಸಚಿವ ಸತೀಶ ಜಾರಕಿಹೊಳಿ ಮತ್ತು ಮಹಿಳಾ ಮಕ್ಕಳ ಸಚಿವರು ಕೂಡಿ ಜಿಲ್ಲೆಯ ಎಲ್ಲಾ ಶಾಸಕರ ಸಭೆ ಕರೆದು ಅವರ ಅಭಿಪ್ರಾಯ ಪಡೆದು ಜಿಲ್ಲಾ ವಿಂಗಡನೆ ಮಾಡಬೇಕು ಎಂದು ಒತ್ತಾಯಿಸಿದರು.

ದಿವಂಗತ ಜೆ.ಎಚ್.ಪಟೇಲ್ ಅವರ ಸರ್ಕಾರ ಗೋಕಾಕ ಜಿಲ್ಲೆಯಂದು ಘೋಷಿಸಿ ಕಾರಣಾಂತರಗಳಿಂದ ಹಿಂದೆ ಪಡೆದಿತ್ತು. ಅಂದಿನಿಂದ ಇಂದಿನವರೆಗೂ ಗೋಕಾಕ ಜಿಲ್ಲೆಗಾಗಿ ನಿರಂತರ ಹೋರಾಟಗಳು ನಡೆಯುತ್ತಾ ಬಂದಿದ್ದು, ಸರ್ಕಾರದ ನಿರ್ಣಯಗಳು ರಾಜಕೀಯ ವ್ಯವಸ್ಥೆಯ ಪೂರಕ ನಿರ್ಣಯಗಳಾಗಿ ಬಿಟ್ಟಿವೆ. ಹಾಗಾಗೀ ಬೆಳೆಗಾವಿ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಮಹಿಳಾ ಮಕ್ಕಳ ಕಲ್ಯಾಣ ಸಚಿವರು ಇದಕ್ಕೆ ವೇಗ ಒದಗಿಸಿ ಜಿಲ್ಲೆ ವಿಭಜನೆ ಮಾಡುವ ಕಾರ್ಯ ಮಾಡಬೇಕು ಎಂದರು.

ಜನಗಣತಿ ಆದೇಶದಲ್ಲಿ ಜಿಲ್ಲೆ ತಾಲೂಕು ಗ್ರಾಮಗಳ, ಹೋಬಳಿ ಸಂಬಂಧಿಸಿದಂತೆ ಡಿಸೆಂಬರ ತಿಂಗಳೊಳಗಾಗಿ ತಾವು ವಿಗಂಡಣೆಯ ಪ್ರಕ್ರಿಯೆ ನಡೆಸಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ಹಾಗಾಗಿ ಸರ್ಕಾರ ಆದಷ್ಟು ಬೇಗ ಡಿಸೆಂಬರ್ ಒಳಗಾಗಿ ಜಿಲ್ಲೆ ವಿಭಜನೆಯ ಪೂರಕವಾದ ನಿರ್ಣಯ ತಗೆದುಕೊಂಡು ಗೋಕಾಕ ಜಿಲ್ಲೆ ಮಾಡಬೇಕು. ಬೆಳಗಾವಿ ಜಿಲ್ಲೆ ವಿಭಜನೆಗೆ ಮಿನಮೇಷ ಏಕೆ?. ಸರ್ಕಾರ ಇದನ್ನು ಸ್ವಷ್ಟ ಪಡಿಸಬೇಕು. ಕಳೆದ 4 ದಶಕಗಳಿಂದ ಇಲ್ಲಿನ ಜನರು ಶಾಂತಿಯುತವಾಗಿ ಹೋರಾಟ ಮಾಡುತ್ತಾ ಬಂದಿದ್ದರು ಸಹ ಸರ್ಕಾರ ಇತರ ಬಗ್ಗೆ ಯಾವುದೇ ಪ್ರಕ್ರಿಯೆ ನೀಡಿಲ್ಲ ಎಂದರು.

ಪ್ರೊ.ಅರ್ಜುನ್ ಪಂಗಣ್ಣವರ ಮಾತನಾಡಿ, ಕಳೆದ ಎರೆಡ್ಮೂರು ದಶಕಗಳಿಂದ ರಾಜಕೀಯದಲ್ಲಿರುವ ರಾಜಕಾರಣಿಗಳು ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ನೂತನ ಜಿಲ್ಲಾ ಕೇಂದ್ರವನ್ನಾಗಿ ಮಾಡಿ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಸೇರಿಸಕೊಳ್ಳಬೇಕು. ಇಲ್ಲದಿದ್ದರೆ ಇತಿಹಾಸವೇ ಅವರನ್ನು ಪ್ರಶ್ನಿಸುವ ಕಾಲ ಬಂದಾಗ ಅವರಲ್ಲಿ ಉತ್ತರವಿರುವುದಿಲ್ಲ. ಹಾಗಾಗೀ ಆದಷ್ಟು ಬೇಗ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡೆಸಿಕೊಂಡು ಗೋಕಾಕ ನೂತನ ಜಿಲ್ಲೆ ಮಾಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ದಸ್ತಗಿರಿ ಪೈಲವಾನ್, ಪುಟ್ಟು ಖಾನಾಪೂರೆ, ಡಾ. ಪ್ರವಿಣ ನಾಯಿಕ, ಮಲ್ಲಪ್ಪ ಜಿಟ್ಟೆನ್ನರವ, ಸಂಜೀವ ಪೂಜಾರಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''