ಕನ್ನಡಪ್ರಭವಾರ್ತೆ ತೀರ್ಥಹಳ್ಳಿ
ತಾಲೂಕಿನ ಅರಳಸುರುಳಿ ಸಮೀಪದ ಬಂದ್ಯಾ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಬುಧವಾರ ಆರಂಭವಾದ 7 ದಿನಗಳ 2000ನೇ ಮದ್ಯವರ್ಜನ ಶಿಬಿರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿ, ಕುಡಿತದ ಚಟಕ್ಕೆ ಬಲಿಯಾಗಿ ಸುಂದರವಾದ ಜೀವನದ ಬದಲಿಗೆ ವ್ಯಸನಗಳ ದಾಸರಾಗದೇ ಬದುಕನ್ನು ಗಂಭೀರವಾಗಿ ತೆಗೆದುಕೊಳ್ಳಿ ಎಂದು ಮದ್ಯವ್ಯಸನಿಗಳಿಗೆ ಹಿತವಚನ ನುಡಿದರು.
ತೀರ್ಥಹಳ್ಳಿ ತಾಲೂಕಿನಲ್ಲಿ 2004ರಿಂದ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ನಡೆದಿರುವ ಸಮಾಜಮುಖಿ ಕಾರ್ಯಗಳು ಸರ್ಕಾರದ ಯೋಜನೆಗಳಿಗಿಂತಲೂ ಅಧಿಕವೇ ಆಗಿವೆ. ಮದ್ಯವರ್ಜನ ಶಿಬಿರವೂ ಸೇರಿದಂತೆ ನಮ್ಮ ತಾಲೂಕಿನಲ್ಲಿ ನಡೆದಿರುವ ಜನಪರವಾದ ಕೌಂಟರ್‌ಗಳಿಗೆ ಅಪಾರ ಹಣವೂ ವೆಚ್ಚವಾಗಿದೆ ಎಂಬುದೂ ಗಮನಾರ್ಹ ಸಂಗತಿ. ಇಂದಿಲ್ಲಿ ಆರಂಭಗೊಂಡಿರುವ ಒಂದು ವಾರದ ಶಿಬಿರ ನವ ಜೀವನಕ್ಕೆ ಬೇಕಾದ ಅಮೂಲ್ಯ ಮಾರ್ಗದರ್ಶನ ಇಲ್ಲಿ ದೊರೆಯಲಿದ್ದು ಹೊಸ ಮನುಷ್ಯರಾಗಿ ಹೊರ ಬನ್ನಿ ಎಂದರು.ಅರಳಸುರುಳಿ ಗ್ರಾಪಂ ಅಧ್ಯಕ್ಷೆ ಸುಜಾತಾ ಶ್ರೀನಿವಾಸ್, ಮದ್ಯವರ್ಜನ ಶಿಬಿರದ ಅಧ್ಯಕ್ಷ ಎಚ್.ಎಸ್.ರಾಘವೇಂದ್ರ, ಗ್ರಾಮಾಭಿವೃದ್ದಿ ಯೋಜನೆಯ ನಿರ್ದೆಶಕ ಮುರುಳಿಧರ ಶೆಟ್ಟಿ, ಸೊಪ್ಪುಗುಡ್ಡೆ ರಾಘವೇಂದ್ರ, ಲಿಂಗಪ್ಪ ಗೌಡ, ಗಿಡ್ಡಪ್ಪ ಗೌಡ,ಕೆ.ಎಸ್.ನಾರಾಯಣ ರಾವ್, ಯೋಜನಾಧಿಕಾರಿ ಜಗದೀಶ್ ಇದ್ದರು. ಶಿಬಿರದಲ್ಲಿ 60 ಮಂದಿ ಶಿಬಿರಾರ್ಥಿಗಳು ಇದ್ದರು.