ಮಧ್ಯಸ್ಥಗಾರರ ಮೂಲಕ ಪ್ರಕರಣಗಳ ಸಂಧಾನ ಅಭಿಯಾನ: ನ್ಯಾ.ಮಂಜುಳ

KannadaprabhaNewsNetwork |  
Published : Jul 20, 2025, 01:21 AM IST
19ಕೆಪಿಎಲ್ಎನ್ಜಿ01 :  | Kannada Prabha

ಸಾರಾಂಶ

ಮಧ್ಯಸ್ಥಗಾರರ ಮೂಲಕ ರಾಜಿ ಸಂಧಾನ ಏರ್ಪಡಿಸಿ ಪ್ರಕರಣಗಳ ಇತ್ಯರ್ಥಕ್ಕೆ ಅಭಿಯಾನ ಆರಂಭಿಸಲಾಗಿದೆ. ಕಕ್ಷಿದಾರರು ಇದರ ಸದುಪಯೋಗಪಡಿಸಿ ಕೊಳ್ಳಬೇಕೆಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಮದ್ಯೆಸ್ಥಗಾರರ ಮೂಲಕ ರಾಜಿ ಸಂಧಾನ ಏರ್ಪಡಿಸಿ ಪ್ರಕರಣಗಳ ಇತ್ಯರ್ಥಕ್ಕೆ ಅಭಿಯಾನ ಆರಂಭಿಸಲಾಗಿದೆ. ಕಕ್ಷಿದಾರರು ಇದರ ಸದುಪಯೋಗಪಡಿಸಿ ಕೊಳ್ಳಬೇಕೆಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪ ಕರೆ ನೀಡಿದರು.

ಸ್ಥಳೀಯ ನ್ಯಾಯಾಲಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಷ್ಟ್ರಕ್ಕಾಗಿ ವಿಶೇಷ ಮಧ್ಯಸ್ಥಿಕೆ ಅಭಿಯಾನ ರೂಪಿಸಲಾಗಿದೆ. ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳನ್ನು ಮದ್ಯೆಸ್ಥಗಾರರ ಮೂಲಕ ಇತ್ಯರ್ಥಪಡಿಸಲಾಗುತ್ತದೆ. ಮಧ್ಯಸ್ಥಗಾರಿಕೆ ಮೂಲಕ ಯಾವ ಪ್ರಕರಣಗಳ ಇತ್ಯರ್ಥ ಆಗುತ್ತವೆ ಎಂದು ನಿರ್ಧರಿಸಿ ಮಧ್ಯಸ್ಥಗಾರರ ಮೂಲಕ ಇತ್ಯರ್ಥಪಡಿಸಿಕೊಂಡ ಪ್ರಕರಣಗಳಲ್ಲಿ ಮೇಲ್ಮನಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಏಕೆಂದರೆ ಪ್ರಕರಣದ ಎರಡು ಕಡೆಯ ಕಕ್ಷಿದಾರರ ಒಪ್ಪಂದದ ಮೇರೆಗೆ ಪ್ರಕರಣ ಇತ್ಯರ್ಥವಾಗಿರುತ್ತದೆ. ಮಧ್ಯಸ್ಥಗಾರರ ಮೂಲಕ ಪ್ರಕರಣ ಬಗೆಹರಿಸಿಕೊಂಡರೆ ನ್ಯಾಯಾಲಯ ಸಮಯ ಉಳಿಯುವ ಜೊತೆಗೆ ಕಕ್ಷಿದಾರರು ವೃತಾ ಅಲೆಯುವುದು ತಪ್ಪುತ್ತದೆ ಮತ್ತು ಖರ್ಚು ಕಡಿಮೆಯಾಗುತ್ತದೆ. ಮಧ್ಯಸ್ಥಗಾರರ ಮೂಲಕ ಪ್ರಕರಣಗಳ ಇತ್ಯರ್ಥ ಅಭಿಯಾನವು ಅಕ್ಟೋಬರ್‌ವರೆಗೆ ನಡೆಯಲಿದೆ.

ಈ ವೇಳೆ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಅಂಬಣ್ಣ ಕೆ. ವಕೀಲರ ಸಂಘದ ಅಧ್ಯಕ್ಷ ಭೂಪನಗೌಡ ಕರಡಕಲ್, ಹಿರಿಯ ನ್ಯಾಯವಾದಿಗಳಾದ ನಾಗಪ್ಪ ಸರ್ಜಾಪುರ, ಕೆಕೆ ವಿಶ್ವನಾಥ, ಮಾನಪ್ಪ ವಾಲ್ಮೀಕಿ, ಗಿರೀಶ, ನಾಗರಾಜ ಗಸ್ತಿ, ಶಿವಲಿಂಗಪ್ಪ, ಬಸವಲಿಂಗಪ್ಪ ವಸ್ತçದ ಸೇರಿದಂತೆ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ