ಕನ್ನಡಪ್ರಭ ವಾರ್ತೆ ಮಂಗಳೂರು
ಇತ್ತೀಚೆಗೆ ವ್ಯಾಪಾರಿಯೊಬ್ಬ ರೈತರ ಕಾರ್ಡನ್ನು ದುರುಪಯೋಗಪಡಿಸಿಕೊಂಡು ಬರ್ಮಾ(ಮ್ಯಾನ್ಮಾರ್) ಮೂಲದ ಕಳಪೆ ಗುಣಮಟ್ಟದ ಅಡಕೆಯನ್ನು ಇಲ್ಲಿನ ಸ್ಥಳೀಯ ಅಡಕೆಯೊಂದಿಗೆ ಬೆರೆಸಿ ಕ್ಯಾಂಪ್ಕೊ ಪುತ್ತೂರು ಶಾಖೆಯಲ್ಲಿ ಮಾರಾಟ ಮಾಡಲು ಪ್ರಯತ್ನ ಪಟ್ಟಿರುತ್ತಾರೆ. ಆದರೆ ನಮ್ಮ ಅಧಿಕಾರಿಯ ದಕ್ಷತೆ ಮತ್ತು ಚಾಕಚಕ್ಯತೆಯಿಂದಾಗಿ ಆತನ ಕಪಟತನ ಬಯಲಾಗಿದೆ.
ಇಂತಹ ಮೋಸದ ವ್ಯಾಪಾರದಲ್ಲಿ ಯಾರೂ ಕೂಡ ಭಾಗಿಯಾಗಬಾರದು. ಅದಕ್ಕಾಗಿ ತಮ್ಮ ಕಾರ್ಡನ್ನು ಯಾರೂ ಕೂಡ ದುರುಪಯೋಗಪಡಿಸಲು ಅನುವು ಮಾಡಿಕೊಡಬಾರದು. ತಾವು ಜಾಗರೂಕರಾಗದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಸ್ಥಳೀಯ ಅಡಕೆಯ ದರ ಸ್ಥಿರತೆಯ ಮೇಲೆ ಮಾರಣಾಂತಿಕ ಹೊಡೆತ ನೀಡುವುದರಲ್ಲಿ ಸಂಶಯವಿಲ್ಲ. ಎಲ್ಲರೂ ತುಂಬಾ ಎಚ್ಚರಿಕೆಯಿಂದ ಇದ್ದು ಈ ರೀತಿಯ ಮೋಸದ ಜಾಲಕ್ಕೆ ಬಲಿಯಾಗಬಾರದಾಗಿ ವಿನಂತಿ ಎಂದು ಕ್ಯಾಂಪ್ಕೋ ಪ್ರಕಟಣೆ ತಿಳಿಸಿದೆ.