ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ದಸರಗುಪ್ಪೆ ಗ್ರಾಮದಲ್ಲಿ ಸುಮಾರು 400 ವರ್ಷಗಳ ಇತಿಹಾಸ ಇರುವ ಪುರಾತನ ಕಲ್ಯಾಣಿ ಜೀರ್ಣೋದ್ಧಾರ ಕಾರ್ಯವನ್ನು ಎನ್‌ಎಸ್‌ಎಸ್ ವಿದ್ಯಾರ್ಥಿಗಳು ನಡೆಸಿದರು.ಶೇಷಾದ್ರಿಪುರಂ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಶಾರದಾ ವಿಲಾಸ ಕಾನೂನು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ರೋಟರಿ ಸಂಸ್ಥೆ ಆಶ್ರಯದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಷ್ಟ್ರಪತಿ ಪ್ರಶಸ್ತಿ ವಿಜೇತ ಹಾಗೂ ಎನ್‌ಎಸ್‌ಎಸ್ ಅಧಿಕಾರಿ ಶೇಷಾದ್ರಿಪುರಂ ಕಾಲೇಜಿನ ಡಾ.ರಾಘವೇಂದ್ರ ಮಾತನಾಡಿ, ಪುರಾತನ ಕಾಲದ ದೇಗುಲಗಳು ಕಲ್ಯಾಣಿಗಳು ಹಾಗೂ ಮಂಟಪಗಳನ್ನು ಕಾಪಾಡಿಕೊಂಡು ಅದನ್ನು ಮುಂದಿನ ಪೀಳಿಗೆ ಕೊಡುಗೆಯಾಗಿ ನೀಡಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಸಾಮಾಜಿಕ ಕಾರ್ಯಕರ್ತ ಜಯರಾಮ ಮಾತನಾಡಿದರು. ಶಾರದಾ ವಿಲಾಸ್ ಕಾನೂನು ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಸವಿತ ಎಚ್.ಎಂ., ರೋಟರಿ ಸಂಸ್ಥೆ ಕಾರ್ಯದರ್ಶಿ ನಾಗೇಂದ್ರ, ಶೇಷಾದ್ರಿಪುರಂ ಎಂಜಿನಿಯರಿಂಗ್ ಕಾಲೇಜು ಅಧ್ಯಾಪಕರು ಸೇರಿದಂತೆ ಸಮರ್ಪಣಾ ತಂಡದ ಸಚಿನ್ ರಾಜ್ ಹಾಗೂ ಅವರ ತಂಡ ಜೊತೆಗೂಡಿ ಕಲ್ಯಾಣಿಗೆ ಬಣ್ಣ ಹಚ್ಚಿವ ಮೂಲಕ ಕಲ್ಯಾಣಿಯ ಮೆರುಗನ್ನು ಮತ್ತಷ್ಟು ಹೆಚ್ಚಿಸಿದರು.ಈ ವೇಳೆ ಗ್ರಾಪಂ ಅಧ್ಯಕ್ಷ ಸರಿತಾ, ಉಪಾಧ್ಯಕ್ಷ ಶ್ರೀಧರ್, ಸದಸ್ಯರಾದ ಲೋಕೇಶ್, ರಾಮಚಂದ್ರ, ಪಿಡಿಒ ಕೃಷ್ಣೇಗೌಡ, ಪಿಎಲ್‌ಡಿ ಬ್ಯಾಂಕ್ ಸದಸ್ಯರಾದ ಪ್ರಾಣೇಶ್, ಡೇರಿ ಅಧ್ಯಕ್ಷ ರಾಮಚಂದ್ರ ಸೇರಿದಂತೆ ದರಸಗುಪ್ಪೆ ಮತ್ತು ಕಪ್ಪರನ ಕೊಪ್ಪಲು ಗ್ರಾಮದ ಮುಖಂಡರು, ವಿದ್ಯಾರ್ಥಿಗಳು ಸ್ವಯಂ ಸೇವಕರುಗಳು ಇದ್ದರು.
ನಾಳೆ ಅಂಬೇಡ್ಕರ್ ಪರಿನಿಬ್ಬಾಣ ದಿನಾಚರಣೆಮಂಡ್ಯ:
ಧರ್ಮ ವಿಜಯ ಬುದ್ಧವಿಹಾರ ಟ್ರಸ್ಟ್‌ನಿಂದ ಡಿ.೬ರಂದು ಅಂಬೇಡ್ಕರ್ ಪರಿನಿಬ್ಬಾಣ ದಿನದ ಅಂಗವಾಗಿ ಇಲ್ಲಿನ ಗಾಂಧಿನಗರ ಹತ್ತನೇ ಕ್ರಾಸ್‌ನಲ್ಲಿ ನುಡಿ-ನಮನ, ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ನಿರಂಜನ್ ಹೇಳಿದರು.ಶಾಸಕ ಪಿ.ರವಿಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು. ಹಾಸ್ಯ ಕಲಾವಿದ ಚಂದ್ರಪ್ರಭಾ, ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ರಾಜ್ಯ ಸಣ್ಣ ಕೈಗಾರಿಕೆಗಳ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮೀ, ಅಕ್ಕ ಐಎಎಸ್ ಅಕಾಡೆಮಿ ಸಂಸ್ಥಾಪಕ ಡಾ.ಶಿವಕುಮಾರ್ ಪಾಲ್ಗೊಳ್ಳುವರು. ತಬಲವಾದಕ ವೆಂಕಟೇಶ್ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಗೋಷ್ಠಿಯಲ್ಲಿ ಶಿವಶಂಕರ್, ಮೋಹನ್‌ಕುಮಾರ್, ವೆಂಕಟಾಚಲಯ ಇದ್ದರು.