ಮಾನಹಾನಿ ದೂರನ್ನು ಕ್ರೈಂನಡಿ ತನಿಖೆಗೊಪ್ಪಿಸುವುದು ಸಲ್ಲದು: ಹೈ

KannadaprabhaNewsNetwork |  
Published : Oct 31, 2026, 03:30 AM ISTUpdated : Oct 31, 2026, 04:39 AM IST
court

ಸಾರಾಂಶ

ಮಾನಹಾನಿ ಆರೋಪದ ಖಾಸಗಿ ದೂರನ್ನು ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ ಕಲಂ 156(3) ಅಡಿ ಪೊಲೀಸ್‌ ತನಿಖೆಗೆ ಒಪ್ಪಿಸುವುದು ಸರಿಯಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

 ಬೆಂಗಳೂರು : ಮಾನಹಾನಿ ಆರೋಪದ ಖಾಸಗಿ ದೂರನ್ನು ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ ಕಲಂ 156(3) ಅಡಿ ಪೊಲೀಸ್‌ ತನಿಖೆಗೆ ಒಪ್ಪಿಸುವುದು ಸರಿಯಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ತಮ್ಮ ವಿರುದ್ಧದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ತುಮಕೂರಿನ ಎಸ್‌.ಡಿ. ವಿಜಯಕುಮಾರ್‌ ಮತ್ತು ಎಸ್‌.ಡಿ.ಮೋಹನ್‌ಕುಮಾರ್‌ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್‌ ಅವರ ಪೀಠ ಈ ರೀತಿ ಸ್ಪಷ್ಟಪಡಿಸಿದೆ.

ಪ್ರಮಾಣಿತ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಅನುಸರಿಸಬೇಕು

ಮಾನಹಾನಿ ಆರೋಪದ ಖಾಸಗಿ ದೂರನ್ನು ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ ಕಲಂ 156(3)ಅಡಿ ಪೊಲೀಸ್‌ ತನಿಖೆಗೆ ಒಪ್ಪಿಸುವುದು ಸರಿಯಲ್ಲ. ಬದಲಾಗಿ ಕಾನೂನಿನ ಪ್ರಕಾರ ಸಂಜ್ಞೆ (ಕಾಗ್ನಿಜೆನ್ಸ್‌) ಪಡೆದು, ಸೆಕ್ಷನ್‌ 200ರಡಿ ಪ್ರಮಾಣಿತ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಅನುಸರಿಸಬೇಕು ಎಂದು ಹೇಳಿದೆ.

ಇದೇ ವೇಳೆ ಮಾನಹಾನಿ ಆರೋಪ ಸಂಬಂಧ ಅರ್ಜಿದಾರರ ವಿರುದ್ಧ ಪೊಲೀಸ್‌ ತನಿಖೆಗೆ ವಹಿಸಿದ್ದ ಹಾಗೂ ತನಿಖಾ ವರದಿ ಆಧರಿಸಿ ವಿಚಾರಣೆ ಮುಂದುವರಿಸಿದ್ದ ವಿಚಾರಣಾ ನ್ಯಾಯಾಲಯದ ಕ್ರಮವನ್ನು ಪೀಠ ರದ್ದುಪಡಿಸಿದೆ. ಆದರೆ, ಖಾಸಗಿ ದೂರಿನ ನೋಂದಣಿ ಹಂತದಿಂದ ಪ್ರಕರಣವನ್ನು ಕಾನೂನುಬದ್ಧವಾಗಿ ಮುಂದುವರಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ.

ಪ್ರಕರಣದ ವಿವರ

ಪ್ರಕರಣದ ದೂರುದಾರೆಯಾದ ಬಿ.ಆರ್‌.ರಾಜೇಶ್ವರಿ ಮತ್ತು ಅರ್ಜಿದಾರರ ನಡುವೆ ಆಸ್ತಿಗೆ ಸಂಬಂಧಿಸಿದ ವ್ಯಾಜ್ಯಗಳು ನ್ಯಾಯಾಲಯಕ್ಕೆ ವಿಚಾರಣಾ ಹಂತದಲ್ಲಿದ್ದವು. ಈ ಮಧ್ಯೆ ರಾಜೇಶ್ವರಿ ಅವರು ವಿಚಾರಣಾ ನ್ಯಾಯಾಲಕ್ಕೆ ಖಾಸಗಿ ದೂರು ದಾಖಲಿಸಿ, ಅರ್ಜಿದಾರರು 2018ರ ಜ.17ರಂದು ಪತ್ರಿಕೆಗಳಲ್ಲಿ ನೀಡಿರುವ ಸಾರ್ವಜನಿಕ ಪ್ರಕಟಣೆಯಲ್ಲಿ ತಾವು ಆಸ್ತಿ ದಾಖಲೆಗಳನ್ನು ಸೃಷ್ಟಿಸಿ, ಅಧಿಕಾರಿಗಳನ್ನು ವಂಚಿಸಿ, ಸಾರ್ವಜನಿಕರಿಗೆ ಆಸ್ತಿ ಪರಭಾರೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ತಮ್ಮೊಂದಿಗೆ ಯಾವುದೇ ವ್ಯವಹಾರ ನಡೆಸದಂತೆ ಸಾರ್ವಜನಿಕರಿಗೆ ತಿಳಿಸಿದ್ದಾರೆ. ಇದರಿಂದ ಸಮಾಜದಲ್ಲಿ ತಮ್ಮ ಗೌರವ ಮತ್ತು ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ತಡೆಯಾಜ್ಞೆ ಇದ್ದರೂ ಪೊಲೀಸರಿಂದ ಚಾರ್ಜ್‌ಶೀಟ್‌: ಹೈಕೋರ್ಟ್‌ ಗರಂ
ಪ್ರೀತಿಗೆ ಪೋಷಕರು ವಿರೋಧ: ಪ್ರೇಮಿಗಳಿಂದ ಆತ್ಮಹತ್ಯೆ ಯತ್ನ