ಉಗ್ರರನ್ನು ಸೆರೆ ಹಿಡಿದು ಸಾರ್ವಜನಿಕವಾಗಿ ಗಲ್ಲಿಗೇರಿಸಿ: ಡಾ.ಸಂತೋಷ ಶೆಟ್ಟರ

KannadaprabhaNewsNetwork |  
Published : Apr 27, 2025, 01:47 AM IST
ಲೋಕಾಪುರ ಬಸವೇಶ್ವರ ವೃತ್ತದಲ್ಲಿ ಪಹಲ್ಗಾಮ್ ದಾಳಿ ಖಂಡಿಸಿ ಮೌನ ಪ್ರತಿಭಟನೆ ಹಾಗೂ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ಶಾಂತಿ ಕೋರಿ ಮೊಂಬತ್ತಿ ಬೆಳಗಿದರು. ಈ ವೇಳೆ ವಕೀಲರಾದ ಶಿವರಾಜ ಬಾಸುತ್ಕರ, ಮಲ್ಲಪ್ಪ ಅಂಗಡಿ, ಡಾ. ಸಂತೋಷ ಶೆಟ್ಟರ, ಕೃಷ್ಣಾ ಸಾಳುಂಕಿ ಇನ್ನಿತರರು ಇದ್ದರು. | Kannada Prabha

ಸಾರಾಂಶ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಅಮಾಯಕ ಪ್ರವಾಸಿಗರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ ಘಟನೆ ಖಂಡನೀಯ, ಉಗ್ರವಾದ ಬೆಂಬಲಿಸುವ ದೇಶ ಹಾಗೂ ಸಂಘಟನೆಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಡಾ.ಸಂತೋಷ ಶೆಟ್ಟರ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರು ಅಮಾಯಕ ಪ್ರವಾಸಿಗರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ ಘಟನೆ ಖಂಡನೀಯ, ಉಗ್ರವಾದ ಬೆಂಬಲಿಸುವ ದೇಶ ಹಾಗೂ ಸಂಘಟನೆಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಡಾ.ಸಂತೋಷ ಶೆಟ್ಟರ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪಹಲ್ಗಾಮ್ ದಾಳಿ ಖಂಡಿಸಿ ಮೌನ ಪ್ರತಿಭಟನೆ ಹಾಗೂ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ಶಾಂತಿ ಕೋರಿ ಮೊಂಬತ್ತಿ ಬೆಳಗಿ ಮಾತನಾಡಿದ ಅವರು, ಹಿಂಸಾಚಾರದಲ್ಲಿ ತೊಡಗಿದ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ನೀಡಿ ಉಗ್ರಗಾಮಿಗಳನ್ನು ಸಂಪೂರ್ಣ ನಿರ್ಣಾಮ ಮಾಡುವ ಕಾರ್ಯವನ್ನು ಕೇಂದ್ರ ಸರಕಾರ ಕೈಗೊಳ್ಳಬೇಕು, ಇದು ಮನುಷ್ಯರ ಮೇಲೆ ನಡೆದ ಕೃತ್ಯವಲ್ಲ, ಮನುಷ್ಯತ್ವದ ಮೇಲೆ ನಡೆದ ದಾಳಿಯಾಗಿದೆ, ಪ್ರವಾಸಿಗರನ್ನು ಹೀನಾಯವಾಗಿ ಕೊಂದ ಉಗ್ರರನ್ನು ತಕ್ಷಣ ಸೆರೆ ಹಿಡಿದು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.

ವಕೀಲರಾದ ಶಿವರಾಜ ಬಾಸುತಕರ ಮಾತನಾಡಿ, ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಆದರೆ ಪ್ರತ್ಯೇಕತಾವಾದಿಗಳು ಕಣಿವೆಯಲ್ಲಿನ ಶಾಂತಿ ಕದಡಲು ಸತತ ಪ್ರಯತ್ನ ನಡೆಸಿದ್ದಾರೆ. ಕಾಶ್ಮೀರದಲ್ಲಿ ಶಾಂತಿ, ಸುವ್ಯವಸ್ಥೆ ಮರುಸ್ಥಾಪಿಸಿ ಕೇಂದ್ರ ಸರಕಾರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದೆ. ಆದರೆ ಉಗ್ರರು ವಲಸೆ ಕಾರ್ಮಿಕರು, ಮಾರುಕಟ್ಟೆಗಳ ಮೇಲೆ ದಾಳಿ ನಡೆಸಿ ಅಶಾಂತಿ ಮೂಡಿಸಿದ್ದಾರೆ. ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ ಭೀತಿ ಸೃಷ್ಟಿಸುವ ಯತ್ನ ಮಾಡಿದ್ದಾರೆ, ಕೇಂದ್ರ ಸರಕಾರ ಕಠಿಣ ಕ್ರಮ ಕೈಗೊಂಡು ಉಗ್ರರಿಗೆ ತಕ್ಕ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಶಿಕ್ಷಕ ಎಸ್.ಎಂ.ರಾಮದುರ್ಗ, ಮಲ್ಲಪ್ಪ ಅಂಗಡಿ ಮಾತನಾಡಿದರು. ಈ ವೇಳೆ ಕೃಷ್ಣಾ ಸಾಳುಂಕಿ, ಲೋಕಣ್ಣಾ ಉಳ್ಳಾಗಡ್ಡಿ, ಕೃಷ್ಣಾ ಹಂಚಾಟೆ, ಭೀಮಶಿ ಅವರಾದಿ, ಸುನೀಲ ವಸ್ತ್ರದ, ಹಣಮಂತಗೌಡ ಪಾಟೀಲ, ಅನೀಲ ಹಂಚಾಟೆ, ಗುರು ಘಾಟಗೆ, ಶಿವು ನಾವ್ಹಿ, ಲೋಕಾಪುರ ಪಟ್ಟಣದ ಸಾರ್ವಜನಿಕರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ