ಕನ್ನಡಪ್ರಭ ವಾರ್ತೆ ವಿಜಯಪುರ ಥಾರ್ ಕಾರಿನಲ್ಲಿ ಹೊರಟಿದ್ದ ವೇಳೆ ಅಪರಿಚಿತರು ಕಾರಿಗೆ ಟಿಪ್ಪರ್ ಡಿಕ್ಕಿ ಹೊಡೆಸಿ, ನಂತರ ಮನಬಂದಂತೆ ಗುಂಡು ಹಾರಿಸಿ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಅಲಿಯಾಬಾದ ಬಳಿ ಮಂಗಳವಾರ ಮಧ್ಯಾಹ್ನ ಜರುಗಿದೆ.ತಾಂಗರೂನ ದೊಡ್ಡಿಯ ನಿವಾಸಿ ರಾಜು ಖರೆ (40) ಎಂಬಾತ ಕೊಲೆಯಾದ ದುರ್ದೈವಿ.
ಕನ್ನಡಪ್ರಭ ವಾರ್ತೆ ವಿಜಯಪುರ
ಥಾರ್ ಕಾರಿನಲ್ಲಿ ಹೊರಟಿದ್ದ ವೇಳೆ ಅಪರಿಚಿತರು ಕಾರಿಗೆ ಟಿಪ್ಪರ್ ಡಿಕ್ಕಿ ಹೊಡೆಸಿ, ನಂತರ ಮನಬಂದಂತೆ ಗುಂಡು ಹಾರಿಸಿ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಅಲಿಯಾಬಾದ ಬಳಿ ಮಂಗಳವಾರ ಮಧ್ಯಾಹ್ನ ಜರುಗಿದೆ.ತಾಂಗರೂನ ದೊಡ್ಡಿಯ ನಿವಾಸಿ ರಾಜು ಖರೆ (40) ಎಂಬಾತ ಕೊಲೆಯಾದ ದುರ್ದೈವಿ. ಸ್ಥಳಕ್ಕೆ ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ ಹಾಗೂ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ರಾಜು ಖರೆ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ, ರಿಯಲ್ ಎಸ್ಟೇಟ್ ಉದ್ಯಮದ ವ್ಯವಹಾರಕ್ಕೆ ಸಂಬಂಧಿಸಿದಂತೆ ಹತ್ಯೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ವಿಜಯಪುರ ಗ್ರಾಮೀಣ ಠಾಣೆ ವ್ಯಾಪ್ತಿ ಘಟನೆ ಜರುಗಿದೆ.
ಘಟನೆಯ ವಿವರ:
ಮಂಗಳವಾರ ಮಧ್ಯಾಹ್ನ ತನ್ನದೇ ಕೆಂಪು ಬಣ್ಣದ ಕಾರಿನಲ್ಲಿ (ಥಾರ್) ರಾಜು ಖರೆ ಹೊರಟಿದ್ದರು. ಈ ವೇಳೆ ಎದುರಿನಿಂದ ತಂದು ಟಿಪ್ಪರ್‌ವೊಂದು ಡಿಕ್ಕಿ ಹೊಡೆಸಲಾಗಿದೆ. ಬಳಿಕ ದುಷ್ಕರ್ಮಿಗಳು ಸುಮಾರು 6 ಸುತ್ತು ಗುಂಡು ಹಾರಿಸಿ ಕೊಲೆಮಾಡಿ ಪರಾರಿಯಾಗಿದ್ದಾರೆ. ಈ ವೇಳೆ ಸ್ಥಳದಲ್ಲೆ ಕೆಲ ಗುಂಡುಗಳು ಸಹ ಬಿದ್ದಿರುವುದು ಪತ್ತೆಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.