ಗಡಿ ವಿಚಾರದಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು

KannadaprabhaNewsNetwork | Published : Feb 25, 2025 12:48 AM

ಸಾರಾಂಶ

ಬೆಳಗಾವಿ ಗಡಿ ಭಾಗದಲ್ಲಿ ಭಾಷೆ ಆಧಾರದ ಮೇಲೆ ಗಲಾಟೆ ನಡೆಯುತ್ತದೆ. ಬಹಳ ಎಚ್ಚರಿಕೆಯಿಂದ ನಾವು ನಡೆದುಕೊಳ್ಳಬೇಕು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ತುಮಕೂರುಬೆಳಗಾವಿ ಗಡಿ ಭಾಗದಲ್ಲಿ ಭಾಷೆ ಆಧಾರದ ಮೇಲೆ ಗಲಾಟೆ ನಡೆಯುತ್ತದೆ. ಬಹಳ ಎಚ್ಚರಿಕೆಯಿಂದ ನಾವು ನಡೆದುಕೊಳ್ಳಬೇಕು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಇದನ್ನು ಹೆಚ್ಚು ಬೆಳೆಸುವುದಕ್ಕೆ ಬಿಡಬಾರದು. ನಮ್ಮಲ್ಲಿ ಈ ರೀತಿ ಘಟನೆ ನಡೆದಾಗ ನಾವು ಕ್ರಮ ಕೈಗೊಳ್ಳುತ್ತೇವೆ. ಕಾನೂನಿನ ವಿರುದ್ಧವಾಗಿ ಮಾಡುವುದು ಸರಿ ಕಾಣುವುದಿಲ್ಲ ಎಂದರು. ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿ ಪರೇಡ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಅನೇಕ ಕೆಲಸ ಕಾರ್ಯುಗಳು ಇರುತ್ತವೆ. ನಾನು ದೆಹಲಿಗೆ ಹೋಗಿ ಒಂದು ವರ್ಷ ಆಗಿತ್ತು, ಈಗ ಹೋಗಿದ್ದೆ. ದೆಹಲಿಗೆ ಹೋದಾಗ ಎಐಸಿಸಿಗೆ ಹೋಗುವುದು ವಾಡಿಕೆ. ಅದರಲ್ಲೇನು ಅರ್ಥೈಸಿಕೊಳ್ಳುವುದರಲ್ಲಿ ಪ್ರಯೋಜನವಿಲ್ಲ. ರಾಜಕೀಯವಾಗಿ ಯಾವುದೇ ಚರ್ಚೆ ಆಗಿಲ್ಲ ಎಂದರು. ಗೃಹ ಸಚಿವ ಸ್ಥಾನ ಬಿಡುವ ಬಗ್ಗೆ ಕಾರ್ಯಕರ್ತರ ಜೊತೆ ಮಾತನಾಡುವಾಗ ಅವರ ಅನಿಸಿಕೆ ಆಧಾರದ ಮೇಲೆ ಹೇಳಿದ್ದೇನೆ. ಅದಕ್ಕೆ ಯಾಕೆ ಅಷ್ಟೊಂದು ಮಹತ್ವ ನೀಡುತ್ತಿದ್ದೀರಿ ಎಂದ ಅವರು, ಯಾವ ಸಂಚಲನ ಮಾಡುವ ಅವಶ್ಯಕತೆಯಿಲ್ಲ. ನನ್ನ ಹಾಗೂ ಕಾರ್ಯತಕರ್ತರಿಗೆ ಬಿಟ್ಟಿದ್ದು, ಕೊರಟಗೆರೆ ಜನ ನನ್ನ ಆರಿಸಿರುವುದು. ಅವರು ಏನು ಅಪೇಕ್ಷೆ ಪಡುತ್ತಾರೆ ಅದನ್ನು ಮಾತನಾಡಿದ್ದೇನೆ. ಕಾರ್ಯಕರ್ತರು ಸಿಎಂ ಆಗಿ ಅಂತ ಹೇಳಿದ್ದಾರೆ. ಅದರ ಬಗ್ಗೆ ಮಾತನಾಡುವುದಿಲ್ಲ ಎಂದರು.

ರಾಜಕೀಯ ವಿಚಾರ, ಸಿಎಂ, ಅಧ್ಯಕ್ಷರ ವಿಚಾರದಲ್ಲಿ ಬಹಿರಂಗವಾಗಿ ಮಾತನಾಡುವುದಿಲ್ಲ ಎಂದ ಅವರು ನಮಗೆ ಅನ್ನಿಸಿದ್ದನ್ನು ನಮ್ಮ ಪಕ್ಷದೊಳಗೆ ಹೇಳುತ್ತೇವೆ ಎಂದರು. ಮಂಗಳೂರು ಜೈಲು ಬಹಳ ಕಿಷ್ಕಿಂದೆ ರೀತಿಯಲ್ಲಿದೆ ಅಲ್ಲಿ ಹೊಸ ಜೈಲು ಕಟ್ಟುತ್ತಿದ್ದೇವೆ. ಅದು ಶಿಫ್ಟ್ ಆಗೋವರೆಗೂ ಪರಿಸ್ಥಿತಿ ಬಹಳ‌ ಕಠಿಣವಾಗಿರುತ್ತದೆ ಎಂದರು.

ಮಂಗಳೂರು ಜೈಲಿನಲ್ಲಿ ಮಾದಕ ವಸ್ತುಗಳ ಸರಬರಾಜು ಬಗ್ಗೆ ಪ್ರತಿಕ್ರಿಯಿಸಿ ಅದನ್ನೆಲ್ಲಾ ಪರಿಶೀಲನೆ ಮಾಡಿ ಅದರ ಮೇಲೆ ಕ್ರಮ ಕೈಗಳ್ಳುತ್ತೇವೆ ಎಂದರು.

Share this article