ಬಳ್ಳಾರಿ: ಇಲ್ಲಿನ ಹನುಮಾನ್ ನಗರದ ನಿವಾಸಿ ಕಾರ್ಪೆಂಟರ್ ಪುತ್ರ ಸಿ. ಯಶವಂತಕುಮಾರ ಯುಪಿಎಸ್ಸಿ ಪರೀಕ್ಷೆಯಲ್ಲಿ409ನೇ ರ‍್ಯಾಂಕ್ ಪಡೆದಿದ್ದಾರೆ.
ತಂದೆ ಶ್ರೀನಿವಾಸ್ ಅವರು ಕಳೆದ 20 ವರ್ಷಗಳಿಂದ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದಾರೆ. 1ರಿಂದ 6ನೇ ತರಗತಿವರೆಗೆ ಶಾಂತಿ ನಿಕೇತನ ಶಾಲೆಯಲ್ಲಿ, 7ರಿಂದ 10ನೇ ತರಗತಿವರೆಗೆ ಬಾಲ ಭಾರತಿ ವಿವೇಕಾನಂದ ಪ್ರೌಢ ಶಾಲೆಯಲ್ಲಿ, ಪಿಯು ಶಿಕ್ಷಣವನ್ನು ಬಿಪಿಎಸ್‌ಸಿ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ. ಬಳಿಕ, ವೈದ್ಯಕೀಯ ಶಿಕ್ಷಣದತ್ತ ಆಸಕ್ತಿ ವಹಿಸಿದ ಇವರು ನಗರದ ಬಿಎಂಸಿಆರ್‌ಸಿಯಲ್ಲಿ ಎಂಬಿಬಿಎಸ್‌ನ್ನು 2020-21ರಲ್ಲಿ ಪೂರ್ಣಗೊಳಿಸಿದ್ದಾರೆ.