- ₹1,00,000 ಬಹುಮಾನ, ಪ್ರಶಸ್ತಿ ವಿತರಣೆ । ಫೆ.21ರಂದು ಪುಣೆ ಕ್ಯಾಂಪಸ್‌ನಲ್ಲಿ ನಡೆ ರಾಷ್ಟ್ರಮಟ್ಟದ ಫೈನಲ್ ಸ್ಪರ್ಧೆ
- - - ಕನ್ನಡಪ್ರಭ ವಾರ್ತೆ ಹರಿಹರನಾಗಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿಯ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಯು ರಾಷ್ಟ್ರಮಟ್ಟದ ಕೇಸ್ ಅನಾಲಿಸಿಸ್ ಸ್ಪರ್ಧೆ ಕಿರೀಟ್ 5.0 ಅನ್ನು ಮುಡಿಗೇರಿಸಿಕೊಂಡಿದೆ.
ಕಿರ್ಲೋಸ್ಕರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಕಿಮ್) ವತಿಯಿಂದ ಫೆ.21ರಂದು ಪುಣೆ ಕ್ಯಾಂಪಸ್‌ನಲ್ಲಿ ಫೈನಲ್ ಸ್ಪರ್ಧೆ ನಡೆಯಿತು. ನಾಗಪುರದ ಐಐಐಟಿಯ ಗೌರವ್ ಕುಮಾರ್, ಅಭಿಷೇಕ್ ಸರ್ಕಾರ್, ಮತ್ತು ಹಿಮಾಂಶು ಸಿಂಗ್ ಅವರ ತಂಡ ಪ್ರಥಮ ಸ್ಥಾನ ಗಳಿಸಿ, ₹1,00,000 ಬಹುಮಾನ ಹಾಗೂ ಪ್ರಶಸ್ತಿಗೆ ಭಾಜನರಾದರು.ರಾಯಪುರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸೂರ್ಯಾಂಶ್ ಶ್ರೀವಾಸ್ತವ, ಸೋಮಿಲ್ ಪುರಿ ಮತ್ತು ಯಾಹೂ ಸಿಂಗ್ ಅವರನ್ನು ಒಳಗೊಂಡ ತಂಡವು ದ್ವಿತೀಯ ಸ್ಥಾನ ಗಳಿಸಿ ಪ್ರಶಸ್ತಿ ಹಾಗೂ ₹75,000 ನಗದು ಬಹುಮಾನಕ್ಕೆ ಪಾತ್ರವಾಗಿದೆ.
ಹರಿಹರದ ಕಿರ್ಲೋಸ್ಕರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಕೆಐಎಂ) ತನ್ನ ಐದನೇ ಆವೃತ್ತಿಯ ರಾಷ್ಟ್ರಮಟ್ಟದ ಕೇಸ್ ಅನಾಲಿಸಿಸ್ ಸ್ಪರ್ಧೆ ಕಿರೀಟ್ 5.0 ಆಯೋಜಿಸಿತ್ತು. ಕಿರ್ಲೋಸ್ಕರ್ ಗ್ರೂಪ್ ಸಂಸ್ಥೆಗಳಾದ ಕಿರ್ಲೋಸ್ಕರ್ ಇಂಡಸ್ಟ್ರೀಸ್ ಲಿಮಿಟೆಡ್ (ಕೆಐಎಲ್), ಕಿರ್ಲೋಸ್ಕರ್ ಆಯಿಲ್ ಎಂಜಿನ್ಸ್ ಲಿಮಿಟೆಡ್ (ಕೆಒಇಎಲ್), ಕಿರ್ಲೋಸ್ಕರ್ ನ್ಯೂಮ್ಯಾಟಿಕ್ ಕಂಪನಿ ಲಿಮಿಟೆಡ್ (ಕೆಪಿಸಿಎಲ್), ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ (ಕೆಎಫ್ಐಎಲ್), ಕಿರ್ಲೋಸ್ಕರ್ ಚಿಲ್ಲರ್ಸ್ ಪ್ರೈವೇಟ್ ಲಿಮಿಟೆಡ್ (ಕೆಸಿಪಿಎಲ್) ಮತ್ತು ಅರ್ಕ ಫಿನ್ ಫಿನ್‌ಕ್ಯಾಪ್ ಕಿರೀಟ್ 5.0 ಕಾರ್ಯಕ್ರಮದ ಸಹಯೋಗ ವಹಿಸಿದ್ದವು.ಕಿರೀಟ್ 5.0 ಸ್ಪರ್ಧೆಯ ಸುತ್ತುಗಳು:
ಸುತ್ತು 1: ಆನ್ ಲೈನ್ ಕ್ವಿಜ್, 2: ಆನ್ ಲೈನ್ ಕೇಸ್ ಸ್ಟಡಿ ಸಲ್ಲಿಕೆ, 3: ಹರಿಹರ ಕ್ಯಾಂಪಸ್‌ನಲ್ಲಿ ಆನ್-ಗ್ರೌಂಡ್ ಸೆಮಿ- ಫೈನಲ್ (ಟಾಪ್ 12 ತಂಡಗಳು), ಸುತ್ತು 4: ಪುಣೆ ಕ್ಯಾಂಪಸ್ ನಲ್ಲಿ ಫೈನಲ್ ಸ್ಪರ್ಧೆ (ಟಾಪ್ 8 ತಂಡಗಳು). ಗಳನ್ನು ಆಯೋಜಿಸಲಾಗಿತ್ತು. ಉತ್ತಮ ನೆರವು ನೀಡಿದವು.ಈ ಸ್ಪರ್ಧೆಯಲ್ಲಿ ವಿವಿಧ ಶೈಕ್ಷಣಿಕ ಹಿನ್ನೆಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. 4 ವರ್ಷಗಳ ಅವಧಿಯ ಬಿ.ಟೆಕ್/ ಬಿಇ ಪದವಿ ಕೋರ್ಸ್‌ಗಳ ವಿದ್ಯಾರ್ಥಿಗಳು ಕೂಡ ಭಾಗವಹಿಸಿದ್ದರು. ಒಂದೇ ಸಂಸ್ಥೆಯು ಮೂವರು ವಿದ್ಯಾರ್ಥಿಗಳು ಒಂದು ತಂಡವಾಗಿ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿತ್ತು. ಒಂದೇ ಸಂಸ್ಥೆಯ ಹಲವು ತಂಡಗಳು ಪಾಲ್ಗೊಳ್ಳಬಹುದಾಗಿತ್ತು.
ಕಿರೀಟ್ 5.0 ಸ್ಪರ್ಧೆಯಲ್ಲಿ ಭಾರತದಾದ್ಯಂತ ಇರುವ ಸಂಸ್ಥೆಗಳ 29,174 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಒಟ್ಟು 495 ತಂಡಗಳು ಕೇಸ್ ಅನಾಲಿಸಿಸ್ ಹಂತಕ್ಕೆ ಸಾಗಿದವು. 12 ತಂಡಗಳು ಸೆಮಿ ಫೈನಲ್ ಗೆ ತಲುಪಿದವು. 8 ತಂಡಗಳು ಫೈನಲ್ ನಲ್ಲಿ ಸ್ಪರ್ಧಿಸಿದವು. ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ಐಟಿ), ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿ (ಐಐಐಟಿ) ಮುಂತಾದ ಪ್ರಮುಖ ಸಂಸ್ಥೆಗಳಿಂದ ಬಂದಿದ್ದರು. ಫೆ.19ರಂದು ಹರಿಹರದ ಕಿಮ್ ಕ್ಯಾಂಪಸ್‌ನಲ್ಲಿ ಸೆಮಿಫೈನಲ್ ಸ್ಪರ್ಧೆ ನಡೆದಿದ್ದು, 12 ತಂಡಗಳು ಫೈನಲ್‌ಗೆ ಅರ್ಹವಾಗಿದ್ದವು.ಕಿರ್ಲೋಸ್ಕರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆಡಳಿತ ಮಂಡಳಿ ಉಪಾಧ್ಯಕ್ಷೆ ಅದಿತಿ ಕಿರ್ಲೋಸ್ಕರ್ ತೀರ್ಪುಗಾರರನ್ನು ಸನ್ಮಾನಿಸಿದರು. ಕಿಮ್ ನಿರ್ದೇಶಕ ಡಾ. ಟಿ.ಜಿ. ವಿಜಯ್, ನಾಗಪುರದ ಐಐಐಟಿಯ ಗೌರವ್ ಕುಮಾರ್, ಅಭಿಷೇಕ್ ಸರ್ಕಾರ್ ಮತ್ತು ಹಿಮಾಂಶು ಸಿಂಗ್, ರಾಯಪುರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸೂರ್ಯಾಂಶ್ ಶ್ರೀವಾಸ್ತವ, ಸೋಮಿಲ್ ಪುರಿ, ಯಾಹೂ ಸಿಂಗ್ ಇತರರು ಉಪಸ್ಥಿತರಿದ್ದರು.
- - - -26ಎಚ್‌ಆರ್‌ಆರ್01.ಜೆಪಿಜಿ:ಫೈನಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ನಾಗಪುರದ ಐಐಐಟಿ ತಂಡಕ್ಕೆ ₹1,00,000 ಬಹುಮಾನ, ಪ್ರಶಸ್ತಿ ವಿತರಿಸಲಾಯಿತು.