5698 ಮತದಾರರು ಸ್ಥಳಾಂತರದಬಗ್ಗೆ ಸುಳ್ಳು ಫಾರ್ಮ್ 7 ಸಲ್ಲಿಕೆ: ಕೇಸ್‌

KannadaprabhaNewsNetwork |  
Published : Oct 07, 2026, 04:15 AM IST
ಜಮಖಂಡಿ ನಗರದ ಒಳಚರಂಡಿ ನಿರ್ಮೂಲನಾ ಕೇಂದ್ರದ ಆವರಣದಲ್ಲಿರುವ ಪಾಳು ಬಿದ್ದ ವಸತಿ ಗೃಹಕ್ಕೆ ಪಿಎಸ್‌ಐ ಅನೀಲ ಕುಂಬಾರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು,  | Kannada Prabha

ಸಾರಾಂಶ

ಫಾರ್ಮ್ 7 ದುರ್ಬಳಕೆ ಮಾಡಿದ್ದಾರೆಂದು ಮಾಜಿ ಶಾಸಕಿ ಹಾಗೂ ಕಾಂಗ್ರೆಸ್ ಮುಖಂಡರಾದ ಸೌಮ್ಯರೆಡ್ಡಿ ಅವರು ದೂರು ನೀಡಿದ ಮೇರೆಗೆ ಬಿಜೆಪಿಯ ಇಬ್ಬರು ಕಾರ್ಯಕರ್ತರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಫಾರ್ಮ್ 7 ದುರ್ಬಳಕೆ ಮಾಡಿದ್ದಾರೆಂದು ಮಾಜಿ ಶಾಸಕಿ ಹಾಗೂ ಕಾಂಗ್ರೆಸ್ ಮುಖಂಡರಾದ ಸೌಮ್ಯರೆಡ್ಡಿ ಅವರು ದೂರು ನೀಡಿದ ಮೇರೆಗೆ ಬಿಜೆಪಿಯ ಇಬ್ಬರು ಕಾರ್ಯಕರ್ತರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.

ಬಿಜೆಪಿಗೆ ಅನುಕೂಲಕರವಾಗಿಲ್ಲ ಎಂಬ ಕಾರಣದಿಂದಾಗಿ ತಾನು ಪ್ರತಿನಿಧಿಸುವ ಜಯನಗರ ಕ್ಷೇತ್ರದ 5698 ಮತದಾರರು ಶಾಶ್ವತವಾಗಿ ಸ್ಥಳಾಂತಗೊಂಡಿರುತ್ತಾರೆ ಎಂದು ಬಿಜೆಪಿಯೊಂದಿಗೆ ಸಂಬಂಧ ಹೊಂದಿರುವ ಬೂತ್ ಏಜೆಂಟರಾದ ರಾಮಕೃಷ್ಣ, ಯೋಗೇಶ್ ಎಂಬುವವರು ಸುಳ್ಳು ಫಾರ್ಮ್ 7 ನೀಡಿದ್ದು ಇದಕ್ಕೆ ಪ್ರತ್ಯಕ್ಷ ಸಾಕ್ಷಿಯೂ ಇದೆ ಎಂದು ಸೌಮ್ಯರೆಡ್ಡಿ ದೂರಿನಲ್ಲಿ ತಿಳಿಸಿದ್ದಾರೆ.

ಜಯನಗರ ಕ್ಷೇತ್ರದ ವಾರ್ಡ್ ಸಂಖ್ಯೆ 168ರ ಪಟ್ಟಾಭಿರಾಮನಗರದಲ್ಲಿ 54 ಜನ, ವಾರ್ಡ್ ನಂಬರ್ 169ರ ಬೈರಸಂದ್ರದಲ್ಲಿ 525 ಜನ, ವಾರ್ಡ್ 170 ಜಯನಗರ ಈಸ್ಟ್ ವಾರ್ಡ್ ನಲ್ಲಿ 719 ಜನ, ವಾರ್ಡ್ ನಂ 171ರ ಗುರಪ್ಪನಪಾಳ್ಯದಲ್ಲಿ 4327 ಜನ, ವಾರ್ಡ್ ನಂಬರ್ 177, 178 ಮತ್ತು 179 ಜೆ.ಪಿ.ನಗರ, ಸಾರಕ್ಕಿ ಮತ್ತು ಶಾಕಾಂಬರಿ ನಗರದಲ್ಲಿ 82 ಸೇರಿ ಒಟ್ಟು 5698 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿರುತ್ತಾರೆ ಎಂದು ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸಿದ್ದರು ಎನ್ನಲಾಗಿದೆ.

ಈ ಬಗ್ಗೆ ಪರಿಶೀಲಿಸಿದಾಗ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಮತದಾರರು ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳಿಗೆ ರಾಜಕೀಯವಾಗಿ ಅನುಕೂಲಕರವಾಗಿಲ್ಲವೆಂದು ಪರಿಗಣಿಸಿ ಇತರ ವರ್ಗಗಳ ಮತದಾರರ ಮೇಲೆ ಪರಿಣಾಮ ಬೀರುವಂತೆ ಬಿಜೆಪಿ ಬೂತ್ ಏಜೆಂಟ್‌ಗಳು ಉದ್ದೇಶಪೂರ್ವಕವಾಗಿ ಸುಳ್ಳು ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ಸೌಮ್ಯ ರೆಡ್ಡಿ ಆರೋಪಿಸಿದ್ದಾರೆ.

ಅಲ್ಲದೆ, ಇನ್ನಿಬ್ಬರು ಮತದಾರರಾದ ಸಿ.ರಮೇಶ್ ಹಾಗೂ ಅವರ ಪತ್ನಿ ರೂಪಾರಮೇಶ್ ಎಂಬುವರಿಗೆ ಈ ವಿಷಯದ ಬಗ್ಗೆ ಮಾಹಿತಿ ನೀಡದೆ ಅವರ ಹೆಸರು ಹಾಗೂ ಮತದಾರರ ಚೀಟಿ ಬಳಸಿಕೊಂಡು ಅವರ ಹೆಸರಿನಲ್ಲಿ ಫಾರ್ಮ್ 7 ಅರ್ಜಿಯನ್ನು ಬಿಎಲ್ಒ ಅವರಿಗೆ ಆರೋಪಿಗಳು ಸಲ್ಲಿಸಿದ್ದಾರೆ. ಆದ್ದರಿಂದ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೌಮ್ಯರೆಡ್ಡಿ ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಳು ಬಿದ್ದ ಸರ್ಕಾರಿ ವಸತಿ ಗೃಹದಲ್ಲಿ ವ್ಯಕ್ತಿ ಆತ್ಮಹತ್ಯೆ
ಕಡಪಟ್ಟಿ ಪಿಡಿಒ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ