ಕನ್ನಡಪ್ರಭ ವಾರ್ತೆ ಮಧುಗಿರಿ
ಈ ಚುನಾವಣೆಯ ಫಲಿತಾಂಶ ಮುಂಬರುವ ಮಹಾ ಚುನಾವಣೆಗಳಿಗೆ ಮುನ್ನುಡಿಯಾಗುತ್ತದೆ. ಅಲ್ಲದೆ ನಮ್ಮ ಅಭ್ಯರ್ಥಿ ಎನ್ಎಸ್ಯುಐ, ಯೂತ್ ಕಾಂಗ್ರೆಸ್ ಪಕ್ಷ ದ ಅಧ್ಯಕ್ಷನಾಗಿ ಪಕ್ಷಕ್ಕಾಗಿ ದುಡಿದಿದ್ದು ಸೇವಾ ಮನೋಭಾವ ಹೊಂದಿದ್ದಾರೆ. ಹಾಗಾಗಿ ನಮ್ಮ ಅಭ್ಯರ್ಥಿಯನ್ನು ಪಕ್ಷದ ವರಿಷ್ಠರು ಒಮ್ಮತದಿಂದ ಕಣ್ಣಕ್ಕಿಳಿಸಿದ್ದು, ಜಿಲ್ಲೆಯ ಎಲ್ಲ ನಮ್ಮ ಶಾಸಕರು ಗೆಲುವಿಗೆ ಶ್ರಮಿಸುತ್ತಿದ್ದಾರೆ. ಈ ಕ್ಷೇತ್ರ ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ ಹಾಗೂ ಚಿಕ್ಕಬಳ್ಲಾಪುರ ಕ್ಷೇತ್ರ ವ್ಯಾಪ್ತಿಯ 34 ಆಸೆಂಬ್ಲಿ ಕ್ಷೇತ್ರಗಳನ್ನು ಒಳಗೊಂಡು 1 ಲಕ್ಷ 76 ಸಾವಿರಕ್ಕೂ ಅಧಿಕ ಮತದಾರರನ್ನು ಹೊಂದಿದೆ. ನಮ್ಮ ತಾಲೂಕಿನಲ್ಲಿ 4507 ಮತದಾರರಿದ್ದು ಅತ್ಯಂತ ದೊಡ್ಡ ಕ್ಷೇತ್ರ. ಹಾಗಾಗಿ ಆಯಾಯ ಭಾಗದ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರು, ಕಾರ್ಯರ್ಕತರು ಹಾಗೂ ಜನಪ್ರತಿನಿಧಿಗಳು ಸ್ವಯಪ್ರೇರಿತರಾಗಿ ಪಕ್ಷ ಭೇದವಿಲ್ಲದೆ ನಮ್ಮ ಅಭ್ಯರ್ಥಿಗೆ ಮತ ಹಾಕಿಸುವ ಮೂಲಕ ಜಯಗಳಿಸಲು ನೆರವಾಗಬೇಕೆಂದು ಸಲಹೆ ನೀಡಿದರು. ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್ ಮಾತನಾಡಿ, ಆಗ್ನೆಯ ಪದವೀಧರರ ಕ್ಷೇತ್ರವನ್ನು ಗುತ್ತಿಗೆ ಪಡೆದವರಂತೆ ಮಾತನಾಡುವವರಿಗೆ ಮತದಾರರು ಈ ಸಲ ತಕ್ಕ ಪಾಠ ಕಲಿಸಲಿದ್ದು, ಕ್ಷೇತ್ರದ ಎಲ್ಲ ಮತದಾರರನ್ನು ಕಳೆದ ಒಂದು ವರ್ಷದಿಂದ ಭೇಟಿ ಮಾಡಿ ನನಗೆ ಮತ ಚಲಾಯಿಸಿ ಗೆಲ್ಲಿಸುವಂತೆ ಮನವಿ ಮಾಡಿದ್ದೇನೆ. ಅ. 23 ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಧ್ವಜ ಹಾರಿಸುವುದಾಗಿ ತಿಳಿಸಿ, ಯಾವುದೇ ಕಪ್ಪು ಚುಕ್ಕೆ ತರದೆ ಕ್ಷೇತ್ರದ ಎಲ್ಲ ಪದವೀಧರರ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. ಜಿಲ್ಲೆಯ ಎಲ್ಲ ಶಾಸಕರು ನನ್ನ ಗೆಲುವಿಗೆ ಶ್ರಮಿಸುತ್ತಿದ್ದು, 34 ಆಸೆಂಬ್ಲಿ ಕ್ಷೇತ್ರಗಳಿಗೆ ಬರುವ ಎಲ್ಲ ಶಾಲಾ -ಕಾಲೇಜುಗಳಿಗೆ ಭೇಟಿ ನೀಡಿ ಮತ ಕೋರಿದ್ದೇನೆ. ಎನ್ಪಿಎಸ್, ಓಪಿಎಸ್ ಕೂಡ ಅನುಷ್ಠಾನಕ್ಕೆ ತರಲು ನಮ್ಮ ಸರ್ಕಾರ ಉತ್ಸುಕವಾಗಿದೆ, ಆ ನಿಟ್ಟಿನಲ್ಲಿ ನೊಂದಾಯಿತವಾಗಿರುವ ಎಲ್ಲ ಪಧವೀಧರರು ನನಗೆ ಮತ ಚಲಾಯಿಸಿ ತಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
1ಲಕ್ಷದ 76 ಸಾವಿರಕ್ಕೂ ಅಧಿಕ ಮತದಾರರು ಇದ್ದು, ನಮ್ಮ ಸರ್ಕಾರ ಈಗಾಗಲೇ ನಿರುದ್ಯೋಗ ಸಮಸ್ಯೆ ಬಗೆಹರಿಸಲು ಎಲ್ಲ ಇಲಾಖೆಯಿಂದ 75 ಸಾವಿರ ಉದ್ಯೋಗ ನೀಡಲು ಮುಂದಾಗಿದೆ. ಹಾಗಾಗಿ ಮತದಾರ ಪ್ರಭುಗಳು ಈ ಸಲ ನನ್ನನ್ನು ಗೆಲ್ಲಿಸುವ ಮೂಲಕ ಇತಿಹಾಸ ನಿರ್ಮಸಬೇಕು ಎಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಎಂ.ಎಸ್. ಮಲ್ಲಿಕಾರ್ಜುನಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋಪಾಲಯ್ಯ, ಆದಿನಾರಾಯಣರೆಡ್ಡಿ, ಮುಖಂಡರಾದ ಮೈದನಹಳ್ಳಿ ಕಾಂತರಾಜು, ಪುರಸಭೆ ಮಾಜಿ ಅಧ್ಯಕ್ಷರಾದ ಕೆ. ಪ್ರಕಾಶ್, ಎಂ.ಕೆ. ನಂಜುಂರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ. ನಾಗೇಶ್ ಬಾಬು, ಕುರುಬರಹಳ್ಳಿ ಹರ್ಷ, ಮರಿಯಣ್ಣ, ಖಲೀಲ್ ಅಹಮದ್, ರಂಗಶ್ಯಾಮಯ್ಯ, ಸಿದ್ದಗಂಗಪ್ಪ, ಆಲೀಮ್, ಸಾಧಿಕ್, ಲಕ್ಷ್ಮೀನಾರಾಯಣ್, ಪಿ.ಟಿ.ಗೋವಿಂದಯ್ಯ, ಶ್ರೀಧರ್, ರಾಜು, ದೇವರಾಜು, ನಾರಾಯಣಗೌಡ ಸೇರಿ ಅನೇಕರು ಭಾಗವಹಿಸಿದ್ದರು.