ಜಾತಿ ನಿಂದನೆ, ರಮೇಶ ಕತ್ತಿ ಬಂಧನಕ್ಕೆ ಆಗ್ರಹ

KannadaprabhaNewsNetwork |  
Published : Oct 25, 2025, 01:00 AM IST
ಮಾಜಿ ಸಂಸದ ರಮೇಶ ಕತ್ತಿ ಅವರು ಅವಹೇಳನಕಾರಿ ಹೇಳಿಕೆ ಖಂಡಿಸಿ ಬಂಧನಕ್ಕೆ ಆಗ್ರಹಿಸಿ ಸಮಾಜದ ಮುಖಂಡರು ತಹಸೀಲ್ದಾರ ಶ್ವೇತಾ ಅಮರಾವತಿ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ವಾಲ್ಮೀಕಿ ನಾಯಕ ಸಮಾಜದ ವಿರುದ್ಧ ಮಾಜಿ ಸಂಸದ ರಮೇಶ ಕತ್ತಿ ಅವರು ಅವಹೇಳನಕಾರಿ ಹೇಳಿಕೆ ನೀಡಿ ಜಾತಿ ನಿಂದನೆ ಮಾಡಿದ್ದು, ತಕ್ಷಣ ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ತಾಲೂಕು ಮಹರ್ಷಿ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘ ಮತ್ತು ವಾಲ್ಮೀಕಿ, ನಾಯಕ ಸಮಾಜದ ಮುಖಂಡರು ತಹಸೀಲ್ದಾರ್ ಶ್ವೇತಾ ಅಮರಾವತಿ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ರಟ್ಟಿಹಳ್ಳಿ: ವಾಲ್ಮೀಕಿ ನಾಯಕ ಸಮಾಜದ ವಿರುದ್ಧ ಮಾಜಿ ಸಂಸದ ರಮೇಶ ಕತ್ತಿ ಅವರು ಅವಹೇಳನಕಾರಿ ಹೇಳಿಕೆ ನೀಡಿ ಜಾತಿ ನಿಂದನೆ ಮಾಡಿದ್ದು, ತಕ್ಷಣ ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ತಾಲೂಕು ಮಹರ್ಷಿ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘ ಮತ್ತು ವಾಲ್ಮೀಕಿ, ನಾಯಕ ಸಮಾಜದ ಮುಖಂಡರು ತಹಸೀಲ್ದಾರ್ ಶ್ವೇತಾ ಅಮರಾವತಿ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ಸಮಾಜದ ಮುಖಂಡ ಕೆ.ಡಿ. ದೀವಿಗಿಹಳ್ಳಿ ಮಾತನಾಡಿ, ವಾಲ್ಮೀಕಿ ನಾಯಕ ಸಮಾಜದ ವಿರುದ್ಧ ಮಾಜಿ ಸಂಸದ ರಮೇಶ ಕತ್ತಿ ಕೀಳು ಮಟ್ಟದ ಪದ ಬಳಕೆ ಮಾಡಿದ್ದ ನಮ್ಮ ಸಮಾಜ ಅತ್ಯಂತ ಉಗ್ರವಾಗಿ ಖಂಡಿಸುತ್ತದೆ. ಅಲ್ಲದೆ ಅವರನ್ನು ತಕ್ಷಣ ಬಂದಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಇತ್ತೀಚಿಗೆ ಬೆಳಗಾವಿಯಲ್ಲಿ ನಡೆದ ಡಿಸಿಸಿ ಬ್ಯಾಂಕ್ ಚುನಾವಣೆ ಸಂದರ್ಭದಲ್ಲಿ ಮಾಜಿ ಸಂಸದ ನಮ್ಮ ನಾಯಕ ಸಮುದಾಯದ ವಿರುದ್ಧ ಅತ್ಯಂತ ಕೀಳು ಮಟ್ಟದಲ್ಲಿ ನಾಲಿಗೆ ಹರಿ ಬಿಟ್ಟ ಅವರನ್ನು ಇದುವರೆಗೂ ಬಂಧಿಸದೇ ಸರಕಾರ ಮೀನಾ ಮೇಷ ಎಣಿಸುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ರಾಜ್ಯ ಸರಕಾರಕ್ಕೆ ಕಿಂಚಿತ್ತಾದರೂ ಮಾನ ಮಾರ್ಯಾದೆ ಇದ್ದರೆ ಈಕೂಡಲೇ ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿ ವಾಲ್ಮೀಕಿ ನಾಯಕ ಸಮಾಜಕ್ಕಾದ ಅವಮಾನವನ್ನು ಸರಿ ಪಡಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಮನವಿಯಲ್ಲಿ ಸರಕಾರಕ್ಕೆ ಎಚ್ಚರಿಕೆ ನೀಡಲಾಗಿದೆ. ತಾಲೂಕಾಧ್ಯಕ್ಷ ಮಂಜುನಾಥ ತಳವಾರ ಮಾತನಾಡಿ, ರಾಜಕೀಯವಾಗಿ ರಾಜಕಾರಣಿಗಳನ್ನು ವೈಯಕ್ತಿಕವಾಗಿ ಬೇಕಾದ್ದನ್ನು ಟೀಕಿಸಿಕೊಳ್ಳಲಿ, ಅದನ್ನು ಬಿಟ್ಟು ನಮ್ಮ ಸಮಾಜದ ವಿರುದ್ಧ ಅತ್ಯಂತ ನಿಂದನೀಯ ಮಾನಹಾನಿಕರ ಮಾತುಗಳನ್ನು ಹೇಳಿರುವುದು ಸಮಾಜ ಅತ್ಯಂತ ತೀವ್ರವಾಗಿ ಖಂಡಿಸುತ್ತದೆ. ರಮೇಶ ಕತ್ತಿ ಓಡಾಡುವ ನೆಲದಲ್ಲಿ ಹಡಗಲಿ ಬೇಡರು ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ತಮ್ಮ ಪ್ರಾಣವನ್ನೆ ಬಲಿಕೊಟ್ಟಿದ್ದಾರೆ. ಬೇಡರಿಗೆ ತಮ್ಮದೇಯಾದ ಇತಿಹಾಸವಿದೆ. ಕೆಚ್ಚದಿಯ ನಾಯಕರು ವಾಲ್ಮೀಕಿ ಜನರು. ರಮೇಶ ಕತ್ತಿ ಅವರಿಗೆ ಬುದ್ಧಿ ಕಲಿಸುವ ಸಮಯ ಬಂದಿದೆ. ರಾಜ್ಯಾದ್ಯಂತ ಈಗಾಗಲೇ ಹೋರಾಟ ಆರಂಭಿಸಿದ್ದು ಕೂಡಲೇ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಕರಿಯಪ್ಪ ಚೌಡಕ್ಕನವರ, ಉಪಾಧ್ಯಕ್ಷ ಅಶೋಕ ಹೆಡಿಯಾಲ, ಮಂಜು ತಳವಾರ, ಮುಖಂಡರಾದ ಹನುಮಂತಪ್ಪ ದೀವಿಗಿಹಳ್ಳಿ, ನಾಗರಾಜ ಬಳ್ಳಾರಿ, ಸಿದ್ದಣ್ಣ ಕಾಗೇರ, ರಾಮಚಂದ್ರಪ್ಪ ವಾಲ್ಮೀಕಿ, ಮಾರುತೆಪ್ಪ ಗಿರಿಯಣ್ಣನವರ, ಪಿಎಸ್‍ಐ ಎ.ಆರ್. ಮಣಕೂರು, ಮಾರುತೆಪ್ಪ ವಾಲ್ಮೀಕಿ, ಸುರೇಶ ತಳವಾರ, ಶಿವಕುಮಾರ ದೀವಿಗಿಹಳ್ಳಿ, ರವೀಂದ್ರ ಮುದ್ನಳ್ಳಿ, ಮಹೇಶಪ್ಪ ತಿಪ್ಪಣ್ಣನವರ, ಈರಪ್ಪ ತೋಟದ, ರವಿ ಹಾದ್ರಿಹಳ್ಳಿ, ಸುನೀಲ ನಾಯಕ, ಮಂಜಪ್ಪ ಕುಪ್ಪೇಲೂರು, ಶರಣಗೌಡ ಬಾಲನಗೌಡ್ರ, ಮಂಜು ಬಳ್ಳಾರಿ, ಬಸವರಾಜ ಸೊಂಟೇರ, ಹರೀಶ ಮಾಳಗೇರ, , ಸುರೇಶ ಸವಣೂರು, ಭೀಮಪ್ಪ ದೊಡ್ಡದ್ಯಾವಣ್ಣನವರ, ಬಸವರಾಜ ಚಿಗಮರದ, ಮಲ್ಲೇಶಪ್ಪ ಅರಳಿಕಟ್ಟಿ, ಮಲ್ಲೇಶ ಕೊಪ್ಪದ ಸೇರಿದಂತೆ ವಾಲ್ಮೀಕಿ ಸಮಾಜದ ನೂರಾರು ಮುಖಂಡರು ಇದ್ದರು.

PREV

Recommended Stories

ಸ್ವಸ್ಥ ಶರದ್ ಋತು ಪ್ರಕೃತಿಯ ಲಯದಲ್ಲಿ ಸ್ವಸ್ಥತೆ ! ಶರದ್ ಋತುವಿನ ಆಹಾರ ಮತ್ತು ದಿನಚರ್ಯೆ
ನಟ ದರ್ಶನ್‌ಗೆ ಜೈಲಿನಲ್ಲಿ ಹರಿದ ಚಾದರ : ವಕೀಲರ ವಾದ