ಹುಬ್ಬಳ್ಳಿ: ಜಾತಿ ಸಮೀಕ್ಷೆ, ಜನಗಣತಿ ಕೇಂದ್ರ ಸರ್ಕಾರದ ಕೆಲಸ. ಆದರೆ ಇದೀಗ ರಾಜ್ಯ ಸರ್ಕಾರ ಮಾಡಲು ಮುಂದಾಗಿದೆ. ಸಮೀಕ್ಷೆ ಮಾಡುವಾಗ ಗೊಂದಲ ಆಗಬಾರದು. ಸಮೀಕ್ಷೆ ತಪ್ಪಾದರೆ ಸರ್ಕಾರ ಜನಪ್ರಿಯತೆ ಕಳೆದುಕೊಳ್ಳುತ್ತದೆ. ಜಾತಿ ಗಣತಿ ಪಾರದರ್ಶಕ ಆಗಿರಬೇಕು ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಭಿಪ್ರಾಯಪಟ್ಟರು.
ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹತ್ತಾರು ವರ್ಷಗಳ ಹೋರಾಟವಿದೆ. ಸದ್ಯ ದೇಶದಲ್ಲಿ ಆರೇ ಧರ್ಮಗಳಿವೆ. ನಮ್ಮ ಪ್ರಯತ್ನಕ್ಕೆ ಮುಂದೆ ಜಯ ಸಿಕ್ಕೇ ಸಿಗುತ್ತದೆ. ಯಾವುದೇ ಧರ್ಮಕ್ಕೆ ಸೇರಿದ್ದರೂ ಲೆಕ್ಕಕ್ಕಿಲ್ಲ. ನಾವೀಗ ಸಂವಿಧಾನದಲ್ಲಿರುವ ಧರ್ಮವನ್ನಷ್ಟೇ ನಮೂದಿಸಬೇಕು ಎಂದು ಪರೋಕ್ಷವಾಗಿ ಹಿಂದೂ ಧರ್ಮ ನಮೂದಿಸುವಂತೆ ಹೇಳಿದರು.
ಜಾತಿಯ ವಿಚಾರದಲ್ಲಿ ವೀರಶೈವ-ಲಿಂಗಾಯತ ಒಂದು ಎಂದು ಹೇಳೋಣ, ರಾಜ್ಯದ ನಂತರ ಕೇಂದ್ರದ ಜನಗಣತಿಯೂ ನಡೆಯಲಿದೆ. ಹೀಗಾಗಿ ಎಲ್ಲರನ್ನೂ ಸೇರಿಸಿ ಒಂದು ನಿರ್ಣಯ ತೆಗೆದುಕೊಳ್ಳಬೇಕು. ನಾವು ತೆಗೆದುಕೊಳ್ಳುವ ನಿರ್ಣಯ ಸಂವಿಧಾನ ಬದ್ಧವಾಗಿರಬೇಕು ಎಂದು ತಿಳಿಸಿದರು.