ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಗ್ರಾಮದ ಬಲಮುರಿ ವಿರಿಜಾ ನಾಲೆಯ 4ನೇ ಬಚ್ಚಲು ಬಳಿ ಸುಮಾರು 200 ಎಕರೆಯಷ್ಟು ಜಮೀನಿಗೆ ಸುಮಾರು 2 ಕಿಮೀ ಉದ್ದಕ್ಕೆ ಹೋಗುವ ನಾಲೆಯಲ್ಲಿ ಗಿಡಗೆಂಟೆ ಬೆಳೆದು, ಹೂಳು ತುಂಬಿ ನೀರು ಸರಾಗವಾಗಿ ರೈತರ ಜಮೀನುಗಳಿಗೆ ಹರಿಯದೆ ತೊಂದರೆಯಾಗಿತ್ತು.
ಈ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕಾಮಗಾರಿ ನಡೆಸುವಂತೆ ಮನವಿ ಮಾಡಿದರೂ ನಾಲೆ ಸ್ವಚ್ಛತಾ ಜೊತೆ ಹೂಳು ತೆಗೆಯದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ ರೈತರು ನಂತರ ತಾವೇ ಗುದ್ದಲಿ ಕುಡುಗೋಲು ಹಿಡಿದು ನಾಲೆಯನ್ನು ಸ್ವಚ್ಛತೆಗೊಳಿಸಿ ಗುದ್ದಲಿಯಿಂದ ಊಳು ತೆಗೆದುಕೊಳ್ಳಲು ಕಾಮಗಾರಿ ಆರಂಭಿಸಿದರು.ಈಗಾಗಲೇ ಮಂಡ್ಯ ಜಿಲ್ಲೆಗೆ 2 ಸಾವಿರ ಕೋಟಿ ಹಣವನ್ನು ರಾಜ್ಯ ಸರ್ಕಾರ ಮಂಜೂರು ಮಾಡಿ ನಾಲೆಗಳ ಆಧುನೀಕರಣ ಮಾಡುವಂತೆ ಸೂಚುಸಿದೆ. ಪಟ್ಟಣದ ವಿವಿಧೆಡೆ ನಾಲಾ ಆಧುನೀಕರಣ ಕಾಮಗಾರಿಗೆ ಸುಮಾರು 300 ರಿಂದ 400 ಕೋಟಿಯಷ್ಟು ಅನುದಾನ ನೀಡಿ ಕಾಮಗಾರಿ ನಡೆಸಲಾಯಿತು.
ಕೆಲವು ನಾಲೆಗಳಲ್ಲಿ ಈಗಾಗಲೇ ನೀರು ಹರಿಸಲಾಗಿದೆ. ಮತ್ತೊಂದು ಕಡೆಯಲ್ಲಿ ಕೆಲವು ನಾಲೆಗಳ ಆಧುನೀಕರಣ ನಡೆಯದೆ ಇರುವ ಭಾಗಗಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ರೈತರು ಬೆಳಗ್ಗೆಯಿಂದಲೆ ನಾಲೆಗೆ ಇಳಿದು ತಾವೇ ನಾಲೆ ಸ್ವಚ್ಛತೆಗೆ ಮುಂದಾಗಿದ್ದಾರೆ.