ಕನ್ನಡಪ್ರಭ ವಾರ್ತೆ ಮಧುಗಿರಿ
ಈ ಸಂದರ್ಭದಲ್ಲಿ ಕನ್ನಡಪರ ಒಕ್ಕೂಟಗಳ ಹಾಗೂ ಕನ್ನಡ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ರಾಘವೇಂದ್ರ ಮಾತನಾಡಿ, ಕಾವೇರಿ ಪ್ರಾಧೀಕಾರ ಸದಾ ನಮ್ಮ ರಾಜ್ಯಕ್ಕೆ ಅನ್ನಾಯ ಮಾಡುತ್ತಲೇ ಬಂದಿದೆ. ಆದ್ದರಿಂದ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಅಂಕಿ -ಅಂಶಗಳನ್ನು ಪರಿಶೀಲಿಸಿ ಎರಡು ರಾಜ್ಯಗಳ ನಡುವೆ ಇರುವ ಸಮಸ್ಯೆಗಳನ್ನು ಬಗೆಹರಿಸಲು ಮೀನಾ ಮೇಶ ಏಣಿಸುತ್ತಿದೆ. ನಮ್ಮ ರಾಜ್ಯದ 240 ತಾಲೂಕುಗಳಲ್ಲೂ ಮಳೆ ಇಲ್ಲದೆ ನಮ್ಮ ಜನ ಕುಡಿವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ನಮ್ಮ ಮಧುಗಿರಿ ತಾಲೂಕಿನಲ್ಲಿ ಮಳೆಯ ದರ್ಶನವಿಲ್ಲ, ರೈತರು ಬೀಜ ಬಿತ್ತಿಲ್ಲ, ದನ ಕರುಗಳಿಗೆ ಮೇವಿಲ್ಲ, ಜನತೆಗೆ ಶುದ್ಧ ಕುಡಿವ ನೀರಿಲ್ಲ ,ರಾಜ್ಯದ ಬಹುತೇಕ ಡ್ಯಾಂಗಳಲ್ಲಿ ನೀರಿಲ್ಲ, ಎಲ್ಲಿ ನೋಡಿದರು ಮಳೆರಾಯನ ಸುಳಿವಿಲ್ಲ, ಇಂತಹ ಬರಗಾಲದ ಪರಿಸ್ಥಿತಿಯಲ್ಲಿ ತಮಿಳು ನಾಡು ಸರ್ಕಾರ ಬೆಳೆ ಬೆಳೆಯಲು ನೀರು ಕೇಳುವುದು ಯಾವ ಸೀಮೆ ನ್ಯಾಯ.? ಇದನ್ನು ನಾವುಗಳು ಖಂಡಿಸುತ್ತೇವೆ. ರಾಜ್ಯ ಸರ್ಕಾರ ಮೇಕೆದಾಟು ಯೋಜನೆ ಜಾರಿಗೊಳಿಸಬೇಕು. ಯಾವುದೇ ಮುಲಾಜಿಗೂ ಮಣಿಯಬಾರದು. ರಾಜ್ಯ ಸರ್ಕಾರ ಕನ್ನಡಿಗರಿಗೆ ಉದ್ಯೋಗದಲ್ಲಿ ಶೇ.80ರಷ್ಟು ಮೀಸಲಾತಿ ನೀಡಬೇಕು. ಇನ್ನೂ ಹಲವು ಬೇಡಿಕೆಗಳನ್ನು ಮನವಿ ಪತ್ರದ ಮೂಲಕ ಸಲ್ಲಿಸುತ್ತಿದ್ದೇವೆ.ಸರ್ಕಾರ ಈ ಕೂಡಲೇ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು ಇಲ್ಲದದ್ದರೆ ಮುಂದಿನ ದಿನಗಳಲ್ಲಿ ನಮ್ಮ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಉಗ್ರ ಹೋರಾಟ ಮಾಡುತ್ತೇವೆ ಎಂದು ರಾಘವೇಂದ್ರ ಎಚ್ಚರಿಕೆ ನೀಡಿದರು.
ಕರುನಾಡು ವಿಜಯಸೇನೆ ಅಧ್ಯಕ್ಷ ತಿಮ್ಮರಾಜು ಮಾತನಾಡಿದರು.ಈ ವೇಳೆ ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಸಿಕಂದರ್,ಕಜಾವೇ ಜಿಲ್ಲಾ ಉಪಾಧ್ಯಕ್ಷ ಪ್ರಸಾದ್,ಸಂಘಟನ ಕಾರ್ಯದರ್ಶಿ ಶಿವಲಿಂಗಪ್ಪ,ತಾ.ಅಧ್ಯಕ್ಷ ರೋಹಿತ್,ಉಪಾಧ್ಯಕ್ಷ ಭೈರೇಶ್,ಕಾರ್ಯದರ್ಶಿ ಮಹೇಶ್,ಆಟೋ ಚಾಲಕರ ಸಂಘದ ಅಧ್ಯಕ್ಷ ಹರೀಶ್,ಕಾರ್ಮಿಕ ಘಟಕದ ನಗರ ಅಧ್ಯಕ್ಷ ರಾಜಣ್ಣ ,ಸಿದ್ದಣ್ಣ,ಮಹೇಶ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.