ದೀಪ ಬೆಳಗಿಸಿ ದೀಪಾವಳಿ ಹಬ್ಬ ಆಚರಿಸಿ: ಮ.ವಿ.ರಾಮ್ ಪ್ರಸಾದ್ ಮನವಿ

KannadaprabhaNewsNetwork |  
Published : Nov 01, 2024, 12:10 AM IST
43 | Kannada Prabha

ಸಾರಾಂಶ

ಪಟಾಕಿ ಸಿಡಿಸುವುದರಿಂದ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಉಂಟಾಗುತ್ತದೆ. ಪಟಾಕಿಯಿಂದ ಉಂಟಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಪೌರಕಾರ್ಮಿಕರಿಗೆ ದೊಡ್ಡ ಸವಾಲು. ಪಟಾಕಿ ಸಿಡಿಸುವ ಬದಲು ರಂಗೋಲಿ ಹಾಕಿ ದೀಪ ಬೆಳಗುವ ಮೂಲಕ ದೀಪಾವಳಿ ಆಚರಿಸಿದಲ್ಲಿ ಪ್ರಾಣಿ ಸಂಕುಲಕ್ಕೆ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ಯಾವುದೇ ಹಾನಿ ಇರುವುದಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಅಪೂರ್ವ ಸ್ನೇಹ ಬಳಗದ ವತಿಯಿಂದ ಚಾಮುಂಡಿಪುರಂ ಮನೆ ಮನೆಗೆ ತೆರಳಿ ಹಣತೆ ವಿತರಿಸಿ ಪಟಾಕಿಯಿಂದ ಆಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸಿ, ದೀಪಾವಳಿ ಆಚರಿಸಿ ಎಂದು ಮನವಿ ಮಾಡಲಾಯಿತು.

ದೀಪಾವಳಿ ಹಬ್ಬವನ್ನು ದೀಪಗಳನ್ನು ಬೆಳಗಿಸುವ ಮೂಲಕ ಮಾಲಿನ್ಯ ರಹಿತವಾಗಿ ಆಚರಿಸೋಣ ಎಂದು ನಗರ ಪಾಲಿಕೆ ಮಾಜಿ ಸದಸ್ಯ ಮ.ವಿ. ರಾಮ್ ಪ್ರಸಾದ್ ಮನವಿ ಮಾಡಿದರು.

ಪಟಾಕಿ ಸಿಡಿಸುವುದರಿಂದ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಉಂಟಾಗುತ್ತದೆ. ಪಟಾಕಿಯಿಂದ ಉಂಟಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಪೌರಕಾರ್ಮಿಕರಿಗೆ ದೊಡ್ಡ ಸವಾಲು. ಪಟಾಕಿ ಸಿಡಿಸುವ ಬದಲು ರಂಗೋಲಿ ಹಾಕಿ ದೀಪ ಬೆಳಗುವ ಮೂಲಕ ದೀಪಾವಳಿ ಆಚರಿಸಿದಲ್ಲಿ ಪ್ರಾಣಿ ಸಂಕುಲಕ್ಕೆ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ಯಾವುದೇ ಹಾನಿ ಇರುವುದಿಲ್ಲ. ಯುವಪೀಳಿಗೆಯವರು ಹಸಿರು ದೀಪಾವಳಿ ಆಚರಿಸುವ ಪಣ ತೊಡಬೇಕು ಎಂದು ಅವರು ಮನವಿ ಮಾಡಿದರು.

ಈ ವೇಳೆ ಕೆ.ಆರ್. ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ, ನಿರ್ದೇಶಕರಾದ ಎಚ್.ವಿ. ಭಾಸ್ಕರ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಸುರೇಶ್, ಮಹಾನ್ ಶ್ರೇಯಸ್, ಆನಂದ್, ಆದರ್ಶ್, ಜಯರಾಮ್, ಮೈ ಲಾ ವಿಜಯ್ ಕುಮಾರ್, ರಕ್ಷಿತ್, ದೂರ ರಾಜಣ್ಣ, ಸಿದ್ದಲಿಂಗ ಸ್ವಾಮಿ ಮೊದಲಾದವರು ಇದ್ದರು.ಬೆಟ್ಟ ಹತ್ತುವ ಭಕ್ತಾದಿಗಳಿಗೆ ಕುಡಿಯುವ ನೀರು, ಅನ್ನದಾನದ ವ್ಯವಸ್ಥೆ

ಕನ್ನಡಪ್ರಭ ವಾರ್ತೆ ಬೆಟ್ಟದಪುರ

ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ಶುಕ್ರವಾರ ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟ ಹತ್ತುವ ಭಕ್ತಾದಿಗಳಿಗೆ ಗಾವಡಗೆರೆ ಮಠದ ಶ್ರೀ ನಟರಾಜ ಸ್ವಾಮೀಜಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಕುಡಿಯುವ ನೀರು ಹಾಗೂ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಭಕ್ತಾದಿಗಳು ಎಲ್ಲರೂ ಬಂದು ಸಾವಧಾನದಿಂದ ಸ್ವೀಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ. ಅನ್ನದಾನ ಕಾರ್ಯಕ್ರಮದಲ್ಲಿ ಬೆಟ್ಟದಪುರದ ಚನ್ನಬಸವ ದೇಶಕೇಂದ್ರ ಸ್ವಾಮೀಜಿ ಹಾಗೂ ಇತರ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ.

ಶನಿವಾರ ದೀಪಾವಳಿಯ ಹಬ್ಬದ ದಿನ ದೀವಟಿಕೆ ಸೇವೆ ಮಾಡುವ ಭಕ್ತಾದಿಗಳಿಗೆ ಬೆಟ್ಟದಪುರದ ವೀರಶೈವ ಲಿಂಗಾಯತ ಸಮಾಜದಿಂದ ಎಲ್ಲರ ಸಹಕಾರದೊಂದಿಗೆ ಗ್ರಾಮದ ಮಧ್ಯ ಭಾಗದಲ್ಲಿರುವ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಆವರಣದಲ್ಲಿ ಮಧ್ಯಾಹ್ನದಿಂದ ರಾತ್ರಿ ಯವರೆಗೆ ಅನ್ನದಾನ ಕಾರ್ಯಕ್ರಮ ನಡೆಯುತ್ತದೆ.

ದೀವಟಕೆ ಹಿಡಿಯುವ ಭಕ್ತರು ಹಾಗೂ ದೇವರ ಉತ್ಸವ ಮೂರ್ತಿಯನ್ನು ಓರುವ ಭಕ್ತಾದಿಗಳು ರಾತ್ರಿ ಪಂಜಿನ ಮೆರವಣಿಗೆ ನೋಡುವ ಬರುವಂತಹ ಎಲ್ಲ ಭಕ್ತರು ಪ್ರಸಾದ ಸ್ವೀಕರಿಸಬೇಕಾಗಿ ಅನ್ನದಾನ ಸಮಿತಿ ಮನವಿ ಮಾಡಿದ್ದಾರೆ.

PREV

Recommended Stories

ಸರ್ಕಾರಿ ಯೋಜನೆ ತಲುಪಲು ‘ಅರಿವು’ ಕಾರ್ಯಕ್ರಮ ಸಹಕಾರಿ: ಯಶ್ಪಾಲ್‌ ಸುವರ್ಣ
ತಾಯಿ ಹೆಸರಿನಲ್ಲಿ ಒಂದು ಸಸಿ ಹಾಗೂ ಬೀಜದುಂಡೆ ಕಾರ್ಯಕ್ರಮಕ್ಕೆ ಚಾಲನೆ