ಹರಿಹರದಲ್ಲಿ ಶಾಂತಿ, ಸೌಹಾರ್ದದಿಂದ ಹಬ್ಬಗಳ ಆಚರಿಸಿ

KannadaprabhaNewsNetwork | Published : Mar 13, 2025 12:51 AM

ಸಾರಾಂಶ

ಹೋಳಿ ಹಾಗೂ ರಂಜಾನ್ ಹಬ್ಬಗಳನ್ನು ಜನರು ಶಾಂತಿ, ಸೌಹಾರ್ದದಿಂದ ಆಚರಣೆ ಮಾಡಬೇಕು. ಹೋಳಿ ಆಚರಣೆಯಲ್ಲಿ ಬಣ್ಣ ಎರಚುವಾಗ ಗಲಾಟೆ, ಗೊಂದಲಗಳಿಗೆ ಆಸ್ಪದ ನೀಡಬಾರದು. ಎಲ್ಲ ಸಮುದಾಯಗಳ ಮುಖಂಡರು ಹಬ್ಬಗಳ ಆಚರಿಸಲು ಸಹಕಾರ ನೀಡಿ, ಸಾಮರಸ್ಯ ಮೆರೆಯಬೇಕು ಎಂದು ಪಿಎಸ್‌ಐ ಶ್ರೀಪತಿ ಗಿನ್ನಿ ಹೇಳಿದ್ದಾರೆ.

- ನಗರ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಪಿಎಸ್‌ಐ ಶ್ರೀಪತಿ ಗಿನ್ನಿ ಮನವಿ

- - - ಕನ್ನಡಪ್ರಭ ವಾರ್ತೆ ಹರಿಹರ

ಹೋಳಿ ಹಾಗೂ ರಂಜಾನ್ ಹಬ್ಬಗಳನ್ನು ಜನರು ಶಾಂತಿ, ಸೌಹಾರ್ದದಿಂದ ಆಚರಣೆ ಮಾಡಬೇಕು. ಹೋಳಿ ಆಚರಣೆಯಲ್ಲಿ ಬಣ್ಣ ಎರಚುವಾಗ ಗಲಾಟೆ, ಗೊಂದಲಗಳಿಗೆ ಆಸ್ಪದ ನೀಡಬಾರದು. ಎಲ್ಲ ಸಮುದಾಯಗಳ ಮುಖಂಡರು ಹಬ್ಬಗಳ ಆಚರಿಸಲು ಸಹಕಾರ ನೀಡಿ, ಸಾಮರಸ್ಯ ಮೆರೆಯಬೇಕು ಎಂದು ಪಿಎಸ್‌ಐ ಶ್ರೀಪತಿ ಗಿನ್ನಿ ಹೇಳಿದರು.

ನಗರದ ನಗರ ಪೊಲೀಸ್‌ ಠಾಣೆಯಲ್ಲಿ ಬುಧವಾರ ನಡೆದ ಹೋಳಿ- ರಂಜಾನ್ ಹಬ್ಬದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಸಂಪ್ರದಾಯದ ಪ್ರಕಾರ ಹೋಳಿ ಕಾಮ ದಹನವು ಮಾ.13ರಂದು ನಡೆಯಲಿದೆ. ಹೋಳಿ (ಬಣ್ಣದಾಟ) ಮಾ.14ರಂದು ನಡೆಯಲಿದೆ. ಮುಸ್ಲಿಂ ಸಮುದಾಯದ ನಾಗರೀಕರು ಪ್ರಾರ್ಥನೆಗೆ ತೆರಳುವ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹಿಂದೂ, ಮುಸ್ಲಿಂ ಸಮಾಜಗಳ ಹಿರಿಯರು ಮುಖಂಡರು ಜಾಗೃತಿ ವಹಿಸಬೇಕು ಎಂದು ತಿಳಿಸಿದರು.

ನಗರಸಭೆ ಸದಸ್ಯ ಮುಜಾಮಿಲ್ ಮಾತನಾಡಿ, ಇದೇ ತಿಂಗಳಿನಲ್ಲಿ ಹೋಳಿ, ರಂಜಾನ್ ಮತ್ತು ನಗರ ದೇವತೆ ಊರಮ್ಮನ ಜಾತ್ರೆಯು ಬಂದಿದೆ. ಇದರಿಂದಾಗಿ ಎಲ್ಲ ಸಮುದಾಯದವರು ಸಹಮತದಿಂದ ಶಾಂತಿ ಪಾಲನೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡ ಹನುಮಂತಪ್ಪ ಕೋತ್ವಾಲ್ ಮಾತನಾಡಿ, ಪರೀಕ್ಷಾ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಬಂದೋಬಸ್ತ್ ಮಾಡಬೇಕು. ಹೋಳಿ ವೇಳೆ ಮೊಟ್ಟೆ, ತೈಲಮಿಶ್ರಿತ ಬಣ್ಣಗಳ ಬಳಸದಂತೆ ಜನರಲ್ಲಿ ತಿಳಿಸಿ, ಸೂಕ್ತ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಸಮಾಜ ಸೇವಕ ಸನಾವುಲ್ಲಾ ಮಾತನಾಡಿದರು. ಶಾಂತಿಸಭೆಯಲ್ಲಿ ಫೈರೋಜ್ ಅಹಮದ್, ಪೊಲೀಸ್‌ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

- - - -12ಎಚ್‍ಆರ್‍ಆರ್05:

ಹರಿಹರದ ನಗರ ಪೊಲೀಸ್‌ ಠಾಣೆಯಲ್ಲಿ ಹೋಳಿ-ರಂಜಾನ್ ಹಬ್ಬದ ಹಿನ್ನೆಲೆ ಶಾಂತಿ ಸಭೆ ನಡೆಯಿತು.

Share this article