ಶಾಂತ ರೀತಿಯಿಂದ ಗಣೇಶೋತ್ಸವ ಆಚರಿಸಿ

KannadaprabhaNewsNetwork |  
Published : Aug 30, 2024, 01:06 AM IST
(ಪೋಟೋ 29ಬಿಕೆಟಿ9, ಗಣೇಶ ಉತ್ಸವ ಕುರಿತು ಜರುಗಿದ ಶಾಂತತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ) | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಸೆಪ್ಟೆಂಬರ್ 7 ರಂದು ಆಚರಿಸಲ್ಪಡುವ ಗಣೇಶ ಉತ್ಸವವನ್ನು ಶಾಂತಿ, ಸಂಭ್ರಮ, ಸಡಗರದಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಗಣೇಶ ಉತ್ಸವ ಮಂಡಳಿಗಳಿಗೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯಲ್ಲಿ ಸೆಪ್ಟೆಂಬರ್‌ 7 ರಂದು ಆಚರಿಸಲ್ಪಡುವ ಗಣೇಶ ಉತ್ಸವವನ್ನು ಶಾಂತಿ, ಸಂಭ್ರಮ, ಸಡಗರದಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಗಣೇಶ ಉತ್ಸವ ಮಂಡಳಿಗಳಿಗೆ ಕರೆ ನೀಡಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಗುರುವಾರ ಗಣೇಶ ಉತ್ಸವ ಕುರಿತು ಜರುಗಿದ ಶಾಂತತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆಗೆ ಯಾವುದೇ ರೀತಿಯಲ್ಲಿ ಧಕ್ಕೆ ಬರದಂತೆ ಶಾಂತ ರೀತಿಯಿಂದ ಹಬ್ಬವನ್ನು ಆಚರಿಸಬೇಕು. ಪಿಒಪಿ ಗಣೇಶ ಮೂತಿಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂತಿಗಳನ್ನು ಪ್ರತಿಷ್ಠಾಪಿಸಬೇಕು. ಹಬ್ಬದ ಆಚರಣೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಂಪೂರ್ಣವಾಗಿ ಸಹಕಾರ ನೀಡಲಿದೆ ಎಂದು ತಿಳಿಸಿದರು.

ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅನುಮತಿಗಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಪಿಡಬ್ಲ್ಯುಡಿ, ಪೊಲೀಸ್, ಹೆಸ್ಕಾಂ ಹಾಗೂ ನಗರಸಭೆಯಿಂದ ಪಡೆಯಬಹುದಾದ ಅನುಮತಿಯಲ್ಲಿ ಅಡೆತಡೆಯಾಗದಂತೆ ಏಕಗವಾಕ್ಷಿ ಪದ್ಧತಿಯ ವ್ಯವಸ್ಥೆ ಮಾಡಲಾಗಿದೆ. ಅನುಮತಿಗಾಗಿ ಅನಗತ್ಯವಾಗಿ ತಡ ಮಾಡುವಂತಿಲ್ಲ. ವ್ಯವಸ್ಥೆ ನಿಮ್ಮ ಜೊತೆ ಇದ್ದು, ನಾವು ಬದಲಾವಣೆ ಆಗುವ ಅಗತ್ಯವಿದೆ. ಆಚರಣೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಎಷ್ಟು ಸಾಧ್ಯವೋ ಅಷ್ಟು ಪಾಲನೆ ಆಗಬೇಕು ಎಂದರು.

ನಗರಸಭೆ ಗುರುತಿಸಿದ ಸ್ಥಳಗಳಲ್ಲಿ ಮಾತ್ರ ಗಣೇಶ ಮೂರ್ತಿ ವಿಸರ್ಜನೆ ಮಾಡಬೇಕು. ಮೂರು ಹನಮಂತನಗುಡಿ ಕ್ವಾರಿ ಹಳ್ಳ, ಕಾಡಗಿ ಹಳ್ಳ ಹಾಗೂ ಮಾರುದ್ರಪ್ಪನ ಹಳ್ಳ ಸೇರಿ ಒಟ್ಟು ಮೂರು ಸ್ಥಳಗಳಲ್ಲಿ ಗಣೇಶ ವಿಸರ್ಜನೆ ಮಾಡಬಹುದಾಗಿದೆ. ಬಾಗಲಕೋಟೆ ಹಳೆ ನಗರದಲ್ಲಿ 10 ಬಾವಿಗಳನ್ನು ಸ್ವಚ್ಛ ಮಾಡಲಾಗಿದ್ದು, ಆ ಬಾವಿಗಳಲ್ಲಿ ಮೂರ್ತಿ ವಿಸರ್ಜಣೆ ಮಾಡಲು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, ಸಾರ್ವಜನಿಕರ ಗಣೇಶ ಪ್ರತಿಷ್ಠಾಪನೆ ಸ್ಥಳಗಳಲ್ಲಿ ಪೆಂಡಾಲ್‌ ಹಾಕುವಾಗ ರಸ್ತೆಗಳು ಹಾಳಾಗದಂತೆ ನೋಡಿಕೊಳ್ಳಬೇಕು. ಸಂಚಾರಕ್ಕೆ ಅಡಗಡೆಯಾಗದಂತೆ ಪೆಂಡಾಲ್‌ ಹಾಕಲು ತಿಳಿಸಿದರ ಅವರು ಪೊಲೀಸ್ ಸಿಬ್ಬಂದಿಯ ಜೊತೆ ಗಣೇಶ ಮಂಡಳಿಯಿಂದ ವ್ಯಾಲೆಂಟ್‌ಗಳನ್ನು ಸಹ ನಿಯೋಜಿಸಲು ತಿಳಿಸಿದರು.

ನಗರದಲ್ಲಿ 2700ಕ್ಕೂ ಹೆಚ್ಚು ಗಣೇಶ ಮೂರ್ತಿಗಳು ಪ್ರತಿಷ್ಠಾನೆಗೊಳ್ಳಲಿವೆ ಎಂಬ ಮಾಹಿತಿ ಇದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದ ರೀತಿಯಲ್ಲಿ ಹಬ್ಬವನ್ನು ಆಚರಿಸಲು ತಿಳಿಸಿದರು. ಜಿಲ್ಲೆಯ ನಗರ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳಿದ್ದು, ಇವುಗಳ ಮೂಲಕ ಇಲಾಖೆ ಎಲ್ಲವನ್ನು ಗಮನಿಸುತ್ತದೆ ಎಂದರು.

ಮೆರವಣಿಗೆಯಲ್ಲಿ ಡಿಜೆ ಸೌಂಡ್ ಸಿಸ್ಟಂ ಅಳವಡಿಕೆಗೆ ಮಿತಿಯನ್ನು ಹೇರಲಾಗಿದೆ. ಒಂದು ಬೇಸ್ ಹಾಗೂ ಒಂದು ಟಾಪ್ ಅಳವಡಿಕೆಗೆ ಮಾತ್ರ ಅನುಮತಿ ನೀಡಲಾಗಿದೆ. ರಾತ್ರಿ 10ರ ನಂತರ ಡಿಜೆ ಸೌಂಡ್‌ಗೆ ಅವಕಾಶವಿಲ್ಲ. ಅಷ್ಟರೊಳಗೆ ಗಣೇಶ ವಿಸರ್ಜನೆ ಮಾಡಲು ತಿಳಿಸಿದರು. ಸಾರ್ವಜನಿಕ ಗಣೇಶ ಪ್ರತಿಷ್ಠಾಪನಾ ಮಂಡಳಿಯವರು ವಿದ್ಯುತ್ ಸಂಪರ್ಕವನ್ನು ಹೆಸ್ಕಾಂದಿಂದ ಪಡೆದುಕೊಳ್ಳಲು ಸೂಚಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಮಹಾಂತೇಶ ಜಿದ್ದಿ, ಪ್ರಭಾರ ಅಪರ ಜಿಲ್ಲಾಧಿಕಾರಿ ಸಂತೋಷ ಜಗಲಾಸರ, ತಹಸೀಲ್ದಾರ್‌ ಅಮರೇಶ ಪಮ್ಮಾರ, ನಗರಸಭೆ ಪೌರಾಯುಕ್ತ ವಾಸಣ್ಣ ಆರ್ ಸೇರಿದಂತೆ ಗಣೇಶ ಮಂಡಳಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವತಿಯರ ಮುಂದೆ ಶರ್ಟ್‌ಬಿಚ್ಚಿ ಯುವಕನಿಂದ ಹುಚ್ಚಾಟ
ವಿದ್ಯಾರ್ಥಿನಿ ರೇಪ್‌ ಕೇಸಲ್ಲಿರಾಜಕಾರಣಿ ಪುತ್ರ ಬಂಧನ