ಪರಸ್ಪರ ಬಣ್ಣ ಹಚ್ಚಿ ಹೋಳಿ ಸಂಭ್ರಮಾಚರಣೆ

KannadaprabhaNewsNetwork |  
Published : Mar 05, 2026, 02:45 AM IST
ತತತತತತತತತತ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಜಮಖಂಡಿ ನಗರದ ಅರಣ್ಯ ಇಲಾಖೆ ಹತ್ತಿರದ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ರಂಗಕೇಸರಿ ಬಣ್ಣದ ಹಬ್ಬದ ಕಾರ್ಯಕ್ರಮದಲ್ಲಿ ಯುವಕರು ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು. ಶಾಸಕ ಜಗದೀಶ ಗುಡಗುಂಟಿ ಅವರ ಪುತ್ರ ವಿರುಪಾಕ್ಷ ಗುಡಗುಂಟಿ ಸೇರಿದಂತೆ ಅನೇಕರು ಬಣ್ಣದ ಹಬ್ಬದಲ್ಲಿ ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ನಗರದ ಅರಣ್ಯ ಇಲಾಖೆ ಹತ್ತಿರದ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ರಂಗಕೇಸರಿ ಬಣ್ಣದ ಹಬ್ಬದ ಕಾರ್ಯಕ್ರಮದಲ್ಲಿ ಯುವಕರು ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು. ಶಾಸಕ ಜಗದೀಶ ಗುಡಗುಂಟಿ ಅವರ ಪುತ್ರ ವಿರುಪಾಕ್ಷ ಗುಡಗುಂಟಿ ಸೇರಿದಂತೆ ಅನೇಕರು ಬಣ್ಣದ ಹಬ್ಬದಲ್ಲಿ ಭಾಗವಹಿಸಿದ್ದರು.

ರಂಗ ಕೇಸರಿಯಲ್ಲಿ ನೂರಾರು ಯುವಕರು, ಯುವತಿಯರು ಬಣ್ಣ ಹಚ್ಚಿಕೊಂಡು ಡಿಜೆ ಹಾಡಿಗೆ ಹೆಜ್ಜೆ ಹಾಕುತ್ತ ಕುಣಿದು ಕುಪ್ಪಳಿಸಿದರು. ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ನಗರದೆಲ್ಲೆಡೆ ಹೋಳಿ ಹಬ್ಬವು ಶಾಂತಿಯುತವಾಗಿ ಜರುಗಿತು. ಯುವಕರು ಒಬ್ಬರ ಮೇಲೊಬ್ಬರು ಬಣ್ಣ ಎರಚಿ ಶಂಖನಾದ ಮಾಡುತ್ತ ಸಂಭ್ರಮಿಸಿದರು.

ರಂಗಿನಾಟದಲ್ಲಿ ವಿರುಪಾಕ್ಷಯ್ಯಾ ಗುಡಗುಂಟಿ, ಅಜೇಯ ಕಡಪಟ್ಟಿ ಅರುಣ ಮರೇಗುದ್ದಿ, ಶ್ರೀಧರ ಕಂಬಿ, ಗಣೇಶ ಶಿರಗಣ್ಣವರ, ಈಶ್ವರ ಆದೆಪ್ಪನವರ, ಮಹಾದೇವ ನ್ಯಾಮಗೌಡ, ಶಂಕರ ಕಾಳೆ, ಯನನೂರ ಮೂಲಂಗಿ, ಪ್ರದೀಪ ಮಹಾಲಿಂಗಪೂರ, ಸುನೀಲ ಭೂವಿ, ಗೀತಾ ಸೂರ್ಯವಂಶಿ, ಆಶಾದೇವಿ ಗುಡಗುಂಟಿ ಸೇರಿದಂತೆ ಸಾವಿರರು ಜನರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುತ್ತೂರು ನಗರದಲ್ಲಿ ವಿಮಾನ ಹಾರಾಟ ಆತಂಕ!
ಕುಂದಾಪುರ- ಎಂಸಿಎನ್‌ ವಿದ್ಯಾರ್ಥಿಗಳ ಲ್ಯಾಂಪ್ ಲೈಟಿಂಗ್