ಶಾಂತಿ ಸಭೆಯಲ್ಲಿ ಸಿಪಿಐ ಬಾಲಚಂದ್ರ ಲಕ್ಕಂ ಮನವಿ
ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಭಾನುವಾರ ಮೊಹರಂ ಹಬ್ಬದ ನಿಮಿತ್ತ ಶಾಂತಿ ಸಭೆಯಲ್ಲಿ ಮಾತನಾಡಿ, ಮಸ್ಕಿ ಜನರು ಶಾಂತಿ ಪ್ರೀಯರಾಗಿದ್ದು, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕೊಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ಶಾಂತಿ ಸುವ್ಯವಸ್ಥೆಗಾಗಿ ಪೊಲೀಸ್ ಇಲಾಖೆಗೆ ಸಾರ್ವಜನಿಕರ ಸಹಕಾರ ಅಗತ್ಯ ಪೊಲೀಸ್ ಇಲಾಖೆಯಿಂದ ಪ್ರತಿಯೊಂದು ಆಸರೆಖಾನ ಹತ್ತಿರ ಪೊಲೀಸ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.ಮುಖಂಡ ಬಸನಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಮೊಹರಂ ಹಬ್ಬವಿರುವುದರಿಂದ ಪುರಸಭೆಯಿಂದ ಸ್ವಚ್ಛತೆ ಮಾಡಿಸಿ, ಕತ್ತಲ್ ರಾತ್ರಿ ಹಾಗೂ ದಪನ್ ದಿನದಂದು ಪೊಲೀಸ್ ಬಂದೋಬಸ್ತ್ ಒದಗಿಸುವಂತೆ ಮನವಿ ಮಾಡಿದರು.
ಈ ವೇಳೆ ಮುಸ್ಲಿಂ ಸಮಾಜದ ಹಿರಿಯ ಮುಖಂಡ ಪತ್ರಕರ್ತ ಅಬ್ದುಲ್ ಅಜಿಜ್, ಸಾರಪ್ಪ ಬಂಗಾಲಿ, ತಿಮ್ಮಣ್ಣ ಗುಡಿಸಲಿ, ಮಲ್ಲಯ್ಯ ಬಳ್ಳಾ, ವೀರೇಶ ಪಾಟೀಲ್, ಮೌನೇಶ್ ನಾಯಕ್, ಕ್ರೈಂ ಬ್ರಾಂಚ್ ಪಿಎಸ್ಐ ಭೀಮದಾಸ್, ಕರವೇ ಅಧ್ಯಕ್ಷ ಅಶೋಕ್ ಮುರಾರಿ, ದುರ್ಗರಾಜ್ ವಟಗಲ್, ಆರ್. ಕೆ.ನಾಯಕ್, ಅನಿಸ ಖಾಜಿ ಸೇರಿದಂತೆ ವಿವಿಧ ಸಮಾಜದ ಮುಖಂಡರು ಇದ್ದರು.