ಕೆಂಭಾವಿ ಹಿರೇಮಠದಲ್ಲಿ ಮಾಸಿಕ ಶಿವಾನುಭವ ಗೋಷ್ಠಿ ಕಾರ್ಯಕ್ರಮ
ರೈತರು ಸಂಭ್ರಮದಿಂದ ಆಚರಿಸುವ ಮುಂಗಾರು ವರ್ಷದ ಮೊದಲ ಹಬ್ಬವೇ ಕಾರಹುಣ್ಣಿಮೆ. ಕಾರ ಎಂದರೆ ಚೆಲ್ಲು ಅಥವಾ ಬೆಳಕು ಎಂದರ್ಥ. ಮುಂಗಾರು ಮಳೆ ಬಿದ್ದು, ಎಲ್ಲೆಡೆ ಹಸಿರು ಚೆಲ್ಲಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸುವ ಪರಿಯೇ ನಿಜವಾದ ಕಾರಹುಣ್ಣಿಮೆ. ಆದ್ದರಿಂದ ಹಬ್ಬವನ್ನು ಸಂಭ್ರಮದಿಂದ ಆಚರಿಸಿ ಎಂದು ಹಿರೇಮಠದ ಶ್ರೀ ಚನ್ನಬಸವ ಶಿವಾಚಾರ್ಯರು ಹೇಳಿದರು.
ತಾಲೂಕಿನ ಕೆಂಭಾವಿ ಪಟ್ಟಣದ ಹಿರೇಮಠದಲ್ಲಿ ಶ್ರೀಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ನಡೆದ ಮಾಸಿಕ ಶಿವಾನುಭವ ಗೋಷ್ಠಿಯ ಸಾನ್ನಿಧ್ಯವಹಿಸಿ ಶ್ರೀ ಆಶೀರ್ವಚನ ನೀಡಿದರು.ಕನ್ನೆಳ್ಳಿಯ ಬೂದಯ್ಯ ಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಯಮುನೇಶ ಯಾಳಗಿ ಮತ್ತು ಶರಣಕುಮಾರ ಯಾಳಗಿಯವರ ನೇತೃತ್ವದಲ್ಲಿ, ಪುಟ್ಟರಾಜ ಸಂಗೀತ ಶಾಲೆಯ ಶ್ರೇಯಾ ವಿಶ್ವಕರ್ಮ ಮತ್ತು ಶ್ರೀನಿವಾಸ ವಿಶ್ವಕರ್ಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ನಿಂಗನಗೌಡ ದೇಸಾಯಿ, ನಿಜಗುಣ ಬಡಿಗೇರ, ಅಪ್ಪಣ್ಣ ಮಡಿವಾಳರ್, ಅಭಿಷೇಕ ಪಾಟೀಲ್ ಇದ್ದರು. ಡಾ. ಯಂಕನಗೌಡ ಪಾಟೀಲ್ ನಿರೂಪಿಸಿದರು.