- ಗಣೇಶೋತ್ಸವ, ಈದ್ ಮಿಲಾದ್ ಸೌಹಾರ್ದ ಸಭೆ
- - - ಕನ್ನಡಪ್ರಭ ವಾರ್ತೆ ದಾವಣಗೆರೆ
ಯಾವುದೇ ಹಬ್ಬಗಳನ್ನು ಬೇರೆ ಧರ್ಮಕ್ಕೆ ಧಕ್ಕೆಯಾಗದಂತೆ ಆಚರಿಸಬೇಕು. ಗಣೇಶ ಹಬ್ಬ, ಈದ್ ಮಿಲಾದ್ ಆಚರಣೆಗಳನ್ನು ಸಾಮರಸ್ಯ, ಸಂಭ್ರಮದಿಂದ ಆಚರಿಸಬೇಕು ಎಂದು ಹಿಂದು-ಮುಸ್ಲಿಂ ಸಮುದಾಯದವರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಮನವಿ ಮಾಡಿದರು.ನಗರದಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಅಂಗವಾಗಿ ಹಮ್ಮಿಕೊಂಡಿದ್ದ ನಾಗರೀಕ ಶಾಂತಿ, ಸೌಹಾರ್ದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲರೂ ತಂತಮ್ಮ ಧರ್ಮ, ಸಂಸ್ಕೃತಿಯನ್ನು ಅನುಸರಿಸಿ, ಸಡಗರ, ಸಂಭ್ರಮದಿಂದ ಹಬ್ಬ ಆಚರಿಸಿ. ಆದರೆ, ಅನ್ಯ ಧರ್ಮೀಯರ ಧರ್ಮಕ್ಕೆ ಧಕ್ಕೆ ತರದಂತೆ ನಿಮ್ಮ ಹಬ್ಬಗಳ ಆಚರಣೆಯಾಗಲಿ ಎಂದರು.
ಮೆರವಣಿಗೆಗಳಲ್ಲಿ ಪೊಲೀಸ್ ಇಲಾಖೆ ನಿಗದಿಪಡಿಸಿದ ರಸ್ತೆಗಳಲ್ಲೇ ಸಾಗಿ, ನಿಗದಿತ ಸ್ಥಳಗಳಲ್ಲೇ ಗಣೇಶ ವಿಸರ್ಜನೆ ಮಾಡಬೇಕು. ಯಾವುದೇ ಕಾರಣಕ್ಕೂ ಗಣೇಶ ವಿಸರ್ಜನೆ ಮೆರವಣಿಗೆ ಮಾರ್ಗ ಬದಲಾಯಿಸಬಾರದು. ನಿಗದಿತ ಮಾರ್ಗದಲ್ಲಿ ಸಂಚರಿಸುವಾಗಲೂ ಸೂಕ್ಷ್ಮ ಪ್ರದೇಶಗಳಲ್ಲಿ ಬೇಕಾಬಿಟ್ಟಿಯಾಗಿ ವರ್ತಿಸಬಾರದು. ಒಟ್ಟಾರೆ, ಪೊಲೀಸರು, ನಾಗರಿಕರು ಇಲಾಖೆ ಸೂಚನೆಯಂತೆ ನಡೆದುಕೊಳ್ಳಬೇಕು. ಯಾರೇ ಆಗಲಿ, ಕಾನೂನು ಕೈಗೆತ್ತಿಕೊಳ್ಳಬಾರದು. ಇಲಾಖೆಯೂ ನಿಮ್ಮಗಳ ಜೊತೆಗಿರುತ್ತದೆ ಎಂದು ಎಸ್‌ಪಿ ಭರವಸೆ ನೀಡಿದರು.
- - - -6ಕೆಡಿವಿಜಿ9, 10: