ವಿಕಲಚೇತನರೊಂದಿಗೆ ಹೊಸ ವರ್ಷಾಚರಣೆ

KannadaprabhaNewsNetwork |  
Published : Jan 05, 2025, 01:34 AM IST
4ಎಚ್ಎಸ್ಎನ್11 : ಚನ್ನರಾಯಪಟ್ಟಣದ ರೋಟರಿ ಕ್ಲಬ್ ವಿ?ನ್ ವತಿಯಿಂದ ಪಟ್ಟಣದ ಸಮೀಪದ ಬರಗೂರು ಹ್ಯಾಂಡ್‌ಪೋಸ್ಟ್ ಬಳಿ ಇರುವ ಅವಕಾಶ ವಿಕಲಚೇತನ ಮಕ್ಕಳ ಪಾಠಶಾಲೆಯಲ್ಲಿ ಹೊಸವರ್ಷದ ಪ್ರಯುಕ್ತ ಮಕ್ಕಳಿಗೆ ಅಧ್ಯಕ್ಷ ಬಿ. ವಿ. ವಿಜಯ್ ಕೇಕ್ ವಿತರಿಸಿ ಉಪಹಾರ ನೀಡಿದರು. | Kannada Prabha

ಸಾರಾಂಶ

ಚನ್ನರಾಯಪಟ್ಟಣ ರೋಟರಿ ಕ್ಲಬ್ ವಿಷನ್ ವತಿಯಿಂದ ಪಟ್ಟಣದ ಸಮೀಪದ ಬರಗೂರು ಹ್ಯಾಂಡ್‌ಪೋಸ್ಟ್ ಬಳಿ ಇರುವ ವಿಕಲಚೇತನ ಮಕ್ಕಳ ಪಾಠಶಾಲೆಯಲ್ಲಿ ಮಕ್ಕಳ ಜೊತೆ ಕೇಕ್ ಕತ್ತರಿಸುವ ಮೂಲಕ ವಿಶೇಷವಾಗಿ ಹೊಸ ವರ್ಷಾಚರಣೆ ಮಾಡಲಾಯಿತು. ಕ್ಲಬ್‌ನ ವತಿಯಿಂದ ೫೦ ಜನ ವಿಕಲಚೇತನ ಮಕ್ಕಳಿಗೆ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಲಾಯಿತು. ಇಂಥ ಮಕ್ಕಳ ಜೊತೆಯಲ್ಲಿ ಹೊಸ ವರ್ಷವನ್ನು ಆಚರಣೆ ಮಾಡಿದಲ್ಲಿ ವಿಕಲಚೇತನ ಮಕ್ಕಳು ಸಹ ಹೊಸ ವರ್ಷದ ಸಂತೋಷವನ್ನು ಅನುಭವಿಸಬಹುದು ಎಂದರು.

ಚನ್ನರಾಯಪಟ್ಟಣ: ರೋಟರಿ ಕ್ಲಬ್ ವಿಷನ್ ವತಿಯಿಂದ ಪಟ್ಟಣದ ಸಮೀಪದ ಬರಗೂರು ಹ್ಯಾಂಡ್‌ಪೋಸ್ಟ್ ಬಳಿ ಇರುವ ವಿಕಲಚೇತನ ಮಕ್ಕಳ ಪಾಠಶಾಲೆಯಲ್ಲಿ ಮಕ್ಕಳ ಜೊತೆ ಕೇಕ್ ಕತ್ತರಿಸುವ ಮೂಲಕ ವಿಶೇಷವಾಗಿ ಹೊಸ ವರ್ಷಾಚರಣೆ ಮಾಡಲಾಯಿತು. ಕ್ಲಬ್‌ನ ವತಿಯಿಂದ ೫೦ ಜನ ವಿಕಲಚೇತನ ಮಕ್ಕಳಿಗೆ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಲಾಯಿತು. ರೋಟರಿ ಕ್ಲಬ್ ನ ಅಧ್ಯಕ್ಷ ಬಿ. ವಿ. ವಿಜಯ್ ಮಾತನಾಡಿ, ನಾವು ಹೊಸವರ್ಷದ ಆಚರಣೆಯ ನೆಪದಲ್ಲಿ ಸಮಯ ಮತ್ತು ಹಣವನ್ನು ವ್ಯಯ ಮಾಡುವ ಬದಲು. ಇಂಥ ಮಕ್ಕಳ ಜೊತೆಯಲ್ಲಿ ಹೊಸ ವರ್ಷವನ್ನು ಆಚರಣೆ ಮಾಡಿದಲ್ಲಿ ವಿಕಲಚೇತನ ಮಕ್ಕಳು ಸಹ ಹೊಸ ವರ್ಷದ ಸಂತೋಷವನ್ನು ಅನುಭವಿಸಬಹುದು ಎಂದು ತಿಳಿಸಿದರು. ಚನ್ನರಾಯಪಟ್ಟಣ ರೋಟರಿ ಕ್ಲಬ್ ಖಜಾಂಚಿ ಶಿವನಂಜೇಗೌಡ, ಬಿ.ಪಿ ಹರೀಶ್, ರಾಜಶೇಖರ್ ಮತ್ತು ದಾಕ್ಷಾಯಿಣಿ ಹರೀಶ್ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ