ಚಿಕ್ಕಮಗಳೂರಿನ ಕೋಟೆ ಬಡಾವಣೆಯಲ್ಲಿ ಲಕ್ಕೆ ಹಬ್ಬ। ಖರೀದಿ ಭರಾಟೆ । ಲಕ್ಷ್ಮಿ ಪೂಜೆ, ಅಂಗಡಿ , ವಾಹನಗಳ ಪೂಜೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲೆಯಾದ್ಯಂತ ದೀಪಾವಳಿ ಹಬ್ಬವನ್ನು ಸಾಂಪ್ರದಾಯಕವಾಗಿ ದೀಪಾವಳಿ ಆಚರಿಸಲಾಯಿತು. ಒಂದೆಡೆ ಅಂಗಡಿ ಮನೆಗಳಲ್ಲಿ ಲಕ್ಷ್ಮಿಯನ್ನು ಆರಾಧಿಸಿದರೆ, ಮುಂಜಾನೆಯೆ ಅಭ್ಯಂಜನ ಮಾಡಿ ತಮ್ಮ ಪದ್ಧತಿಯಂತೆ ದೇವರನ್ನು ಪೂಜಿಸಿದರು. ನರಸಿಂಹರಾಜಪುರದಲ್ಲಿ ದೀಪಾವಳಿ 2ನೇ ದಿನ ಲಕ್ಷ್ಮಿಪೂಜೆ, ಅಂಗಡಿ ವಾಹನ ಪೂಜೆ ಹಾಗೂ ಚೀನಿಕಾಯಿ ಕಡಬನ್ನು ತಯಾರಿಸಿ ಹಬ್ಬ ಆಚರಿಸಲಾಯಿತು.
ಬಾಳೆ ಹೊನ್ನೂರಲ್ಲಿ ಮಲೆನಾಡಿನ ಸಂಪ್ರದಾಯದಂತೆ ಮುಂಡುಗ (ಹೂ) ಇಟ್ಟು ಪೂಜಿಸಿ,ಚತುದರ್ಶಿಯಂದು ಮನೆಯಲ್ಲಿ ಚೀನೀಕಾಯಿ ಕಡುಬು ತಯಾರಿಸಿ ದೇವರಿಗೆ ನೈವೇದ್ಯ ಮಾಡಿ ಮನೆಮಂದಿಯೆಲ್ಲಾ ಸ್ವೀಕರಿಸಿ ಸಂತಸಪಟ್ಟರು.ಚಿಕ್ಕಮಗಳೂರು ನಗರದ ಕೋಟೆ ಬಡಾವಣೆಯಲ್ಲಿ ನರಕ ಚತುರ್ದಶಿಯ ದಿನದಂದು ಲಕ್ಕೆ ಹಬ್ಬವನ್ನು ಆಚರಿಸಲಾಯಿತು.
ಮುಂಜಾನೆ ಎದ್ದು ಲೆಕ್ಕೆ ಸೊಪ್ಪು, ಕಡಲೆ ಸೊಪ್ಪು, ರಾಗಿ, ಭತ್ತ, ನವಣೆ, ಕಬ್ಬಿನ ಜಲ್ಲೆ ಸೇರಿದಂತೆ ಇತರೆ ಧಾನ್ಯದ ಪೈರನ್ನು ಒಟ್ಟುಗೂಡಿಸಿ ಮೆರವಣಿಗೆಯಲ್ಲಿ ತಂದು ದೇವಾಲಯದ ಮುಂದಿಟ್ಟು ಪೂಜೆ ಸಲ್ಲಿಸಿ ನಂತರ ಅದನ್ನು ತಮ್ಮ ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗಿ ಮನೆ ಬಾಗಿಲಿನ ಮುಂದಿಟ್ಟು ಪೂಜೆ ಸಲ್ಲಿಸಲಾಗುತ್ತದೆ. ಈ ಪ್ರತಿ ವರ್ಷದಂತೆ ಈ ಬಾರಿಯೂ ಗುರುವಾರದಂದು ಲಕ್ಕೆ ಹಬ್ಬವನ್ನು ಆಚರಿಸಲಾಯಿತು.ಇದೇ ಸಂದರ್ಭದಲ್ಲಿ ಮಾತನಾಡಿದ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೋಟೆ ರಂಗನಾಥ್, ಮುಂದಿನ ಪೀಳಿಗೆಗೆ ಧಾರ್ಮಿಕ ಭಾವನೆಗಳು ಉಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ದೀಪಾವಳಿ ಹಬ್ಬದಂದು ಸಾಂಪ್ರದಾಯಕ ಪೂಜೆ ಸಲ್ಲಿಸಿ ವಿಧಿ ವಿಧಾನಗಳನ್ನು ಮುಂದುವರೆಸಿಕೊಂಡು ಬರುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕೋಟೆ ಬಡಾವಣೆಯ ಮುಖಂಡರಾದ ಆನಂದ್, ಕೋಟೆ ಸೋಮಶೇಖರ್ ಹಾಗೂ ಮುಖಂಡರು ಹಾಜರಿದ್ದರು.--
ಬಾಳೆಹೊನ್ನೂರಿನಲ್ಲಿ ದೀಪಾವಳಿ ಸಡಗರಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಬಾಳೆಹೊನ್ನೂರು ಹೋಬಳಿಯಾದ್ಯಂತ ಬೆಳಕಿನ ಹಬ್ಬ ದೀಪಾವಳಿಗೆ ಗುರುವಾರ ಸಂಭ್ರಮದ ಚಾಲನೆ ದೊರೆಯಿತು.
ಗುರುವಾರ ನರಕ ಚತುದರ್ಶಿ ಅಂಗವಾಗಿ ಎಲ್ಲಾ ಮನೆಗಳಲ್ಲಿ ಮನೆಮಂದಿಯೆಲ್ಲಾ ಮುಂಜಾನೆ ಅಭ್ಯಂಜನ ಸ್ನಾನ ಮಾಡಿದರು. ಮಲೆನಾಡಿನ ಸಂಪ್ರದಾಯದಂತೆ ಮುಂಡುಗ (ಹೂ) ಹಾಕುವ ಕಾರ್ಯ ನಡೆಸಿದರು. ಮನೆಗಳ ಮುಂಭಾಗ, ತಮ್ಮ ಕೃಷಿ ಜಮೀನು, ನೀರಿನ ಮೂಲ, ದೇವಾಲಯಗಳ ಬಳಿ ಅಲಂಕರಿಸಿದ್ದ ಮುಂಡುಗವನ್ನು ಇಟ್ಟು ಪೂಜಿಸಿದರು.ಚತುದರ್ಶಿಯಂದು ಮನೆಯಲ್ಲಿ ಚೀನೀಕಾಯಿ ಕಡುಬು ತಯಾರಿಸಿ ದೇವರಿಗೆ ನೈವೇದ್ಯ ಮಾಡಿ ಮನೆಮಂದಿಯೆಲ್ಲಾ ಸ್ವೀಕರಿಸಿ ಸಂತಸಪಟ್ಟರು. ಅಭ್ಯಂಜನ ಸ್ನಾನಕ್ಕೆ ಪೂರ್ವಭಾವಿಯಾಗಿ ಬುಧವಾರ ಮನೆಗಳಲ್ಲಿ ನೀರು ತುಂಬುವ ಹಬ್ಬ, ರಾತ್ರಿ ಬೂರೆ ಹಬ್ಬ, ಸಾಂಪ್ರದಾಯಿಕವಾಗಿ ತರಕಾರಿ ಕಳ್ಳತನ ಮಾಡುವ ಹಬ್ಬ ನಡೆಯಿತು.
ಶನಿವಾರ ಸಂಜೆ ಬಳಿಕ ಪಟ್ಟಣದಲ್ಲಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟು, ಬ್ಯಾಂಕ್ ಕಚೇರಿಗಳಲ್ಲಿ ಧನಲಕ್ಷ್ಮಿ ಪೂಜೆ ನಡೆಯಿತು. ಇದಕ್ಕಾಗಿ ಅಂಗಡಿಗಳ ಮಾಲೀಕರು ಅಂಗಡಿಗಳನ್ನು ಸ್ವಚ್ಛಗೊಳಿಸಿ ತಳಿರು ತೋರಣ, ಹೂಗಳನ್ನು ಕಟ್ಟಿ ಅಲಂಕರಿಸಿದ್ದರು. ಪಟ್ಟಣದಲ್ಲಿ ಪಟಾಕಿ ವ್ಯಾಪಾರ, ಹೂ, ಹಣ್ಣು ಮಾರಾಟ ಭರದಿಂದ ನಡೆದಿದ್ದು, ಪಟ್ಟಣದ ಮುಖ್ಯರಸ್ತೆಯ ಬದಿಗಳಲ್ಲಿ ಹತ್ತಾರು ತಾತ್ಕಾಲಿಕವಾಗಿ ತರಕಾರಿ, ಹಣ್ಣು, ಹೂವಿನ ಅಂಗಡಿಗಳು ತಲೆ ಎತ್ತಿವೆ.--
ದೀಪಾವಳಿ: ಅಂಗಡಿ, ಮನೆಗಳಲ್ಲಿ ಲಕ್ಷ್ಮೀಪೂಜೆನರಸಿಂಹರಾಜಪುರ: 4 ದಿನಗಳ ಬೆಳಕಿನ ಹಬ್ಬ ದೀಪಾವಳಿ ಪ್ರಾರಂಭವಾಗಿದ್ದು ಗುರುವಾರ ಸಂಜೆ ಅಂಗಡಿ, ಮನೆಗಳಲ್ಲಿ ಶ್ರದ್ಧಾಭಕ್ತಿಯಿಂದ ಲಕ್ಷ್ಮೀಪೂಜೆ ನೆರವೇರಿಸಲಾಯಿತು.ಬುಧವಾರ ಸಂಜೆ ಹಂಡೆ ಪೂಜೆಯೊಂದಿಗೆ ದೀಪಾವಳಿ ಪ್ರಾರಂಭವಾಗಿದೆ. ಗುರುವಾರ ಬೆಳಿಗ್ಗೆ ಸ್ನಾನ, ಚೀನಿಕಾಯಿ ಕಡಬು ತಿನ್ನುವುದರೊಂದಿಗೆ ದೀಪಾವಳಿಯ 2ನೇ ದಿನದ ಹಬ್ಬ ಪ್ರಾರಂಭವಾಗಿದೆ. ವಿಶೇಷವಾಗಿ ಪಟ್ಟಣದ ಅಂಗಡಿಗಳಲ್ಲಿ ಗುರುವಾರ ಸಂಜೆ ಲಕ್ಷ್ಮೀಪೂಜೆ ಸಂಭ್ರಮದಿಂದ ನಡೆದಿದೆ. ಅಂಗಡಿಗಳಲ್ಲಿ ಬಣ್ಣ, ಬಣ್ಣದ ಸೀರಿಯಲ್ ಸೆಟ್‌ಗಳು ಝಗಮಿಸಿದ್ದು ಎಲ್ಲೆಲ್ಲೂ ಬೆಳಕಿನ ಚಿತ್ತಾರ ಮೂಡಿಸಿದೆ.
ಪಟ್ಟಣದಲ್ಲಿ ಚೆಂಡು ಹೂವಿನ ವ್ಯಾಪಾರ ಜೋರಾಗಿದ್ದು ವಾಹನಗಳಿಗೆ, ಲಕ್ಷ್ಮೀಪೂಜೆಗೆ ಹಾಗೂ ಗೋವಿಗೆ ಕಟ್ಟಲು ಜನರು ಚೆಂಡು ಹೂವಿನ ವ್ಯಾಪಾರದಲ್ಲಿ ಬ್ಯುಸಿಯಾಗಿರುವುದು ಕಂಡು ಬಂತು. ಬಲಿಪಾಡ್ಯಮಿ ಶನಿವಾರ ಬೆಳಿಗ್ಗೆ ಗೋವಿನಪೂಜೆ ನೆರವೇರಿಸಲಿದೆ. ಗ್ರಾಮೀಣ ಭಾಗದಲ್ಲಿ ಗೋವಿನ ಪೂಜೆಗಾಗಿ ಸಿದ್ಧತೆ ನಡೆಸಿದ್ದಾರೆ. ಮನೆಯಲ್ಲಿರುವ ಹಾರೆ, ಕತ್ತಿ, ಪಿಕಾಸಿ ಸೇರಿದಂತೆ ಕೃಷಿ ಸಲಕರಣೆಗಳನ್ನು ತೊಳೆದು ಪೂಜೆಗೆ ಸಿದ್ಧ ಮಾಡುತ್ತಿದ್ದಾರೆ. ಬುಧವಾರ ರಾತ್ರಿ ಮಳೆ ಸುರಿದಿದ್ದು ದೀಪಾವಳಿಗೆ ಮಂಕು ಕವಿದಿದೆ.೩೧ಬಿಹೆಚ್‌ಆರ್ ೧:ಬಾಳೆಹೊನ್ನೂರಿನ ಮನೆಯೊಂದರಲ್ಲಿ ದೀಪಾವಳಿ ನರಕ ಚತುದರ್ಶಿ ಹಿನ್ನೆಯಲ್ಲಿ ಮಲೆನಾಡಿನ ಸಂಪ್ರದಾಯದಂತೆ ಮುಂಡುಗ (ಹೂ) ಗಿಡ ಹಾಕಿರುವುದು.
೩೧ಬಿಹೆಚ್‌ಆರ್ ೨:ಬಾಳೆಹೊನ್ನೂರಿನ ಮೃತ್ಯಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಭಕ್ತರು ಮುಂಡುಗ ಇರಿಸಿರುವುದು.೩೧ಬಿಹೆಚ್‌ಆರ್ ೩: ಬಾಳೆಹೊನ್ನೂರಿನ ಮಾರಿಗುಡಿ ರಸ್ತೆಯ ಜಿಮ್ ತರಬೇತುದಾರೆ ಆಶಾ ಎನ್.ಭಟ್ ಅವರು ದೀಪಾವಳಿ ಹಬ್ಬಕ್ಕೆ ವಿಶೇಷವಾದ ರಂಗೋಲಿ ರಚಿಸಿದ್ದು ನೋಡುಗರ ಗಮನ ಸೆಳೆಯಿತು. 31 ಕೆಸಿಕೆಎಂ 3ಚಿಕ್ಕಮಗಳೂರಿನ ಕೋಟೆ ಬಡಾವಣೆಯಲ್ಲಿ ಗುರುವಾರ ಲಕ್ಕೆ ಹಬ್ಬವನ್ನು ಆಚರಿಸಲಾಯಿತು.