ಮಂಡ್ಯ ತಾಲೂಕು ಈಚಗೆರೆಯಲ್ಲಿ 27 ವರ್ಷಗಳ ಬಳಿಕ ಹಬ್ಬದ ಸಂಭ್ರಮ..!

KannadaprabhaNewsNetwork | Published : Mar 21, 2024 1:02 AM

ಸಾರಾಂಶ

ಮಂಡ್ಯ ತಾಲೂಕಿನ ಈಚಗೆರೆ ಗ್ರಾಮದಲ್ಲಿ 27 ವರ್ಷಗಳ ಬಳಿಕ ಮಾ.21ರಿಂದ ಎರಡು ದಿನಗಳ ಕಾಲ ಗ್ರಾಮದಲ್ಲಿ ಶ್ರೀಹಿರಿಯಮ್ಮ, ಶ್ರೀ ಕಾಳಿಕಾಂಬ ದೇವಿಯ ಕೊಂಡ-ಬಂಡಿ ಉತ್ಸವ ಸಂಭ್ರಮದಿಂದ ಜರುಗಲಿದೆ. ಉತ್ಸವದ ಅಂಗವಾಗಿ ಇಡೀ ಗ್ರಾಮ ವಿದ್ಯುದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ. ಮಾ.21ರ ಮುಂಜನೆಯಿಂದಲೇ ಶ್ರೀಹಿರಿಯಮ್ಮ, ಶ್ರೀಕಾಳಿಕಾಂಬ ದೇವರಿಗೆ ಪೂಜಾ ಕೈಂಕರ್ಯಗಳು ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಈಚಗೆರೆ ಗ್ರಾಮದಲ್ಲಿ 27 ವರ್ಷಗಳ ಬಳಿಕ ಮಾ.21ರಿಂದ ಎರಡು ದಿನಗಳ ಕಾಲ ಗ್ರಾಮದಲ್ಲಿ ಶ್ರೀಹಿರಿಯಮ್ಮ, ಶ್ರೀ ಕಾಳಿಕಾಂಬ ದೇವಿಯ ಕೊಂಡ-ಬಂಡಿ ಉತ್ಸವ ಸಂಭ್ರಮದಿಂದ ಜರುಗಲಿದೆ.

ಉತ್ಸವದ ಅಂಗವಾಗಿ ಇಡೀ ಗ್ರಾಮ ವಿದ್ಯುದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ. ಮಾ.21ರ ಮುಂಜನೆಯಿಂದಲೇ ಶ್ರೀಹಿರಿಯಮ್ಮ, ಶ್ರೀಕಾಳಿಕಾಂಬ ದೇವರಿಗೆ ಪೂಜಾ ಕೈಂಕರ್ಯಗಳು ನಡೆಯಲಿದೆ. ಸಂಜೆ 5 ಗಂಟೆಗೆ ಗ್ರಾಮದ ಶ್ರೀ ಹುಚ್ಚಮ್ಮ ದೇವಸ್ಥಾನದಿಂದ ದೇವರ ಗುಡ್ಡರನ್ನು ಹೊತ್ತ ಬಂಡಿಗಳು ಶ್ರೀ ಹಿರಿಯಮ್ಮ ದೇವಸ್ಥಾನದ ಸುತ್ತ ಬಂಡಿ ಉತ್ಸವ ನಡೆಯಲಿದೆ.

ಬಳಿಕ 6 ಗಂಟೆ 2 ನಿಮಿಷಕ್ಕೆ ಶ್ರೀಹಿರಿಯಮ್ಮ ದೇವಸ್ಥಾನದ ಎದುರು ಹಾಕಿರುವ ಕೊಂಡಕ್ಕೆ ಅಗ್ನಿಸ್ಪರ್ಶ ನೀಡಲಾಗುವುದು. ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8 ಗಂಟೆಗೆ ಶಿವಾರ ಉಮೇಶ್ ನೇತೃತ್ವದಲ್ಲಿ ಗೀತಗಾಯನ ಕಾರ್ಯಕ್ರಮ ಮಧ್ಯರಾತ್ರಿಯವರೆಗೂ ನಡೆಯಲಿದೆ.

ಮಾ.22 ರ ಬೆಳಗಿನ ಜವ ಗ್ರಾಮದ ಮಹಿಳೆಯರಿಂದ ಮಡೆ ಆರತಿ ಹಾಗೂ ಬಾಯಿಬೀಗ ಹರಕೆ ಹೊತ್ತ ಭಕ್ತಾದಿಗಳ ಸಮೇತ ಹೂ ಹೊಂಬಾಳೆ ನಡೆಸಿದ ದೇವರ ಪೂಜೆಗಳನ್ನು ಹೊತ್ತ ಗುಡ್ಡರು ಮುಂಜನೆ 4.30 ಗಂಟೆಗೆ ಕೊಂಡ ಹಾಯುವರು.

ಬಳಿಕ ದೇವರಿಗೆ ಮಹಾ ಮಂಗಳಾರತಿ ನಡೆಸಿ ತೀರ್ಥ ಪ್ರಸಾದ ವಿನಿಯೋಗ ನೆರವೇರಿಸಲಾಗುವುದು.

ಸಂಜೆ 7 ಗಂಟೆಗೆ ಶ್ರೀ ಹಿರಿಯಮ್ಮ, ಶ್ರೀ ಕಾಳಿಕಾಂಬ ದೇವರಿಗೆ ಹೂ ಹೊಂಬಾಳೆ ನಡೆಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಹಬ್ಬವು ಸಂಪನ್ನಗೊಳ್ಳಲಿದೆ.24ಕ್ಕೆ ಶ್ರೀರಾಮಕೃಷ್ಣ ಹೋಮಮಂಡ್ಯ: ನಗರದ ಹೊರವಲಯದ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಶ್ರೀರಾಮಕೃಷ್ಣರ 189ನೇ ಜನ್ಮದಿನೋತ್ಸವದ ಪ್ರಯುಕ್ತ ಮಾ.24ರಂದು ಶ್ರೀರಾಮಕೃಷ್ಣ ಪರಮಹಂಸರ ಜಯಂತಿ ಆಯೋಜಿಸಲಾಗಿದೆ ಎಂದು ಆಶ್ರಮದ ಕಾರ್ಯದರ್ಶಿ ಮಂಜುನಾಥ ಮಹಾರಾಜ್ ತಿಳಿಸಿದ್ದಾರೆ. ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12ರ ವರೆಗೆ ನಡೆಯಲಿರುವ ಹೋಮ ಕಾರ್ಯಕ್ರಮದ ನೇತೃತ್ವವನ್ನು ರಾಮಸಿಂಹ ಮಹಾರಾಜ್ ವಹಿಸುವರು. ವಿಶೇಷ ಆಹ್ವಾನಿತರಾಗಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ರಾಮಕೃಷ್ಣ ಆಶ್ರಮದ ಅಧ್ಯಕ್ಷ ಬಿ.ಸಿ.ಶಿವಾನಂದ, ಉದ್ಯಮಿ ಬಿ.ಟಿ.ಚಂದ್ರಶೇಖರ್ ಇತರರು ಭಾಗವಹಿಸುವರು. ಶ್ರೀವಿದ್ಯಾಗಣಪತಿ ಗಮಕ ಶಿಕ್ಷಣಾಲಯ ತಂಡದಿಂದ ಶ್ರೀವಿಷ್ಣು ಸಹಸ್ರನಾಮ ಪಾರಾಯಣ ಮತ್ತು ಭಜನೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.23ರಿಂದ ಶ್ರೀರಾಮನವಮಿ ಪಾರಾಯಣ ಸಂಕಲ್ಪ

ಮಂಡ್ಯ: ನೆಹರು ನಗರದ ಶ್ರೀರಾಮ ಭಜನ ಸಭಾ ವತಿಯಿಂದ ಮಾ.23 ರಂದು ಶ್ರೀರಾಮನವಮಿ ಅಂಗವಾಗಿ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಅಭಿಯಾನದ ಅಂಗವಾಗಿ ಪಾರಾಯಣ ಸಂಕಲ್ಪ ನಡೆಯಲಿದೆ. ವೇ.ಬ್ರ.ಅನಂತ ನಾರಾಯಣಶಾಸ್ತ್ರಿ ಮಾರ್ಗದರ್ಶನದಲ್ಲಿ ಮಾ.23 ರಂದು ಸಂಜೆ 4.30 ರಿಂದ ಪಾರಾಯಣ, ಏಪ್ರಿಲ್ 13 ರಂದು ಹೋಮ, ಬೆಳಗ್ಗೆ 10.30ಕ್ಕೆ ಪಂಚಮಿ ನಡೆಯಲಿದೆ ಎಂದು ಸಭಾ ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.

Share this article