ಮಾನ್ವಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಪಟ್ಟಣದ 10ಕ್ಕೂ ಹೆಚ್ಚು ಯುವಕರ ತಂಡಗಳು ಉತ್ಸಹದಿಂದ ಭಾಗವಹಿಸಿ ಬಣ್ಣದ ಮಡಿಕೆಯನ್ನು ಒಡೆದು ಸಂಭ್ರಮಿಸಿದರು. ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದ ಟಿಎಪಿಸಿಎಂಸಿ ಹಮಾಲರ ಸಂಘದ ಯುವಕರಿಗೆ ಬಸವನಗೌಡ ಚೀಕಲಪರ್ವಿ ಅವರು 5 ಸಾವಿರ ರು. ನಗದನ್ನು ನೀಡಿದರು. ಎರಡನೇ ಸ್ಥಾನ ಪಡೆದ ಮಾರುತಿ ನಗರದ ಶ್ರೀರಾಮಸೇನೆ ಯುವಕರ ತಂಡಕ್ಕೆ ಮೂರು ಸಾವಿರ ಅದೇ ರೀತಿ ಮೂರನೇ ಸ್ಥಾನ ಪಡೆದ ನಮಾಜಗೇರಿ ಗುಡ್ಡ ಯುವಕರ ತಂಡಕ್ಕೆ ಒಂದು ಸಾವಿರ ನಗದನ್ನು ನೀಡಿದರು.
ಈ ವೇಳೆ ಮುಖಂಡರಾದ ಬಸವನಗೌಡ ಚೀಕಲಪರ್ವಿ, ಶರಣ ಮೇದಾ, ಆಯೋಜಕರು, ಸಾವಿರಾರು ಯುವಕರು ಆಗಮಿಸಿ ಸ್ಪರ್ಧೆಗೆ ಪ್ರೋತ್ಸಾಹ ನೀಡಿದರು.