ಸಂಭ್ರಮದ ಸೇವಾಲಾಲ್‌ ಜಯಂತ್ಯುತ್ಸವ

KannadaprabhaNewsNetwork |  
Published : Feb 16, 2024, 01:47 AM IST
15ಎಚ್‌ಪಿಟಿ4- ಹೊಸಪೇಟೆಯ ಕಮಲಾಪುರದಲ್ಲಿ ಲಂಬಾಣಿ ಸಮುದಾಯದ ಆರಾಧ್ಯ ದೈವ ಸಂತ ಶ್ರೀಸೇವಾಲಾಲ್‌ ಮಹಾರಾಜರ ಜಯಂತ್ಯುತ್ಸವದ ನಿಮಿತ್ತ ಭವ್ಯ ಮೆರವಣಿಗೆ ನಡೆಯಿತು. | Kannada Prabha

ಸಾರಾಂಶ

ಜಿಲ್ಲಾಡಳಿತದ ವತಿಯಿಂದ ಸಂತ ಸೇವಾಲಾಲ್ ಮಹಾರಾಜರ 285ನೇ ಜಯಂತಿಯನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಪರ ಜಿಲ್ಲಾಧಿಕಾರಿ ಅನುರಾಧ ಅವರು ವಹಿಸಿದ್ದರು.

ಹೊಸಪೇಟೆ: ಲಂಬಾಣಿ ಸಮುದಾಯದ ಆರಾಧ್ಯ ದೈವ ಸಂತ ಸೇವಾಲಾಲ್‌ ಮಹಾರಾಜರ ಜಯಂತ್ಯುತ್ಸವ ಜಿಲ್ಲೆಯ ವಿವಿಧೆಡೆ ಗುರುವಾರ ಆಚರಿಸಲಾಯಿತು.

ಜಿಲ್ಲಾಡಳಿತದ ವತಿಯಿಂದ ಸಂತ ಸೇವಾಲಾಲ್ ಮಹಾರಾಜರ 285ನೇ ಜಯಂತಿಯನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಪರ ಜಿಲ್ಲಾಧಿಕಾರಿ ಅನುರಾಧ ಅವರು ವಹಿಸಿದ್ದರು. ಜಿಪಂ ಸಿಇಒ ಸದಾಶಿವಪ್ರಭು ಬಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿದ್ದಲಿಂಗೇಶ ರಂಗಣ್ಣವರ, ಬಂಜಾರ ಗಾಯಕ ಎಲ್. ವಾಲ್ಯಾ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂಜಾರ ಸಮಾಜದ ಮುಖಂಡರಾದ ನಾರಾಯಣ್ ನಾಯ್ಕ, ರಾಮಜೀ ನಾಯ್ಕ, ಭೀಮಾನಾಯ್ಕ, ಚಂದ್ರನಾಯ್ಕ, ತೇಜಸ್ವಿ ನಾಯ್ಕ, ನಾರಾಯಣ ನಾಯ್ಕ, ಸೋಮ್ಲಾ ನಾಯ್ಕ, ಲಾಲ್ಯ ನಾಯ್ಕ. ಪೂಜಾರಿ ಡಾಕ್ಯ ನಾಯ್ಕ, ಡಿ. ವೆಂಕಟೇಶ್‌ ನಾಯ್ಕ, ರಾಮ ನಾಯ್ಕ, ಹನುಮ ನಾಯ್ಕ, ಸೋಮ್ಲಾ ನಾಯ್ಕ, ಹೇಮ್ಲಾ ನಾಯ್ಕ ಸೇರಿದಂತೆ ಮತ್ತಿತರರಿದ್ದರು.

ಕಮಲಾಪುರದಲ್ಲಿ ಭವ್ಯ ಮೆರವಣಿಗೆ: ಕಮಲಾಪುರದ ಕೆರೆ ತಾಂಡಾದಲ್ಲಿ ಬಂಜಾರ ಜನಪದ ಸಂಸ್ಕೃತಿಯೊಂದಿಗೆ ಗುರುವಾರ ಅದ್ಧೂರಿಯಾಗಿ ಸೇವಾಲಾಲರ ಜಯಂತಿ ನಿಮಿತ್ತ ಭವ್ಯ ಮೆರವಣಿಗೆ ನಡೆಸಲಾಯಿತು. ಕೆರೆತಾಂಡಾದಲ್ಲಿರುವ ಸೇವಾಲಾಲ್ ಮಂದಿರದಲ್ಲಿ ವಿಶೇಷ ಪೂಜೆ, ಮಹಾ ಮಂಗಳಾರತಿ ಸಲ್ಲಿಸಿದ ಬಂಜಾರ ಸಮುದಾಯದ ಮುಖಂಡರು, ಸಾಮೂಹಿಕ ಪ್ರಾರ್ಥನೆ ನಡೆಸಿದರು. ವಿಶೇಷವಾಗಿ ಶೃಂಗರಿಸಿದ್ದ ಸೇವಾಲಾಲ್ ಮಹಾರಾಜರ ಭಾವಚಿತ್ರ ಭವ್ಯ ಮೆರವಣಿಗೆ ನಡೆಯಿತು. ಕಮಲಾಪುರದ ಕೋಟೆ ಆಂಜನೇಯ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಅಂಬೇಡ್ಕರ್ ವೃತ್ತ, ಶ್ರೀಕೃಷ್ಣದೇವರಾಯ ವೃತ್ತ, ಊರಮ್ಮನ ಬಯಲು, ಮನ್ಮಥಕೇರಿ, ಚೌಡಿಕೇರಿ, ಮೀನುಗಾರರ ಓಣಿ ಮೂಲಕ ಕೆರೆತಾಂಡಾಕ್ಕೆ ಸಾಗಿ ಬಂದಿತು. ಮೆರವಣಿಗೆಯಲ್ಲಿ ಮಹಿಳೆಯರು ಬಂಜಾರ ಜನಪದ ಸಂಸ್ಕೃತಿ ನೃತ್ಯಕ್ಕೆ ಹೆಜ್ಜೆ ಹಾಕಿದರು.

ಸೇವಾಲಾಲ್ ಮಹಾರಾಜರ ಪರ ಜಯಘೋಷ ಮೊಳಗಿಸಲಾಯಿತು. ಕೆರೆ ತಾಂಡಾದ ಮುಖಂಡರಾದ ಜನ್ಯಾನಾಯ್ಕ, ಹನುಮನಾಯ್ಕ, ಪೀರುನಾಯ್ಕ, ಯಮುನನಾಯ್ಕ, ಎಸ್‌.ಎಸ್.ನಾಯ್ಕ, ದುರ್ಗ್ಯಾನಾಯ್ಕ, ಗೋಲ್ಯನಾಯ್ಕ, ಮಣಿಕಂಠ ನಾಯ್ಕ, ಸೋಮಶೇಖರ್ ಮತ್ತಿತರರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ